‘ಜಂಗಲ್ ಸಫಾರಿ’ ಮಾಡುತ್ತಿರುವ ಪ್ರವಾಸಿ; ಇದ್ದಕ್ಕಿದ್ದಂತೆ ಜೀಪಿನೊಳಗೆ ನುಗ್ಗಿ ಬಂದ ಚಿರತೆ! ಮುಂದೇನಾಯಿತು ನೋಡಿ ಈ ವೈರಲ್ Video!

ಜನರಿಗೆ ಭಿನ್ನ ವಿಭಿನ್ನವಾದ ಹವ್ಯಾಸ ಗಳು ಇರುವುದು ಸಹಜ. ಕೆಲವರಿಗೆ ಓದುವುದು, ಬರೆಯುವುದು, ಟಿವಿ ನೋಡೋದು ಹೀಗೆ ಮಾಮೂಲಿ ಅನಿಸೋ ಹವ್ಯಾಸಗಳು ಇದ್ರೆ ಮತ್ತೆ ಕೆಲವರಿಗೆ ಹೊಸ ಹೊಸ ಸ್ಥಳಗಳಿಗೆ ಹೋಗೋದು, ಪ್ರವಾಸ ಮಾಡೋದು, ವಿದೇಶ ಗಳನ್ನು ಸುತ್ತಿ ಬರೋದು ಹೀಗೆ ಅದೆಷ್ಟೋ ರೀತಿಯ ಹವ್ಯಾಸಗಳು ಇರುತ್ತೆ. ಇನ್ನೂ ಕೆಲವರಿಗೆ ಕಾಡಿನಲ್ಲಿ ಸುತ್ತಾಡುವ, ಟ್ರೆಕ್ಕಿಂಗ್ ಮಾಡುವ ರಮ್ಯವಾದ ಅರಣ್ಯದ ವಾತಾವರಣದಲ್ಲಿ, ಮಾಲಿನ್ಯದಿಂದ ದೂರವಾದ ಪ್ರದೇಶದಲ್ಲಿ, ಯಾವುದೇ ಟ್ರಾಫಿಕ್, ಸೌಂಡ್ಸ್ ಅನ್ನೋದಿಲ್ಲ ಇಲ್ಲದ ಪ್ರಕೃತಿ ಯಲ್ಲಿ ಪ್ರಾಣಿ ಪಕ್ಷಿಗಳ ಚಲನ ವಲನ ಹಾಗೂ ಅವುಗಳ ಧ್ವನಿ ಕೇಳುತ್ತಾ ಕಳೆಯೋದಿಕ್ಕೆ ಇಷ್ಟ ಪಡ್ತಾರೆ. ಹೀಗೆ ಅರಣ್ಯಗಳಲ್ಲಿ ಸಮಯ ಕಳೆಯೋಕೆ ಇಷ್ಟ ಪಡೋರಿಗೆ ಸಿಗೋ ಅನುಭವ ಗಳು ಕೂಡಾ ಅದ್ಭುತ ಅಂತಾನೇ ಹೇಳಬಹುದು.

ಆದರೆ ಪ್ರತಿ ಸಾರಿ ಕೂಡಾ ಅರಣ್ಯದಲ್ಲಿ ಒಳ್ಳೆ ಅನುಭವ ಸಿಗುತ್ತೆ ಅನ್ನೋ ಗ್ಯಾರಂಟಿ ಅಂತೂ ಇಲ್ಲ.‌. ಕೆಲವೊಂದ್ಸಲ ಈ ಹವ್ಯಾಸಗಳು ನಮ‌್ಮ ಪ್ರಾಣಕ್ಕೆ ಕು ತ್ತು ತಂದರೂ ತರಬಹುದು. ಇಂತಹುದೇ ಒಂದು ಘಟನೆ ಒಮ್ಮೆ ತಾಂಜೇನಿಯಾದಲ್ಲಿ ನಡೆದಿತ್ತು. ಹೌದು ಒಂದಷ್ಟು ಜನ ಪ್ರವಾಸಿಗರು ತಾಂಜೇನಿಯಾದ ಗೋಲ್ ಕೋಪ್ಸ್ ಸೆರೆಂಜಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳನ್ನು ನೋಡವುದಕ್ಕೆ ಅಂತ ಹೋಗಿದ್ರು. ಎಲ್ಲರೂ ಒಂದು ಅರಣ್ಯ ಇಲಾಖೆಯ ಜೀಪ್ ನಲ್ಲಿ ಸಫಾರಿ ಹೊರಟಿದ್ರು, ಆ ಜೀಪ್ ನಲ್ಲಿ ಇದ್ದ ಪ್ರವಾಸಿಗರಲ್ಲಿ ಒಬ್ರಿಗೆ ಆ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಫೋಟೋ ತೆಗೆಯೋ ಆಸೆ, ಎಲ್ಲಿ ಪ್ರಾಣಿ ಪಕ್ಷಿ ಕಾಣಿಸಿದ್ರು ತಕ್ಷಣ ಫೋಟೋ ತೆಗೆಯೋ ಉತ್ಸಾಹ ಅವರಲ್ಲಿ ಮೂಡ್ತಾ ಇತ್ತು.

