ಗೂಗಲ್ ಪೇ ನಲ್ಲಿ ಹಣ ವರ್ಗಾವಣೆ ಮಾಡೋಕು ಚಾರ್ಜ್: ಗೂಗಲ್ ಪೇ ಬಳಕೆದಾರರಿಗೆ ನೀಡಲಿದೆ ಶಾಕ್

ಡಿಜಿಟಲ್ ಪೇಮೆಂಟ್ ಫ್ಲಾಟ್ ಫಾರಂ ಗಳು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಚಲಿತ ಆಗಿವೆ. ಇದೀಗ ಬ್ಯಾಂಕಿಂಗ್ ವ್ಯವಹಾರ ಅಧಿಕವಾಗುತ್ತಿದೆ. ನಗರ ಅಥವಾ ಪಟ್ಟಣಗಳು ಮಾತ್ರವಲ್ಲದೇ ಸ್ಥಳೀಯವಾಗಿ ಕೂಡಾ ಸಣ್ಣ ಪುಟ್ಟ ವ್ಯಾಪಾರಿಗಳು ಕೂಡಾ ಡಿಜಿಟಲ್ ಪೇಮೆಂಟ್ ಫ್ಲಾಟ್ ಫಾರಂ ಗಳ ಮೂಲಕ ಹಣವನ್ನು ವರ್ಗಾವಣೆ ಅಂದರೆ ಪಾವತಿ ಮತ್ತು ಸ್ವೀಕೃತಿ ಗಳನ್ನು ಮಾಡುವುದು ಸಾಮಾನ್ಯವಾಗುತ್ತಿದೆ. ಅದರಲ್ಲೂ ಕೊರೊನಾ ನಂತರದ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ನ ಬಳಕೆಯು ಕೂಡಾ ಹೆಚ್ಚಾಗುತ್ತಿದೆ. ಆದರೆ ಬಡವರು, ಕೂಲಿ ಕಾರರು ಮಾತ್ರ ಇನ್ನೂ ಡಿಜಿಟಲ್ ಪೇಮೆಂಟ್ ಗಳನ್ನು ಬಳಸುವುದು ಅಷ್ಟಾಗಿ ಕಾಣುವುದಿಲ್ಲ. ಆದರೆ ಮುಂದೊಂದು ದಿನ ಅಂತಹ ದಿನ ಬಂದರೂ ಬರಬಹುದು.

ಇಂತಹ ಡಿಜಿಟಲ್ ಪೇಮೆಂಟ್ ಗಳಲ್ಲಿ ಜನಪ್ರಿಯ ಆದಂತಹ ಗೂಗಲ್ ಪೇ ಬಳಕೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬಳಕೆಯಾಗುತ್ತಿದೆ‌. ಎಲ್ಲಾ ಡಿಜಿಟಲ್ ಆಗುತ್ತಿರುವ ಕಾರಣದಿಂದಲೇ ಗೂಗಲ್ ಪೇ ಗಳಂತಹ ಪೇಮೆಂಟ್ ಫ್ಲಾಟ್ ಫಾರಂ ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಆದರೆ ಇದೀಗ ಗೂಗಲ್ ಪೇ ಬಳಕೆದಾರರು ಇನ್ನು ಮುಂದೆ ಯಾರಿಗೇ ಆಗಲಿ ಉಚಿತವಾಗಿ ಹಣವನ್ನು ವರ್ಗಾವಣೆಯನ್ನು ಮಾಡಲಾಗುವುದಿಲ್ಲ.‌ ಇನ್ನು ಮುಂದೆ ಹಣವನ್ನು ವರ್ಗಾವಣೆ ಮಾಡಬೇಕು ಎಂದರೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಗೂಗಲ್ ಪೇ 2021 ರಿಂದ Peer to Peer ಪಾವತಿ ಸೌಲಭ್ಯವನ್ನು ನಿಲ್ಲಿಸಲಿದೆ ಎನ್ನುವ ಸುದ್ದಿಯೊಂದು ಹೊರಗೆ ಬಂದಿದೆ. ಇದರ ಬದಲಾಗಿ ಕಂಪನಿಯು ತ್ವರಿತ ಹಣ ವರ್ಗಾವಣೆ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.

