Articles

VIDEO : ಇನ್ನರ್ದ ಸೆಕೆಂಡ್ ಲೇಟಾಗಿದ್ದರೂ ಆ ಮಹಿಳೆ ಮರದಡಿ ಅಪ್ಪಚ್ಚಿಯಾಗುತ್ತಿದ್ದಳು!

ಕೆಲವರ ಅದೃಷ್ಟವೇ ಹಾಗಿರುತ್ತದೆ, ಅರ್ದರ್ದ ಸೆಕೆಂಡ್ ಅವಧಿಯಲ್ಲಿ ಪ್ರಾಣ ಉಳಿಸಿಕೊಂಡವರಿದ್ದಾರೆ.ತೌಕ್ಟೆ ಚಂಡಮಾರುತ ದೇಶಾದ್ಯಂತ ಹಲವು ಕಡೆ ಸಾಕಷ್ಟು ಹಾನಿ ಮಾಡಿದೆ. ಹಾಗೆಯೇ ಮುಂಬೈನಲ್ಲೂ ಇದರ ಅಟಾಟೋಪ ಮುಂದುವರೆದಿತ್ತು. ಇಂಥ ಸಮಯದಲ್ಲಿಯೇ ದಾರಿಯಲ್ಲಿ ನಡೆದುಹೋಗುತ್ತಿದ್ದ ಈ ಮಹಿಳೆ ಸಾ’ವಿ’ನ ಬಾಗಿಲಿನ ತೀರ ಹತ್ತಿರಕ್ಕೆ ಹೋಗಿ ಮರಳಿ ಬಂದಿದ್ದಾರೆ. ಆ ವಿಡಿಯೊ ಕೆಳಗಿದೆ.

ಮುಂಬೈನ್ ಬೀದಿಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇದು. ವಿಡಿಯೊದಲ್ಲಿ ಮಹಿಳೆ ಮುಂಬೈನ ಮಿಖ್ರೋಲಿ ಪ್ರದೇಶದಲ್ಲಿ ನಡೆದು ಹೋಗುತ್ತಿರುತ್ತಾಳೆ. ಕೆಲವು ವಾಹನಗಳು ಅಲ್ಲಿ ಅಡ್ಡಾಡುತ್ತಿದ್ದವು. ಹೀಗಿರುವಾಗ ರಸ್ತೆ ಬದಿಯ ಮರ ಬೀಳತೊಡಗುತ್ತದೆ. ತಕ್ಷಣ ಎಚ್ಚೆತ್ತ ಮಹಿಳೆ ವೇಗವಾಗಿ ಹಿಂದೆ ಸರಿಯುತ್ತಾಳೆ.

ಇನ್ನರ್ದ ಸೆಕೆಂಡ್ ತಡ ಆಗಿದ್ದರು ಆಕೆ ಅ’ಪ್ಪ‍’ಚ್ಚಿಯಾಗಿ ಹೋಗುತ್ತಿದ್ದಳು. ಪಟ ಅಂತ ಹಿಂದೆ ಸರಿದು ಓಡತೋಡಗುತ್ತಾಳೆ, ಆಕೆ ನಿಂತ ಹಾಗೂ ಸ್ವಲ್ಪ ಹಿಂದಕ್ಕೆ ಜಾಗದ ಮೇಲೆ ಬೃಹತ್ ಮರ ಬೀಳುತ್ತದೆ. ಅದರಡಿಗೆ ಸಿಲುಕಿದ್ದರೆ ಮನುಷ್ಯರಲ್ಲ, ವಾಹನಗಳು ಕೂಡ ಅ’ಪ್ಪ’ಚ್ಚಿಯಾಗುತ್ತಿದ್ದವು, ಅಷ್ಟೊಂದು ದೊಡ್ಡ ಮರ ಅದು.

ಆ ಮಹಿಳೆಯ ಹಾಗೆಯೇ ಒಬ್ಬ ಬೈಕ್ ನವನು ಕೂಡ ಜಸ್ಟ್ ಪಾಸ್ ಆದನು, ಆತನು ಅದೃಷ್ಟಶಾಲಿಯೇ. ಕೆಲವರಿರುತ್ತಾರೆ, ಬಚ್ಚಲಲ್ಲಿ ಜಾರಿ ಬಿದ್ದು ಪ್ರಾ”ಣ ಕಳೆದುಕೊಳ್ಳುತ್ತಾರೆ, ಇನ್ನು ಕೆಲವರು ಹೀಗೆ ಜಸ್ಟ್ ಮಿಸ್ ಆಗುತ್ತಾರೆ. ಆ ವಿಡಿಯೊ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಕೆಳಗಿದೆ ನೋಡಿ.

ಮರ ಬಿದ್ದ ನಂತರ ಸಾಕಷ್ಟು ಸಮಯದವರೆಗೆ ಆ ರಸ್ತೆ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮರ ಕತ್ತರಿಸಿ ತುಂಡು ತುಂಡು ಮಾಡಿ ಸಾಗಿಸಿದ ಮೇಲೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
-Team Infotrend

Leave a Comment

Your email address will not be published. Required fields are marked *