ಗ್ರಾಹಕನು ವೆಟ್ರೆಸ್ ಗೆ ನೀಡಿದ ಟಿಪ್ಸ್ ನೋಡಿ ಬಂದಿತು ರೆಸ್ಟೋರೆಂಟ್ ಮ್ಯಾನೇಜರ್ ಗೆ ಕೋಪ! ಯುವತಿಗೆ ನೌಕರಿಯಿಂದ ವಜಾ…

ವಿದೇಶಗಳಲ್ಲಿ ಎಷ್ಟೋ ಯುವಕ-ಯುವತಿಯರು ತಮ್ಮ ದೈನಂದಿನ ಖರ್ಚು ಮತ್ತು ಶಾಲೆಯ ಫೀಜ್ ಹೀಗೆ ಇನ್ನಿತರ ತಮ್ಮ ಹಣದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ರೆಸ್ಟೋರೆಂಟ್ ನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುತ್ತಾರೆ. ಇದೇ ರೀತಿ ರಯಾನ್ ಬ್ರಾಂಟ್ ಹೆಸರಿನ ವಿದ್ಯಾರ್ಥಿನಿಯೊಬ್ಬಳು ರೆಸ್ಟೋರೆಂಟ್ ಒಂದರಲ್ಲಿ ವೇಟ್ರೆಸ್ ಕೆಲಸ ಮಾಡುತ್ತಿದ್ದಳು.

ಒಂದು ದಿನ ಆ ರೆಸ್ಟೋರೆಂಟಿಗೆ ಒಬ್ಬ ಶ್ರೀಮಂತ ವ್ಯಕ್ತಿಯೊಬ್ಬನು ಬಂದನು. ರಯಾನ್ ಳು ಆತನಿಗೆ ಚೆನ್ನಾಗಿ ಊಟ ಬಡಿಸಿದಳು. ಆ ವ್ಯಕ್ತಿಯು ರಯಾನಳ ಸರ್ವಿಸ್ ನಿಂದ ಖುಷಿಯಾಗಿ ಆಕೆಗೆ 3.5 ಲಕ್ಷ ರೂಪಾಯಿಗಳ ಟಿಪ್ಸ್ ನೀಡಿದನು.

ದುರದೃಷ್ಟವೆಂದರೆ ರಯಾನಳ ಈ ಆನಂದವು ಬಹಳ ಹೊತ್ತಿನವರೆಗೆ ಉಳಿಯಲಿಲ್ಲ. ಯಾಕೆಂದರೆ ಇದೇ ಕಾರಣದಿಂದ ಆಕೆ ತನ್ನ ನೌಕರಿಯನ್ನು ಕಳೆದುಕೊಳ್ಳಬೇಕಾಯಿತು. ರಯಾನಳಿಗೆ ಇಷ್ಟೊಂದು ದೊಡ್ಡ ಮೊತ್ತದ ಟಿಪ್ಸ್ ಸಿಕ್ಕಾಗ ರೆಸ್ಟೋರೆಂಟ್ ನ ಮ್ಯಾನೇಜರ್ ಆಕೆಯನ್ನು ಕರೆದು ನೀನು ತೆಗೆದುಕೊಂಡ ಟಿಪ್ಸ್ ಇತರ ವೇಟ್ರೆಸ್ ಗಳ ಜೊತೆಗೆ ಶೇರ್ ಮಾಡಲು ಹೇಳಿದನು. ರೆಸ್ಟೋರೆಂಟಿನ ಮ್ಯಾನೇಜರ್ ಹೇಳಿದ. ಮ್ಯಾನೇಜರ್ ನ ಈ ನಿರ್ಣಯದಿಂದ ರಯಾನ್ ಆಶ್ಚರ್ಯ ವ್ಯಕ್ತ ಮಾಡಿದಳು. ಕಾರಣ ಇದಕ್ಕೂ ಮೊದಲು ಮ್ಯಾನೇಜರ್ ಈ ರೀತಿ ದೊರೆತ ಟಿಪ್ಸ್ ನ್ನು ತಮ್ಮ ಸಹವರ್ತಿಗಳ ಜೊತೆಗೆ ಶೇರ್ ಮಾಡಲು ಹೇಳಿರಲಿಲ್ಲ.

