Articles

Ration Card : ಮನೆಯಲ್ಲಿಯೇ ಕುಳಿತುಕೊಂಡು ಒಂದೇ ಕ್ಲಿಕ್ ನಲ್ಲಿ ಪಡಿತರ ಚೀಟಿ ಪಡೆದುಕೊಳ್ಳುವದು ಹೇಗೆ ಎಂಬುದು ತಿಳಿದುಕೊಳ್ಳಿ!

ದೇಶದ ತುಂಬೆಲ್ಲ “ವನ್ ನೇಶನ್ ವನ್ ಕಾರ್ಡ್” ಸಿಸ್ಟಮ್ ಕಾರ್ಯಾಚರಣೆ ತಂದಾಗಿನಿಂದ ಜನರ ಹತ್ತಿರ ಪಡಿತರ ಚೀಟಿ ಇರುವದು ಅತ್ಯಂತ ಮಹತ್ವದ್ದಾಗಿದೆ. ಇದು ಕೇವಲ ಅಗ್ಗದ ಪಡಿತರ ಪಡೆಯಲು ಮಾತ್ರವಲ್ಲದೆ ಗುರುತಿನ ಚೀಟಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಯೋಜನೆ ಕಾರ್ಯಾಚರಣೆಯಲ್ಲಿ ಬಂದ ನಂತರ, ಯಾವುದೇ ರಾಜ್ಯದ ವ್ಯಕ್ತಿಯು ದೇಶದ ಎಲ್ಲಿಂದಲಾದರೂ ಅಗ್ಗದ ದರದಲ್ಲಿ ಪಡಿತರವನ್ನು ಪಡೆಯಬಹುದು. ಒಬ್ಬ ವ್ಯಕ್ತಿಯ ಕಡೆಗೆ ಪಡಿತರ ಚೀಟಿ ಹೊಂದುವದು ಎಂದರೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ನಷ್ಟೇ ಮಹತ್ವದ್ದಾಗಿದೆ.

ನಿಮ್ಮ ಬಳಿ ಇದುವರೆಗೂ ಪಡಿತರ ಚೀಟಿ ಇಲ್ಲದಿದ್ದರೂ ಸಹ ಚಿಂತಿಸಬೇಡಿ. ಈಗ ನೀವು ಮನೆಯಲ್ಲಿಯೇ ಕುಳಿತುಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮೂಲಕ ಅದನ್ನು ಪಡೆಯಬಹುದು. ಇದಕ್ಕಾಗಿ ಎಲ್ಲಾ ರಾಜ್ಯಗಳು ತಮ್ಮ ಪರವಾಗಿ ವೆಬ್‌ಸೈಟ್‌ಗಳನ್ನು ರಚಿಸಿವೆ. ನೀವು ಸೇರಿರುವ ರಾಜ್ಯದ ವೆಬ್‌ಸೈಟ್‌ಗೆ ಹೋಗಿ ಮತ್ತು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ.

ಪಡಿತರ ಚೀಟಿಯಲ್ಲಿ 3 ಪ್ರಕಾರಗಳಿವೆ.

-ಬಡತನ ರೇಷೆಯ ಮೇಲೆ(APL)
-ಬಡತನ ರೇಷೆಯ ಕೆಳಗೆ (BPL)
-ಅಂತ್ಯೋದಯ ಕುಟುಂಬಗಳಿಗಾಗಿ. ಅತ್ಯಂತ ಬಡತನ ಹೊಂದಿದ ಜನರಿಗೆ ಅಂತ್ಯೋದಯ ವರ್ಗದಲ್ಲಿ ಸಮಾವೇಶ ಮಾಡಲಾಗುತ್ತದೆ. ಈ ವರ್ಗ ವ್ಯಕ್ತಿಯ ವಾರ್ಷಿಕ ಉತ್ಪನ್ನದ ಆಧಾರದ ಮೇಲೆ ನಿಶ್ಚಿತ ಮಾಡಲಾಗುತ್ತದೆ. ಇದಲ್ಲದೆ ಬೇರೆ ಬೇರೆ ಪಡಿತರ ಚೀಟಿಯ ಮೇಲೆ ಕಡಿಮೆ ದರದಲ್ಲಿ ಸಿಗುವಂತ ವಸ್ತು, ಆ ಪಡಿತರ ಚೀಟಿಗಳ ಹಾಗೆ ಬೇರೆ ಬೆರೆಯಾಗಿರುತ್ತವೆ ಮತ್ತು ಪಟ್ಟಣ ಭಾಗದ ಆಧಾರದ ಮೇಲೆ ಅಲ್ಲಿಯ ದರ ಸಹಿತ ಬೇರೆ ಯಾಗಿರುವ ಸಾಧ್ಯತೆ ಇರುತ್ತದೆ.