ಹಾಗೆ ಅವರು ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡು ತಮ್ಮ ಸಫಾರಿಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾ ಇದ್ದರು. ಉಳಿದ ಪ್ರವಾಸಿಗರು ಕೂಡಾ ಜೀಪ್ ನಲ್ಲಿ ಕುಳಿತು ಸುತ್ತ ಮುತ್ತಲಿನ ಪರಿಸರವನ್ನು ನೋಡ್ತಾ ಪ್ರಾಣಿ ಪಕ್ಷಿಗಳನ್ನು ನೋಡ್ತಾ ಒಂದೊಳ್ಳೆ ಮೂಡಲ್ಲಿ ಇದ್ರು. ಆಗ ನಡೀತು ಯಾರೂ ಕೂಡಾ ಊಹೆ ಮಾಡದೇ ಇರೋ ಘಟನೆ. ಸಫಾರಿ ಆದ್ರಿಂದ ವೆಹಿಕಲ್ ನಿಧಾನವಾಗಿ ಮೂವ್ ಆಗ್ತಿತ್ತು. ಯಾಕಂದ್ರೆ ಮಾಮೂಲಿ ವೇಗದಲ್ಲಿ ಹೋದ್ರೆ ಯಾವುದೇ ಪ್ರಾಣಿಗಳನ್ನು ಕೂಡಾ ನೋಡೋಕೆ ಸಾಧ್ಯ ಆಗಲ್ಲ, ಸಫಾರಿಗೆ ಹೋಗಿದ್ದು ವ್ಯರ್ಥ ಆಗ್ಬಿಡುತ್ತೆ ಅಷ್ಟೇ. ಅದಕ್ಕೆ ಜೀಪ್ ನಿಧಾನಕ್ಕೆ ಹೋಗ್ತಾ ಇತ್ತು.

ಹೀಗೆ ಹೋಗುತ್ತಿದ್ದ ಜೀಪಿನಿಂದ ಆ ವ್ಯಕ್ತಿ ಫೋಟೋ ಗಳನ್ನು ತೆಗೆಯಬೇಕಾದರೆ ಅದನ್ನು ಒಂದು ಚಿರತೆ ನೋಡಿದೆ. ಅದು ಕೂಡಾ ನಿಧಾನವಾದ ಹೆಜ್ಜೆಗಳನ್ನು ಹಾಕುತ್ತಾ ಸಫಾರಿ ವಾಹನದ ಬಳಿ ಬಂದಿದೆ. ಅದು ಬರೋ ವೇಳೆಗಾಗಲೇ ಜೀಪಲ್ಲಿದ್ದ ಪ್ರವಾಸಿಗರಿಗೆ ಭ ಯ ಶುರುವಾಗಿದೆ. ಚಿರತೆ ಅಷ್ಟಕ್ಕೇ ಸುಮ್ಮನಾಗಿಲ್ಲ, ಭಯ ಪಟ್ಟವರ ಮೇಲೆ ಹಾವು ಎಸೆದ ಹಾಗೆ ಅದು ಸೀದಾ ಜೀಪಿನೊಳಕ್ಕೆ ಏರಿದೆ. ಪಾಪ ತನ್ನ ಬೇಟೆಯನ್ನು ಹುಡುಕೋ ಪ್ರಯತ್ನ ಅದ್ರದ್ದು, ಒಳಗಿದ್ದವರಿಗೆ ಯಾರು ಅದ್ರ ಆಹಾರ ಆಗಿ ಬಿಡ್ತೀವೋ ಅನ್ನೋ ಆತಂಕ ಅವರದ್ದು. ಎಲ್ಲರಿಗೂ ಕೂಡಾ ಒಂದು ಕ್ಷಣ ಪ್ರಾಣ ಕ್ಕೆ ಕು ತ್ತು ಬಂದ ಅನುಭವ.

ಆಗ ಅವರ ಜೊತೆಗಿದ್ದ ಟೂರಿಸ್ಟ್ ಗೈಡ್ ಅವರಿಗೆ ಎಲ್ಲರೂ ನಿಧಾನವಾಗಿ ನಿಮ್ಮ ಉಸಿರನ್ನು ತೆಗೆದುಕೊಳ್ಳಿ, ಆಗ ಚಿರತೆಗೆ ನಿಮ್ಮಿಂದ ಏನೂ ತೊಂದ್ರೆ ಇಲ್ಲ ಅಂತ ಅರ್ಥ ಆಗುತ್ತೆ, ಅದು ನಮಗೆ ಯಾವುದೇ ಅಪಾಯವನ್ನು ಕೂಡಾ ಮಾಡಲ್ಲ ಅಂತ ಸೂಚನೆಯನ್ನು ನೀಡಿದ್ದಾರೆ. ಜೀಪಲಿದ್ದ ಪ್ರವಾಸಿಗರು ಹಾಗೇ ಅದನ್ನು ಅನುಸರಿದಾಗ ಸುಮಾರು ಒಂದು ಹತ್ತು ಸೆಕೆಂಡ್ ಗಳ ನಂತರ ಚಿರತೆ ಯಾರಿಗೂ ಏನೂ ಮಾಡ್ದೇ ಜೀಪ್ ನಿಂದ ಇಳಿದು ಹೋಗಿದೆ. ನಿಜಕ್ಕೂ ಆ ಹತ್ತು ಸೆಕೆಂಡ್ ಗಳ ಕಾಲ ಜೀಪಲ್ಲಿದ್ದ ಪ್ರವಾಸಿಗರಿಗೆ ಆದ ಅನುಭವ ಹೇಗಿರಬಹುದು ಅಂತ ನಾವು ಊಹಿಸೋದು ಕೂಡಾ ಕಷ್ಟ ಆಗಬಹುದು.