ಯಾವಾಗ ರಯಾನ್ ಳಿಗೆ ಈ ಟಿಪ್ಸ್ ದೊರಕಿತು, ಆಗ ಹೋಟೆಲ್ ಮ್ಯಾನೇಜರ್ ಹೋಟೆಲ್ ಪಾಲಿಸಿ ಬಗ್ಗೆ ಹೇಳುತ್ತಾ ದೊರೆತ ಹಣವನ್ನು ಇನ್ನಿತರರ ಜೊತೆಗೆ ಶೇರ್ ಮಾಡಲು ಹೇಳಿದನು. ಆದರೆ ರಯಾನ್ ಳು ಮಾತ್ರ ಈ ವಿಷಯವನ್ನು ಟಿಪ್ಸ್ ನೀಡಿದ ಶ್ರೀಮಂತ ವ್ಯಕ್ತಿಗೆ ಹೇಳಿದಳು. ಏಕೆಂದರೆ ಆ ಶ್ರೀಮಂತ ವ್ಯಕ್ತಿಯು ರಯಾನಳ ಸರ್ವಿಸ್ ನೋಡಿ ಹಾಗೂ ಆಕೆಯ ಕಥೆಯನ್ನು ಕೇಳಿ ಈ ಟಿಪ್ಸ್ ನೀಡಿದ್ದನು.

ಈ ಒಂದು ಕಾರಣದಿಂದ ರಯಾನ್ ಳ ದೊಡ್ಡ ಹಾನಿಯಾಯಿತು. ಕಾರಣ ಆಕೆಯನ್ನು ನೌಕರಿಯಿಂದ ತೆಗೆದುಹಾಕಲಾಯಿತು. ಪ್ರಸ್ತುತ ವಿಷಯವನ್ನು ರಯಾನಳು ಟಿಪ್ಸ್ ನೀಡಿದ ಶ್ರೀಮಂತ ವ್ಯಕ್ತಿಗೆ ಹೇಳಿದ ಕಾರಣಕ್ಕಾಗಿ ತನ್ನ ನೌಕರಿ ಕಳೆದುಕೊಳ್ಳಬೇಕಾಯಿತು. ಇದರ ನಂತರ ವೆಟ್ರೆಸ್ ಗೆ ಟಿಪ್ಸ್ ನೀಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು.

ವಿಡಿಯೋ ನೋಡಿ

ರಯಾನಳು ನೀಡಿದ ಒಳ್ಳೆಯ ಸರ್ವಿಸ್ ಮತ್ತು ನಡತೆಯಿಂದ ಖುಷಿಯಾಗಿ ಆ ಶ್ರೀಮಂತ ವ್ಯಕ್ತಿಯು ಆಕೆಗೆ ಮೂರುವರೆ ಲಕ್ಷ ರೂಪಾಯಿಗಳ ಟಿಪ್ಸ್ ನೀಡುತ್ತಿರುವ ವಿಡಿಯೋ ನೀವಿಲ್ಲಿ ನೋಡಬಹುದು. ಇದನ್ನು ಕೇಳಿದ ರಯಾನಳ ಕಣ್ಣಿಂದ ಆನಂದಬಾಷ್ಪಗಳು ಹೊರಹೊಮ್ಮುತ್ತವೆ. ಟಿಪ್ಸ್ ಸ್ವರೂಪದಲ್ಲಿ ದೊರಕಿದ ಈ ಹಣದಿಂದ ಆಕೆ ತನ್ನ ಸಾಲ ಮತ್ತು ಶಾಲೆಯ ಫೀಸ್ ತುಂಬಬೇಕೆಂದು ಕೊಂಡಿದ್ದಳು. ಆದರೆ ತನ್ನ ನೌಕರಿ ಕಳೆದುಕೊಂಡಿದ್ದಕ್ಕಾಗಿ ಆಕೆಯ ಖುಷಿಯು ದುಃಖದಲ್ಲಿ ಮಾರ್ಪಾಟಾಯಿತು.