ಜಗತ್ತಿನ ಅಂತ್ಯಂತ ದುಬಾರಿ ಕಾರಿನ ಒಡೆಯನಾದ ಫುಟ್ಬಾಲ್ ಸ್ಟಾರ್ ರೋನಾಲ್ಡೊ! ಕಾರಿನ ಬೆಲೆ ಕೇಳಿದರೆ ತಲೆ ತಿರುಗುತ್ತೆ!
ಜಗತ್ತಿನಲ್ಲಿ ಆಡುವ ಆಟಗಳಲ್ಲಿ ಫುಟ್ಬಾಲ ಎಲ್ಲಕ್ಕೂ ಪ್ರಸಿದ್ಧವಾದ ಆಟವಾಗಿದೆ. ಈ ಫುಟ್ಬಾಲ್ ನಲ್ಲಿ ತನ್ನ ಆಟದ ಬಲದಿಂದ ಪ್ರಸಿದ್ಧಿಯ ಶಿಖರದ ಮೇಲಿರುವ ಪೋರ್ತುಗೀಜಿನ ಆಟಗಾರನಾದ ರೋನಾಲ್ಡೊ ಕ್ರಿಸ್ಟಿಯಾನೋ ಈಗ ಹೊಸ ಸುದ್ದಿಯೊಂದನ್ನು ಮಾಡಿದ್ದಾರೆ.
ರೋನಾಲ್ಡೊ ಅವರು ಜಗತ್ತಿನ ಎಲ್ಲಕ್ಕೂ ದುಬಾರಿಯಾದ ಕಾರಿನ ಮಾಲೀಕರಾಗಿದ್ದಾರೆ. ಬುಗಾತಿ ಕಂಪನಿಯ ಈ ಕಾರಿನ ಹೆಸರು La Voiture Noire ಇದ್ದು ಇದರ ಬೆಲೆ 8.5 ಮಿಲಿಯನ್ ಯುರೋ ಅಂದರೆ ಭಾರತೀಯ ಚಲಾವಣೆಯಲ್ಲಿ ಸುಮಾರು 75 ಕೋಟಿ ರೂಪಾಯಿಗಳಷ್ಟು ಆಗುತ್ತದೆ.
ತನ್ನ ದೇಶಕ್ಕಾಗಿ ಆಡುವದರ ಜೊತೆಗೆ ‘ಇಟಾಲಿಯನ್ ಲೀಗ್ ಸೆರಿ ಎ’ ನಲ್ಲಿ ಯುವೆಂಟ್ ಕಡೆಯಿಂದಲೂ ಆಡುವ ಈ ಆಟಗಾರ ತನ್ನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಕಾರಿನ ಜೊತೆಗೆ ತಮ್ಮ ಬರೀ ಮೈಯಲ್ಲಿದ್ದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಕಾರನ್ನು ಪಡೆಯಲು ಅವರಿಗೆ 2021 ರ ವರೆಗೆ ದಾರಿಕಾಯಬೇಕಾಗಿದೆ.
ಭಾರತದಲ್ಲಿ ಈ ಕಾರಿನ ಬೆಲೆ ಸುಮಾರು 87.6 ಕೋಟಿ ರೂಪಾಯಿಗಳಷ್ಟಾಗುವದು. ಇನ್ನು ಈ ಕಾರಿನ ಮೇಲೆ ಕೊಡಬೇಕಾದ ಟ್ಯಾಕ್ಸ್ ಎಲ್ಲವನ್ನು ಸೇರಿ ಆನ್ ರೋಡ್ ಬೆಲೆ ಒಟ್ಟು 133 ಕೋಟಿ ರೂಪಾಯಿಗಳಷ್ಟಾಗುವದು.
ಇನ್ನು ಈ ಕಾರಿನ ವಿಶೇಷತೆಗಳು ಯಾವವು ಎಂಬುದನ್ನು ಇಲ್ಲಿ ನೋಡಿ. ಬುಗಾತಿ ಕಂಪನಿಯ ಈ ಕಾರಿನ ಹೆಸರಿನ ಅರ್ಥ La Voiture Noire ಎಂದರೆ ಫ್ರೆಂಚ್ ಭಾಷೆಯಲ್ಲಿ ಕಪ್ಪು ಕಾರು ಎಂದಾಗುತ್ತದೆ. ಈ ಕಾರು ಇಲ್ಲಿಯವರೆಗೆ ಎಲ್ಲಕ್ಕೂ ದುಬಾರಿಯಾದ ಕಾರು ಎನಿಸಿಕೊಂಡಿದೆ. ಶಿರಾನ್ ಸ್ಪೋರ್ಟ್ ಕಾರಿನಲ್ಲಿಯ ಎಂಜಿನ್ನೇ ಇದಕ್ಕೆ ಬಳಕೆಯಾಗಿದೆ. ಇದರಲ್ಲಿ 8.0 ಲೀಟರ್ ಕ್ವಾಡ್ ಟರ್ಬೋಚಾರ್ಜಡ್ ಡಬ್ಲ್ಯೂ 16 ಎಂಜಿನ್ ಕೊಡಲಾಗಿದೆ. ಇದು 1500 ಪಿಎಸ್ ಪಾವರ್ ಮತ್ತು 1600 ಎನ್ಎಮ್ ಟಾರ್ಕ್ ಕೊಡುತ್ತದೆ. ಬರೀ 2.4 ಸೆಕೆಂಡಿನಲ್ಲಿಯೇ ಈ ಕಾರು 0 ಯಿಂದ 60 ಕಿಲೋಮೀಟರ್ ಪ್ರತಿ ಗಂಟೆಯ ವೇಗದಲ್ಲಿ ಓಡುವದು. ಈ ಕಾರಿನ ಮ್ಯಾಕ್ಸಿಮಮ್ ವೇಗ ಗಂಟೆಗೆ 380 ಕಿಲೋಮೀಟರ್ ಇದೆ. ಕಾರಿನಲ್ಲಿ ಒಳಗಡೆ ಹ್ಯಾಂಡ್ ಕ್ರಾಫ್ಟೆಡ್ ಕಾರ್ಬನ್ ಬಾಡಿವರ್ಕ್ ಇದೆ.
ಕಳೆದ ವರ್ಷ ರೋನಾಲ್ಡೊ 21.5 ಲಕ್ಷ ಪೌಂಡ್ ಖರ್ಚು ಮಾಡಿ ಬುಗಾತಿ ಶಿರಾನ್ ಕಾರನ್ನು ಖರೀದಿಸಿದ್ದರು. ಇದನ್ನು ಹೊರತು ಪಡಿಸಿ ಅವರ ಹತ್ತಿರ ಮರ್ಸಿಡಿಜ್ ಸಿ ಕ್ಲಾಸ್ ಸ್ಪೋರ್ಟ್ ಕೂಪ್, ಲ್ಯಾಂಬೋರ್ಗಿನಿ ಎವೆಂಟಾಡೋರ್ ಏಲ್ ಪಿ 700-4,ಮೇಕ್ಲಾರೆನ್ ಎಮ್ ಪಿ 412 ಸಿ, ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್, ರೋಲ್ಸ್ ರಾಯಸ್ ಫ್ಯಾಂಟಮ್ ಮತ್ತು ಫೆರಾರಿ 599 ನಂತಹ ಅನೇಕ ದುಬಾರಿ ಕಾರುಗಳಿವೆ.