ಅರ್ಹತೆ ಮತ್ತು ಷರತ್ತುಗಳು

1 . ಪಡಿತರ ಚೀಟಿ ಪಡೆಯುವ ಸಲುವಾಗಿ ಭಾರತದ ನಾಗರಿಕ ನಾಗಿರುವದು ತುಂಬಾ ಅವಶ್ಯಕವಾಗಿದೆ.
2 .ವ್ಯಕ್ತಿಯು ಬೇರೆ ಯಾವುದೇ ರಾಜ್ಯದ ಪಡಿತರ ಚೀಟಿ ಹೊಂದಿರಬಾರದು.
3 .ಯಾರ ಹೆಸರಲ್ಲಿ ಪಡಿತರ ಚೀಟಿ ನಿರ್ಮಾಣ ಮಾಡುವದು ಇದೆಯೋ ಅವರ ವಯಸ್ಸು 18 ವರ್ಷ ಪೂರ್ಣವಾಗಿರಬೇಕು.
4 . 18 ವರ್ಷದ ಒಳಗಿನ ಮಕ್ಕಳ ಹೆಸರು ಅವರ ಪಾಲಕರ ಪಡಿತರ ಚೀಟಿಯಲ್ಲಿ ಸಮಾವೇಶ ಮಾಡಲಾಗುತ್ತದೆ.
5 .ಒಂದು ಕುಟುಂಬದಲ್ಲಿ ಕುಟುಂಬದ ಪ್ರಮುಖ ವ್ಯಕ್ತಿಯ ಹೆಸರಿನಲ್ಲಿ ಪಡಿತರ ಚೀಟಿ ಇರುತ್ತದೆ.
6 .ಯಾವ ಸದಸ್ಯರ ಹೆಸರು ಪಡಿತರ ಚೀಟಿಯಲ್ಲಿ ಸಮಾವೇಶ ಮಾಡಲಾಗುತ್ತದೆಯೋ ಆ ವ್ಯಕ್ತಿ ಕುಟುಂಬ ಪ್ರಮುಖನೊಂದಿಗೆ ಹತ್ತಿರದ ಸಂಬಂಧ ಹೊಂದಿರುವದು ತುಂಬಾ ಮುಖ್ಯ ವಾಗಿರುತ್ತದೆ.
7 . ಅದಕ್ಕಿಂತ ಮುಂಚೆ ಕುಟುಂಬದ ಸದಸ್ಯರ ಹೆಸರು ಈತರ ಯಾರದೇ ಪಡಿತರ ಚೀಟಿಯಲ್ಲಿ ಹೆಸರು ಇರಬಾರದು.

ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?

• ರೇಷನ್ ಕಾರ್ಡ್ ಮಾಡಲು, ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
• ತದನಂತರ Apply online for ration card ಈ ಲಿಂಕ ಮೇಲೆ ಕ್ಲಿಕ್ ಮಾಡಿ.
• ಪಡಿತರ ಚೀಟಿ ಮಾಡಲು ಆಧಾರ್ ಕಾರ್ಡ್, ಮತದಾರ ಕಾರ್ಡ್, ಪಾಸ್‌ಪೋರ್ಟ್, ಆರೋಗ್ಯ ಕಾರ್ಡ್, ಚಾಲನಾ ಪರವಾನಗಿ ಇತ್ಯಾದಿಗಳನ್ನು ಗುರುತಿನ ಚೀಟಿ ಎಂದು ಕೊಡಬಹುದು.
• ಪಡಿತರ ಚೀಟಿಯ ಸಲುವಾಗಿ ಅರ್ಜಿಯ ಶುಲ್ಕ 05 ರೂಪಾಯಿಯಿಂದ 45 ರೂಪಾಯಿಗಳ ವರೆಗೆ ಇರುತ್ತದೆ. ಅರ್ಜಿಯನ್ನು ತುಂಬಿದ ನಂತರ ಶುಲ್ಕ ಪಾವತಿಸಿ ಅರ್ಜಿಯನ್ನು ಸಬ್ ಮೀಟ್ ಮಾಡಬಹುದು.
• ಕ್ಷೇತ್ರ ಪರಿಶೀಲನೆಯ ನಂತರ, ನಿಮ್ಮ ಅರ್ಜಿಯು ಸರಿಯಾಗಿದೆ ಎಂದು ಕಂಡುಬಂದಲ್ಲಿ ನಿಮ್ಮ ಪಡಿತರ ಚೀಟಿಯನ್ನು ರಚಿಸಲಾಗುತ್ತದೆ.

