ಗಾನ ಸಾಮ್ರಾಜ್ಞಿ ಲತಾ ಮಂಗೇಶ್ಕರ್! ಸರಳಜೀವನ ಜೀವಿಸಿದರೂ ಇಷ್ಟೊಂದು ಕೋಟಿ ರೂಪಾಯಿಗಳ ಒಡತಿಯಾಗಿದ್ದರು.

92 ವರ್ಷದ ಭಾರತರತ್ನ ಗಾನ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು ನಿನ್ನೆ ಮುಂಬೈಯಲ್ಲಿ ಕೊನೆಯುಸಿರೆಳೆದರು. ಲತಾ ಮಂಗೇಶ್ಕರ್ ಅವರು ತಮ್ಮ ಕರಿಯರ್ ನ ಪ್ರಾರಂಭ 1942 ರಿಂದ ಪ್ರಾರಂಭಿಸಿದರು. ಲತಾ ದೀದಿಯವರು ಜಗತ್ತಿನ ತುಂಬಾ ಒಟ್ಟು 36 ಭಾಷೆಗಳಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ತಮ್ಮ ಸಂಗೀತ ಜೀವನದಲ್ಲಿ ಅನೇಕ ದಿಗ್ಗಜ ಗಾಯಕರ ಜೊತೆಗೆ ಹಾಡುಗಳನ್ನು ಹಾಡಿದ ಹಿರಿಮೆ ಇವರದ್ದಾಗಿದೆ. ಇವರು ಹಾಡಿದ ಮೊದಲ ಹಾಡಿಗೆ 25 ರೂಪಾಯಿ ಗೌರವಧನವನ್ನು ಪಡೆದಿದ್ದರು.

ತುಂಬಾ ಸರಳ ಜೀವನವನ್ನು ಜೀವಿಸಿದ ಲತಾ ದೀದಿಯವರ ಸಂಪತ್ತು ಕೋಟ್ಯಾವಧಿ ರೂಪಾಯಿಗಳನ್ನು ಹೊಂದಿದೆ.

Trustednetworth.com ನೀಡಿದ ರಿಪೋರ್ಟ್ ಪ್ರಕಾರ, ಲತಾ ಮಂಗೇಶ್ಕರ್ ಅವರ ಒಟ್ಟು ಸಂಪತ್ತು ಸುಮಾರು 5 ಕೋಟಿ ಅಮೆರಿಕನ್ ಡಾಲರ್ಸ್ ಇದೆ. ಅಂದರೆ ಭಾರತೀಯ ಮೌಲ್ಯದಲ್ಲಿ 368 ಕೋಟಿ ರೂಪಾಯಿಗಳಷ್ಟಿದೆ. ಗಾಯನದಿಂದ ಹಾಗೂ ಈ ಹಾಡುಗಳ ರಾಯಲ್ಟಿ ಮತ್ತು ಅವರು ಮಾಡಿದ ಬೇರೆಬೇರೆ ಹೂಡಿಕೆಯಿಂದ ಈ ಸಂಪತ್ತನ್ನು ಗಳಿಸಿದ್ದಾರೆ.

ಸೌತ್ ಮುಂಬಯಿಯ ಪೇಡರ್ ರೋಡ್ ನಲ್ಲಿ ಲತಾ ಮಂಗೇಶ್ಕರ್ ಅವರ ಪ್ರಭು ಕುಂಜ ಹೆಸರಿನ ಐಶಾರಾಮಿ ಮನೆ ಇದೆ. ಈ ಮನೆಯು ಕೋಟ್ಯಾವಧಿ ರೂಪಾಯಿಗಳನ್ನು ಮೌಲ್ಯವನ್ನು ಹೊಂದಿದೆ.

pressreader.com ನ ವೃತ್ತದ ಪ್ರಕಾರ, ಲತಾ ಅವರಿಗೆ ಕಾರುಗಳ ಕಲೆಕ್ಷನ್ ಮಾಡುವ ಹವ್ಯಾಸವಿತ್ತು. ಅವರ ಕಡೆ ಚೆವರ್ಲೆಟ್, ಬ್ಯೂಕ್ ಮತ್ತು ಕ್ರೈಸ್ಲರ್ ನಂತಹ ಅನೇಕ ದುಬಾರಿಯಾದ ಕಾರುಗಳಿವೆ. ಇಷ್ಟಲ್ಲದೆ ‘ವೀರಜಾರಾ’ ಚಿತ್ರದ ರಿಲೀಸ್ ನಂತರ ಚಲನ ಚಿತ್ರದ ನಿರ್ಮಾಪಕರಾದ ಯಶ್ ಚೋಪ್ರಾ ಅವರು ಒಂದು ಮರ್ಸಿಡಿಸ್ ಕಾರನ್ನು ಗಿಫ್ಟ್ ರೂಪದಲ್ಲಿ ನೀಡಿದ್ದರು.