ಗವರ್ನಮೆಂಟ್ ಟೀಚರ್ ಭಾರತೀಯ ಉಡುಗೆಯಲ್ಲಿ ಅಮೆರಿಕೆಯ ಟೀಚರ್ಸ್ ಗಳಿಗೆ ಕಲಿಸಿದರು ಕೆಲವು ಆಕ್ಟಿವಿಟೀಸ್! ವಿದೇಶಿ ಟೀಚರ್ಸ್ ಫುಲ್ ಖುಷ್!

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಟೀಚರ್ಸ್ ಗಳು ಕಲಿಸುವಿಕೆಯ ತಮ್ಮ ವಿನೂತನ ಶೈಲಿಗಳಿಂದಾಗಿ ದೇಶದೆಲ್ಲೆಡೆ ಅಷ್ಟೇ ಅಲ್ಲ ಭಾರತದ ಹೊರಗೂ ಹೆಸರು ಮಾಡಿದ್ದಾರೆ. ಅವರಲ್ಲೇ ಒಬ್ಬರಾದ ಮನು ಗುಲಾಟಿ. ಇವರು ದೆಹಲಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಕಲಿಸುವ ಅವರ ತಂತ್ರ ಬರೀ ದೇಶದವರಿಗೆ ಅಷ್ಟೇ ಅಲ್ಲ ವಿದೇಶದವರಿಗೂ ತುಂಬಾ ಹಿಡಿಸಿದೆ. ಜೊತೆಗೆ ಇವರು ಸೋಷಿಯಲ್ ಮೀಡಿಯಾದಲ್ಲಿಯೂ ತುಂಬಾ ಆಕ್ಟಿವ್ ಇರುತ್ತಾರೆ, ಮತ್ತು ದಿನನಿತ್ಯದ ಪ್ರತಿಯೊಂದು ಅಪ್ಡೇಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರ ಭೇಟಿ ಅಮೆರಿಕೆಯ ಶಿಕ್ಷಕರೊಂದಿಗೆ ಆಯಿತು. ಸದ್ಯ ಅಮೆರಿಕೆಯ ಟೀಚರ್ಸ್ ಗಳೊಂದಿಗೆ ಕಳೆದ ಕೆಲವು ಕ್ಷಣಗಳ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

ಇವರು ವಿದೇಶಿ ಟೀಚರ್ಸ್ ಗಳ ಜೊತೆಗೆ ಇಂಗ್ಲಿಷ್ ಹಾಡಿನೊಂದಿಗೆ ಡಾನ್ಸ್ ಮಾಡುತ್ತಿರುವದು ವಿಡಿಯೋದಲ್ಲಿ ನೋಡಬಹುದಾಗಿದೆ. ಮನು ಅವರು ಟ್ರೇನಿಂಗ್ ನಲ್ಲಿ ಭಾಗಿಯಾಗಿದ್ದರು. ಆ ಟ್ರೇನಿಂಗ್ ಪೀರಿಡ್ ನಲ್ಲಿ ನಡೆದ ಕೆಲವು ದೃಷ್ಯಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿ ಕೊಂಡಿದ್ದಾರೆ. ಅಮೆರಿಕೆಯ ಶಿಕ್ಷಕರಿಗೆ, ಭಾರತದ ಶಾಲೆಗಳಲ್ಲಿ ಮ್ಯೂಸಿಕ್ ನ್ನು ರಿಸೋರ್ಸ್ ರೂಪದಲ್ಲಿ ಹೇಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಅಲ್ಲಿ ತರಬೇತಿ ನೀಡಲಾಯಿತು.

ನೋಡಿ ಈ ವೀಡಿಯೊ…

 

View this post on Instagram

 

A post shared by Manu Gulati (@manugulati11)

ದೆಹಲಿಯ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ವಿಷಯ ಕಲಿಸುವ ಟೀಚರ್ ಆದ ಮನು ಗುಲಾಟಿಯವರು ಸದ್ಯ ಸಾವಿರಾರು ವಿದ್ಯಾರ್ಥಿಗಳ ಫೇವರಿಟ್ ಟೀಚರ್ ಆಗಿದ್ದಾರೆ. ದಿನನಿತ್ಯ ಮನು ಗುಲಾಟಿಯವರಿಗೆ ಸಾಕಷ್ಟು ಜನ ಟೀಚರ್ಸ್ ಮತ್ತು ಪೋಷಕರು ಇಂಟರ್ನೆಟ್ ನಲ್ಲಿ ಫಾಲೋ ಮಾಡುತ್ತಾರೆ. ಇವರು ತಮ್ಮ ಅಕೌಂಟ್ ನಿಂದ ಪ್ರತಿಸಲ ಏನಾದರೂ ಹೊಸ ಹೊಸ ವೀಡಿಯೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇವರು ಶೇರ್ ಮಾಡುವ ವಿಡಿಯೋಗಳು ಖುಷಿ ನೀಡುವ ಜೊತೆಗೆ ಒಂದು ಪಾಠವನ್ನೂ ಸಹ ನೀಡುತ್ತವೆ.