ಚಾಣಕ್ಯ ನೀತಿ; ಈ ಮೂರು ಪರಿಸ್ಥಿತಿಗಳಲ್ಲಿ ಪತಿ ತನ್ನ ಪತ್ನಿಯನ್ನು ಎಂದಿಗೂ ಎಂದೆಂದಿಗೂ ಒಂಟಿಯಾಗಿ ಬಿಡಬಾರದು!
ಸರಿಯಾದ ಮಾರ್ಗದಲ್ಲಿ ಬದುಕು ಸಾಗಿಸಲು ವ್ಯಕ್ತಿಗೆ ಚಾಣಕ್ಯರ ಅನೇಕ ಮಹತ್ವದ ಅಂಶಗಳು ಸಹಕಾರಿಯಾಗಿವೆ. ಈ ಅಂಶಗಳು ಎಂದೆಂದಿಗೂ ಮಾನವನಿಗೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಚಾಣಕ್ಯರ ನುಡಿಮುತ್ತುಗಳನ್ನು ಅಳವಡಿಸಿಕೊಂಡರೆ ಬದುಕು ಇನ್ನಷ್ಟು ಸುಖಮಯವಾಗುತ್ತದೆ.
ಜೀವನದಲ್ಲಿ ನಾವು ಏನು ಕಲಿಯಬೇಕು, ಯಾವುದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು ಎಂದು ಕೇಳಿದರೆ ಸಾವಿರ ಬಾರಿ ಯೋಚಿಸಬೇಕಾಗುತ್ತದೆ. ಪ್ರತೀ ಬಾರಿಯೂ ನಾವು ಹೊಸದನ್ನು ಕಲಿಯುತ್ತಾ, ಹೊಸ ಅಂಶವನ್ನು ಅರ್ಥ ಮಾಡಿಕೊಳ್ಳುತ್ತಲೇ ಇರುತ್ತೇವೆ. ಆದರೆ, ಚಾಣಕ್ಯ ಒಂದಷ್ಟು ನೀತಿಬೋಧನೆಗಳನ್ನು ನಮಗೆ ತೆರೆದಿಟ್ಟಿದ್ದಾನೆ. ಆತ ಅನೇಕ ನೀತಿಪಾಠಗಳನ್ನು ಹೇಳಿದ್ದಾನೆ. ಅವುಗಳಲ್ಲಿ ಎಲ್ಲವೂ ಮನುಷ್ಯನಿಗೆ ಮಹತ್ವದ ಸಂದೇಶಗಳನ್ನು ಪಾಠಗಳನ್ನು ಹೇಳಿಕೊಡುತ್ತವೆ. ಅವುಗಳಲ್ಲಿಯೇ ಒಂದು ಮಹತ್ವ ಸಂದೇಶವನ್ನು ಈ ಲೇಖನದಲ್ಲಿ ಓದಲಿದ್ದೇವೆ.
ಗಂಡ ಇಲ್ಲವೇ ಪತಿ ತನ್ನ ಹೆಂಡತಿಯನ್ನು ಈ ಮೂರು ಪರಿಸ್ಥಿತಿಯಲ್ಲಿ ಎಂದಿಗೂ ಒಂಟಿಯಾಗಿ ಬಿಡಬೇಡ ಎಂದು ಚಾಣಕ್ಯನೀತಿ ಹೇಳುತ್ತದೆ. ಆ ಮೂರು ಪರಿಸ್ಥಿತಿಗಳು ಯಾವವು? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
1. ಆರೋಗ್ಯ ಸರಿ ಇಲ್ಲದಾಗ…
ಪತ್ನಿಯ ದೈಹಿಕ ಆರೋಗ್ಯ ಹದಗೆಟ್ಟು ಹೋಗಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿರುವ ಸಮಯದಲ್ಲಿ ಪತ್ನಿಯನ್ನು ಆಕೆಯ ಪತಿ ಎಂದಿಗೂ ಒಂಟಿಯಾಗಿ ಬಿಡಬಾರದು. ಆ ಸಮಯದಲ್ಲಿ ಪತಿ ತನ್ನ ಪತ್ನಿಯ ಆರೋಗ್ಯದ ಕಾಳಜಿಯನ್ನು ಮಾಡುತ್ತ ವೈದ್ಯರ ಸಂಪರ್ಕದಲ್ಲಿದ್ದು ಆಕೆಯ ಸೇವೆಯನ್ನು ಮಾಡಬೇಕು. ಪತ್ನಿಯು ತನ್ನ ಪತಿಯ ಅನಾರೋಗ್ಯದ ಸಮಯದಲ್ಲಿ ಹೇಗೆ ತನ್ನ ಪತಿಯ ಸೇವೆ ಮಾಡುತ್ತಾಳೆ ಅದೇ ಪ್ರಕಾರ ಪತಿಯೂ ಸಹ ತನ್ನ ಪತ್ನಿಯ ಅನಾರೋಗ್ಯದ ಸಂದರ್ಭದಲ್ಲಿ ಆಕೆಯ ಸೇವೆಯನ್ನು ಮಾಡುವ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಇದರಿಂದ ಪತ್ನಿಯ ಮನದಲ್ಲಿ ತನ್ನ ಪತಿಯ ಬಗ್ಗೆ ಇನ್ನಷ್ಟು ಪ್ರೀತಿ, ವಿಶ್ವಾಸ, ಗೌರವ ಮತ್ತು ವಿನಯ ಇಮ್ಮಡಿಯಾಗುತ್ತದೆ.
