Articles

VIDEO : ಡ್ರೋಣ್ ಕ್ಯಾಮೆರಾ ಕಣ್ಣಲ್ಲಿ ಮುರುಡೇಶ್ವರ ಶ್ರೀಕ್ಷೇತ್ರ

ರಾಜ್ಯದ ಪ್ರಸಿದ್ಧ ಕ್ಷೇತ್ರಗಳಲ್ಲಿ ಮುರುಡೇಶ್ವರ ಕೂಡ ಒಂದು, ಕಡಲಿನ ತೀರಪ್ರದೇಶದಲ್ಲಿರುವ ಶ್ರೀಕ್ಷೇತ್ರ ಭಕ್ತಿ ಭಾವಗಳ ತಾಣ ಮಾತ್ರವಲ್ಲದೇ ಪ್ರವಾಸಿಗರ ನೆಚ್ಚಿನ ತಾಣ ಕೂಡ ಹೌದು. ಇಲ್ಲಿನ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು. ಇಲ್ಲಿನ ಅತಿ ಎತ್ತರದ ಶಿವನ ಪ್ರತಿಮೆ – ಅತಿ ಎತ್ತರದ ಗೋಪುರ ಕಣ್ಮನ ಸೆಳೆಯುತ್ತವೆ. ಮುರುಡೇಶ್ವರದ ಬಗ್ಗೆ ಕೆಳಗೊಂದು ವಿಡಿಯೊ ಇದೆ, ಬಹುಶ ಮುರುಡೇಶ್ವರ ಕ್ಷೇತ್ರದ ಬಗ್ಗೆ ಆ ವಿಡಿಯೊಕ್ಕಿಂತ ಸುಂದರವಾದ ವಿಡಿಯೊ ಮತ್ತೊಂದಿಲ್ಲ.

ಮುರುಡೇಶ್ವರ ಸದಾ ಪ್ರವಾಸಿಗರಿಂದ ಗಿಜಿಗುಡುವ ಒಂದು ತಾಣ, ಆದರೆ ಕಳೆದ ಒಂದು ವರ್ಷದಿಂದ ಕೊರೋನ ಕಾರಣಕ್ಕೆ ಲಾಕ್ ಡೌನ್ ಉಂಟಾಗಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಇವೆಲ್ಲ ಸಂಕಷ್ಟಗಳಿಂದ ಅಲ್ಲಿನ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದ್ದರು.

ಕಳೆದ ತಿಂಗಳ ತೌಕ್ತೆ ಚಂಡಮಾರುತ ಕ್ಷೇತ್ರದ ಸೌಂದರ್ಯವನ್ನು ಸ್ವಲ್ಪ ಮಟ್ಟಿಗೆ ಹದಗೆಡಿಸಿತ್ತು. ಅಲ್ಲಿನ ವ್ಯಾಪಾರಿಗಳಿಗೂ ತುಂಬಾ ನಷ್ಟ ಮಾಡಿತ್ತು. ಈ ಸುಂದರ ಕ್ಷೇತ್ರದ ಬಗ್ಗೆ ಶರತ್ ಚಂದ್ರ ಎಂಬುವವರು ಡ್ರೋನ್ ಮೂಲಕ ಚಿತ್ರೀಕರಿಸಿದ ಅದ್ಭುತ ಏರಿಯಲ್ ವಿವ್ ಕೆಳಗಿದೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅವರು ವಿಡಿಯೊ ಅಪ್ ಲೋಡ್ ಮಾಡಿದ್ದು, ಇದುವರೆಗೆ ಆರೂವರೆ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ಅಚ್ಚುಕಟ್ಟಾದ ಈ ವಿಡಿಯೊದಲ್ಲಿ ಮುರುಡೇಶ್ವರದ ಅತಿ ಎತ್ತರದ ಶಿವನ ಪ್ರತಿಮೆ, ಅತಿ ಎತ್ತರದ ಗೋಪುರ, ಇತರೆ ಜಲಕ್ರೀಡೆಗಳನ್ನು ಕೂಡ ಅಚ್ಚುಕಟ್ಟಾಗಿ ಕವರ್ ಮಾಡಿದ್ದಾರೆ. ಆ ವಿಡಿಯೊ ಮೇಲಿದೆ ನೋಡಿ, ಕಾಮೆಂಟ್ ಮಾಡಿ…

-Team Infotrend

Leave a Comment

Your email address will not be published. Required fields are marked *