‘ಈ’ ದಾಖಲೆಗಳ ಅವಶ್ಯಕತೆ ಇದೆ.

ಆಧಾರ ಕಾರ್ಡ್, ಮತದಾರ ಗುರುತಿನ ಚೀಟಿ, ಪಾಸಪೋರ್ಟ್, ಸರ್ಕಾರ ನೀಡಿದ ಯಾವುದೇ ಗುರುತಿನ ಚೀಟಿ, ಆರೋಗ್ಯ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವು ಪಡಿತರ ಚೀಟಿ ಮಾಡುವ ಸಲುವಾಗಿ ಪರಿಚಯ ಚೀಟಿ ಎಂದು ನೀವು ಕೊಡಬಹುದು. ಇದಲ್ಲದೆ ವಿಳಾಸದ ಪುರವೆಯ ಸಲುವಾಗಿ ಪ್ಯಾನ್ ಕಾರ್ಡ್, ಪಾಸಪೋರ್ಟ್ ಸೈಜ್ ನ ಫೋಟೋ, ಉತ್ಪನ್ನದ ದಾಖಲೆ, ಲೈಟ್ ಬಿಲ್, ಗ್ಯಾಸ್ ಕನೆಕ್ಷನ್ ಬುಕ್, ಟೆಲಿಫೋನ್ ಬಿಲ್, ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಪಾಸ್ ಬುಕ್, ರೆಂಟಾಲ್ ಅಗ್ರಿಮೆಂಟ್ ಈ ರೀತಿಯ ದಾಖಲೆಗಳ ಸಹ ಅಗತ್ಯವಿರುತ್ತದೆ.

ನಾಮಿನಿ ಶುಲ್ಕಗಳ ನಿಬಂಧನೆ

ಪಡಿತರ ಚೀಟಿ ಪಡೆಯುವ ಸಲುವಾಗಿ ಅರ್ಜದಾರರು ನಾಮಿನಿ ಶುಲ್ಕ ಸಹ ಪಾವತಿಸಬೇಕಾಗುತ್ತದೆ. ಇದರ ಸಲುವಾಗಿ ಅವರ ರಾಜ್ಯ ಮತ್ತು ಪ್ರದೇಶ ಮಾಹಿತಿ ಇರುವದು ತುಂಬಾ ಅವಶ್ಯಕ ವಾಗಿದೆ. ಉದಾಹರಣೆಗೆ, ದೆಹಲಿಯಲ್ಲಿ ಈ ನಾಮಿನಿ ಫೀ ಸುಮಾರು 5 ರೂಪಾಯಿಯಿಂದ 45 ರೂಪಾಯಿಗಳ ವರೆಗೆ ಇದೆ. ಅರ್ಜಿಯನ್ನು ಸಲ್ಲಿಸಿದ ನಂತರ ಅದನ್ನು ಫೀಲ್ಡ್ ವೇರಿಫಿಕೇಶನ್ ಸಲುವಾಗಿ ಕಳುಹಿಸಲಾಗುತ್ತದೆ. ಸಾಧಾರಣವಾಗಿ ಈ ಕ್ರಿಯೆ ಅರ್ಜಿ ಸಲ್ಲಿಸಿದ 30 ದಿವಸಗಳ ಒಳಗಾಗಿ ಪೂರ್ಣ ಗೊಳ್ಳುತ್ತದೆ. ತದನಂತರ ಮುಂದಿನ ಪ್ರಕ್ರಿಯೆ ಮಾಡಲಾಗುತ್ತದೆ. ಎಲ್ಲ ಡಿಟೇಲ್ಸ್ ವೇರಿಫಿಕೇಶನ್ ಮಾಡಿದ ನಂತರ ಪಡಿತರ ಚೀಟಿ ತಯಾರಾಗುತ್ತದೆ. ನೀವು ನೀಡಿದ್ದ ಯಾವುದೇ ವಿವರಗಳು ತಪ್ಪಾಗಿದೆ ಎಂದು ಕಂಡುಬಂದರೆ, ಅರ್ಜಿದಾರರ ವಿರುದ್ಧ ಕಾನೂನು ಕ್ರ#ಮ ಕೈಗೊಳ್ಳಬಹುದು.

Leave a Comment

Your email address will not be published. Required fields are marked *