2. ಪತ್ನಿ ನಿರ್ದೋಷಿಯಾಗಿರುವ ಸಂದರ್ಭದಲ್ಲಿ…
ಯಾವುದೇ ಒಂದು ಪರಿಸ್ಥಿತಿಗೆ ಅಥವಾ ಘಟನೆಗೆ ಸಂಬಂಧಿಸಿದಂತೆ ಪತ್ನಿ ಒಂದು ವೇಳೆ ನಿರ್ದೋಷಿಯಾಗಿದ್ದರೆ ಅಂಥ ಸಂದರ್ಭದಲ್ಲಿ ಪತಿಯಾದವನು ಆಕೆಗೆ ಒಂಟಿಯಾಗಿ ಬಿಡದೆ ಆಕೆಯ ಸಾತ್ ನೀಡುತ್ತಾ ಆಕೆಯ ಜೊತೆಗೆ ನಿಲ್ಲಲೇಬೇಕು. ಅಂಥ ಸಂದರ್ಭದಲ್ಲಿ ಆಕೆಯ ವಿರುದ್ಧ ಯಾರೇ ಇದ್ದರೂ ಅಥವಾ ತನ್ನ ಮನೆಯವರೇ ಇದ್ದರೂ ನಿಸ್ಸಂಕೋಚವಾಗಿ, ನಿರ್ಭೀತವಾಗಿ ಪತ್ನಿಗೆ ಬೆಂಬಲ ನೀಡುತ್ತಿರಬೇಕು. ಹಾಗೂ ಆಕೆ ನಿರ್ದೋಷಿಯಾಗಿದ್ದಾಳೆ ಎಂದು ಎತ್ತಿ ತೋರಿಸುವ ಪ್ರಯತ್ನ ಮಾಡಬೇಕು.
3. ಎಂತಹ ಕಠಿಣ ಪರಿಸ್ಥಿತಿ ಬಂದರೂ ಪರಪುರುಷನ ಜೊತೆಗೆ ಒಂಟಿಯಾಗಿ ಬಿಡಬಾರದು…
ಚಾಣಕ್ಯ ನೀತಿಯ ಪ್ರಕಾರ ಪತಿಗೆ ಎಂತಹದೇ ಕಠಿಣ ಪರಿಸ್ಥಿತಿ ಬಂದರೂ ಆತ ತನ್ನ ಪತ್ನಿಯನ್ನು ಎಂದಿಗೂ ಎಂದೆಂದಿಗೂ ಪರಪುರುಷನ ಜೊತೆಯಲ್ಲಿ ಬಿಡಬಾರದು. ಇನ್ನು ಅವರು ತಮ್ಮ ಸಂಬಂಧಿಕರೇ ಆಗಿರಲಿ ಎಷ್ಟೇ ಸಮೀಪದ ರಿಲೇಟಿವ್ಸ್ ಆಗಿರಲಿ ಆದರೂ ಯಾರ ಹತ್ತಿರವೂ ಆಕೆಯನ್ನು ಬಿಡಬಾರದು. ಇದಕ್ಕೆ ಕಾರಣ ಸ್ತ್ರೀ ಪುರುಷ ಇಬ್ಬರೇ ಇದ್ದರೆ ನಿಶ್ಚಿತವಾಗಿಯೂ ಕಾಮ ಅಂಥಲ್ಲಿ ತನ್ನ ಪ್ರಭಾವವನ್ನು ತೋರಿಸಿಯೇ ಬಿಡುತ್ತದೆ.
ಅದಕ್ಕಾಗಿಯೇ ಚಾಣಕ್ಯ ನೀತಿಯ ಪ್ರಕಾರ, ಪತಿ ತನ್ನ ಪತ್ನಿಯನ್ನು ಈ ಮೂರು ಪರಿಸ್ಥಿಯಲ್ಲಿ ಎಂದಿಗೂ ಒಂಟಿಯಾಗಿ ಬಿಡಬಾರದು ಎಂದು ಹೇಳಲಾಗುತ್ತದೆ.