ಈ ವ್ಯವಸ್ಥೆ ಬಂದ ಮೇಲೆ ಬಳಕೆದಾರರು ಹಣವನ್ನು ವರ್ಗಾವಣೆ ಮಾಡಲು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ‌. ಆದರೆ ಇನ್ನೂ ಕೂಡಾ ಕಂಪನಿ ತನ್ನ ಬಳಕೆದಾರರು ಎಷ್ಟು ಹಣವನ್ನು ಪಾವತಿ ಮಾಡಬೇಕೆನ್ನುವ ವಿಷಯವನ್ನು ಮಾತ್ರ ಇನ್ನೂ ತಿಳಿಸಿಲ್ಲ. ಪ್ರಸ್ತುತು ಗೂಗಲ್ ಪೇ ಮೊಬೈಲ್ ಮೂಲಕ ಹಾಗೂ pay.google.com ಮೂಲಕ ಹಣ ಪಾವತಿ ಮತ್ತು ಸ್ವೀಕೃತಿಗೆ ಅವಕಾಶವನ್ನು ನೀಡಿದೆ. ಅದಾಗ್ಯೂ ಈಗ ಗೂಗಲ್ ಮೂಲಕ ನೋಟೀಸ್ ಜಾರಿಗೊಳಿಸುವ ಮೂಲಕ ವೆಬ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಸಲಾಗುವುದು ಎನ್ನಲಾಗಿದೆ. ಆದ ಕಾರಣ 2021 ರ ಆರಂಭದಿಂದ ಪೇ ಗೂಗಲ್ ಅಪ್ಲಿಕೇಶನ್ ಮೂಲಕ ಬಳಕೆದಾರರು ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಗ್ರಾಹಕರು ಇದಕ್ಕಾಗಿ ಗೂಗಲ್ ಪೇ ಅಪ್ಲಿಕೇಶನ್ ನನ್ನೇ ಬಳಸೇಬೇಕು ಎನ್ನಲಾಗಿದೆ. ಅದೂ ಅಲ್ಲದೇ ಗೂಗಲ್ ಕೂಡಾ ಬಹಳ ಸ್ಪಷ್ಟವಾಗಿ ಗೂಗಲ್ ಪೇ ನ ಸಪೋರ್ಟ್ ಪೇಜನ್ನು ಕೂಡಾ ಜನವರಿಯಿಂದ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ. ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣವನ್ನು ಕಳುಹಿಸಿದರೆ ಅದು ತಲುಪಲು ಒಂದರಿಂದ ಮೂರು ದಿನದ ಕಾಲಾವಕಾಶ ಬೇಕಾಗುತ್ತದೆ. ಅದೇ ಡೆಬಿಟ್ ಕಾರ್ಡ್ ನಿಂದ ಆದರೆ ಕೂಡಲೇ ಟ್ರಾನ್ಸ್ ಫರ್ ಆಗಿ ಬಿಡುತ್ತದೆ. ಡೆಬಿಟ್ ಕಾರ್ಡ್ ನೊಂದಿಗೆ ಹಣವನ್ನು ವರ್ಗಾವಣೆ ಮಾಡಿದಾಗ 1.5% ಅಥವಾ 0.31 % ನಷ್ಟು ಶುಲ್ಕ ಪಾವತಿಸಬೇಕು. ( ಅದಕ್ಕಿಂತ ಹೆಚ್ಚಾದರೂ ಆಗಿರಬಹುದು )

ಹೀಗಿರುವಾಗ ಗೂಗಲ್ ಪೇ ಕಡೆಯಿಂದ ತ್ವರಿತ ಹಣ ವರ್ಗಾವಣೆಯಲ್ಲಿ ಹಣವನ್ನು ಸಂಗ್ರಹಿಸಬಹುದು ಎನ್ನಲಾಗಿದೆ. ಗೂಗಲ್ ನ ಕಡೆಯಿಂದ ಕಳೆದ ವಾರವಷ್ಟೇ ಕೆಲವು ಹೊಸ ಹೊಸ ವೈಶಿಷ್ಟ್ಯಗಳನ್ನು ಗ್ರಾಹಕರಿಗಾಗಿ ಪರಿಚಯವನ್ನು ಮಾಡಿಕೊಡಲಾಗಿದೆ. ಅಮೆರಿಕನ್ ಆ್ಯಂಡ್ತಾಯ್ಡ್ ಮತ್ತು ಐಎಸ್ಓ ಬಳಕೆದಾರರಿಗೆ ಈ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಹೊರ ತರಲಾಗಿದೆ. ಇದೆಲ್ಲಕ್ಕಿಂತ ವಿಶೇಷವಾದ ವಿಷಯ ಏನೆಂದರೆ ಕಂಪನಿಯು ಗೂಗಲ್ ಪೇ ನ ಲೋಗೋವನ್ನು ಕೂಡಾ ಬದಲಾವಣೆಯನ್ನು ಮಾಡಿದೆ. ಒಟ್ಟಾರೆ ಗೂಗಲ್ ಪೇ ನ ಹೊಸ ಬದಲಾವಣೆ ಬಳಕೆದಾರರು ಹೇಗೆ ಸ್ವೀಕಾರ ಮಾಡುವರು ಕಾದು ನೋಡಬೇಕಿದೆ.