ಚಿತ್ರ Zoom ಮಾಡಿ ನೋಡಬಹುದು; ಈ ವೈರಲ್ ಚಿತ್ರದಲ್ಲಿ ಪ್ರಾಣಿಗಳೇಷ್ಟು ಕಾಣುತ್ತಿವೆ ಹೇಳಲು ಸಾಧ್ಯವೇ?

ಸೋಶಿಯಲ್ ಮೀಡಿಯಾದಲ್ಲಿ ಒಪ್ಟಿಕಲ್ ಇಲ್ಲುಷನ್ ನ ಹೊಸದಾದ ಚಿತ್ರವೊಂದು ತುಂಬಾನೇ ವೈರಲ್ ಆಗುತ್ತಿದೆ. ಈ ಚಿತ್ರ ನೇಟಿಜನ್ಸ್ ಗಳ ತಲೆ ತಿಂದು ಚಟ್ನಿ ಮಾಡುತ್ತಿದೆ. ಕಾರಣ ಈ ರೀತಿಯ ಚಿತ್ರಗಳು ಸಹಜವಾಗಿ ನೋಡಲು ಬೇರೆಯಾಗಿ ಕಾಣಿಸುತ್ತವೆ, ಮತ್ತು ಸೂಕ್ಷ್ಮದೃಷ್ಟಿಯನ್ನಿಟ್ಟು ತೀಕ್ಷ್ಣವಾಗಿ ನೋಡಿದಾಗೊಂದು ಬೇರೆಯೇ ಕಾಣಿಸುತ್ತದೆ.

ಈಗ ನೋಡುವ ಇಲ್ಲಿಯ ಚಿತ್ರದಲ್ಲಿ ಬರೀ ಮರದ ಕಾಂಡ ಮತ್ತು ರೆಂಬೆಗಳು ರೇಖಾಟನೆ ಮಾಡಿದಹಾಗೆ ಕಾಣಿಸುತ್ತಿದೆ. ಆದರೆ ಈ ಚಿತ್ರದಲ್ಲಿ ಅನೇಕ ಪ್ರಾಣಿಗಳು ಅಡಗಿವೆ. ಹೀಗಾಗಿ ನೇಟಿಜನ್ಸ್ ಗಳು ಈ ಚಿತ್ರದಲ್ಲಿ ಅಡಗಿರುವ ಎಲ್ಲ ಪ್ರಾಣಿಗಳನ್ನು ಹುಡುಕಲು ತುಂಬಾ ಯತ್ನಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಈ ಚಿತ್ರವು ಇಂಟರ್ನೆಟ್ ನಲ್ಲಿ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಸಹಜವಾಗಿ ನೋಡಲು ಚಿತ್ರದಲ್ಲಿ ಮರ ಮತ್ತು ರೆಂಬೆಗಳು ಇರುವ ಹಾಗೆ ಕಂಡುಬರುತ್ತದೆ. ಹೇಗೆ ಹೇಗೆ ನೀವು ಗಮನವಿಟ್ಟು ಸೂಕ್ಷ್ಮವಾಗಿ ನೋಡಲು ಪ್ರಾರಂಭಿಸುತ್ತೀರಿ ಆಗ ಗೊತ್ತಾಗುತ್ತದೆ ಚಿತ್ರದಲ್ಲಿ ಅನೇಕ ಪ್ರಾಣಿಗಳು ಇವೆಯೆಂದು.

ಈ ಚಿತ್ರದಲ್ಲಿ ನೀವು ಎಷ್ಟೊಂದು ಪ್ರಾಣಿಗಳಿಗೆ ಶೋಧಿಸಬಲ್ಲಿರಿ?

ಪ್ರಸ್ತುತ ಚಿತ್ರದಲ್ಲಿ ಅಡಗಿರುವ ಎಷ್ಟು ಪ್ರಾಣಿಗಳನ್ನು ನೀವು ಶೋಧಿಸ ಬಲ್ಲಿರಿ ಟ್ರೈ ಮಾಡಿ ನೋಡೋಣ.

ಚಿತ್ರಲ್ಲಿ ಅಡಗಿದ ಒಟ್ಟು ಪ್ರಾಣಿಗಳು ಎಷ್ಟು?

ಈ ವೈರಲ್ ಚಿತ್ರದಲ್ಲಿ ಒಟ್ಟು 8 ಪ್ರಾಣಿಗಳು ಅಡಗಿವೆ. ಅವುಗಳಲ್ಲಿ ಮೂರು ಎಡಭಾಗಕ್ಕೆ ಇದ್ದರೆ, ಎರಡು ಮಧ್ಯಭಾಗದಲ್ಲಿದ್ದು ಇನ್ನೂ ಮೂರು ಬಲಭಾಗದಲ್ಲಿವೆ.

ಈ ಚಿತ್ರ ನೋಡಿ ಗೊತ್ತಾಗುತ್ತೆ.