ಜಮೀನು ಮಾರಿ ಉದ್ಯೋಗ ಮಾಡೆಂದು ಮಗನಿಗೆ 20 ಸಾವಿರ ಕೊಟ್ಟ ತಂದೆ: ಆ ಹಣದಿಂದ 2400 ಕೋಟಿ ಉದ್ಯಮ ಕಟ್ಟಿದ ಮಗ!

ಮಿತ್ರರೇ ಬಾಲಾಜಿ ವೇಫರ್ಸ್ ಹೆಚ್ಚುಕಡಿಮೆ ಎಲ್ಲರಿಗೂ ಗೊತ್ತೇ ಇದೆ. ಇಂದಿನ ಲೇಖನದಲ್ಲಿ ಬಾಲಾಜಿ ವೇಫರ್ಸ್ ನ ಯಶಸ್ಸಿನ ಬಗ್ಗೆ ತಿಳಿದುಕೊಳ್ಳುವ. ಚಂದುಬಾಯಿ ಹಿರಾನಿ ಇವರು ಬಾಲಾಜಿ ವೇಫರ್ಸ್ ಕಂಪನಿಯನ್ನು ಸ್ಥಾಪನೆ ಮಾಡಿದರು. ಇಂದು ಬಾಲಾಜಿ ವೇಫರ್ಸ್ ದೊಡ್ಡ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಬರೀ 9 ನೇ ಇಯತ್ತೆ ಉತ್ತೀರ್ಣರಾದ ಚಂದುಭಾಯಿ ವಿರಾನಿಯವರು ಇಷ್ಟೊಂದು ದೊಡ್ಡ ಕಂಪನಿಯನ್ನು ಹೇಗೆ ಪ್ರಾರಂಭಿಸಿದರು.

ಗುಜರಾತಿನ ಜಾಮನಗರ ಈ ಭಾಗವು ಹೆಚ್ಚು ಕಡಿಮೆ ಬರಪೀಡಿತ ಪ್ರದೇಶವೆಂದು ಗುರುತಿಸಿಕೊಂಡಿದೆ. ಇಲ್ಲಿಯೇ ಕಾಲವಡ ಹೆಸರಿನ ತಾಲೂಕಿನಲ್ಲಿ ಧುಂಧೋರಾಜಿ ಇವರ ಜನ್ಮ ಎರಡು ಸಾವಿರ ಜನಸಂಖ್ಯೆ ಹೊಂದಿದ ಚಿಕ್ಕಹಳ್ಳಿಯಲ್ಲಿ ಆಗಿತ್ತು. ಈ ಊರಲ್ಲಿಯ ಪೋಪಟ್ ರಾವ್ ವಿರಾನಿ ತಮ್ಮ ಕುಟುಂಬದ ಜೊತೆಗೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು.

1972 ರ ಸಮಯದಲ್ಲಿ ಇಡೀ ದೇಶವೇ ಭಯಂಕರವಾದ ಬರಗಾಲಕ್ಕೆ ತುತ್ತಾಗಿತ್ತು. ಬೇಸಾಯದ ವ್ಯವಸಾಯ ಮಾಡುವುದು ತುಂಬಾ ಕಷ್ಟವಾಗಿತ್ತು. ಅದೇ ಸಮಯದಲ್ಲಿ ಪೋಪಟರಾವ್ ಅವರು ತಮ್ಮ ಜಮೀನನ್ನು ಮಾರಿ ಬಂದ 20 ಸಾವಿರ ರೂಪಾಯಿಗಳನ್ನು ತಮ್ಮ ಮಗನಿಗೆ ಉದ್ಯೋಗಕ್ಕಾಗಿ ನೀಡಿದರು.

ಮುಂದೆ ಮಕ್ಕಳು ಉದ್ಯೋಗ ಮಾಡುವ ಸಲುವಾಗಿ ರಾಜಕೋಟಕ್ಕೆ ಬಂದರು. ಬೇಸಾಯಕ್ಕೆ ಸಂಬಂಧಿಸಿದ ಯಾವುದಾದರೂ ಒಂದು ಉದ್ಯೋಗವನ್ನು ಮಾಡಬೇಕೆಂದು ಅವರು ನಿಶ್ಚಯಿಸಿದರು. ಅದರಂತೆ ಅದಕ್ಕೆ ಬೇಕಾಗುವ ಗೊಬ್ಬರ ಮತ್ತು ಇನ್ನಿತರ ಸಾಧನಗಳ ಖರೀದಿ ಮಾಡಿದರು. ಆದರೆ ನಂತರ ಈ ವಸ್ತುಗಳನ್ನು ಮಾರಾಟ ಮಾಡುವಾಗ ಅವರಿಗೆ ಗೊತ್ತಾಯ್ತು ತಾವು ಮಾರಾಟ ಮಾಡುವ ವಸ್ತುಗಳು ನಕಲಿ ಇವೆಯೆಂದು.

ವಿರಾನಿ ಸಹೋದರರು ತಾವು ಮೋಸ ಹೋದ ವಿಷಯ ತಿಳಿದು ತಬ್ಬಿಬ್ಬಾದರು. ತಾವು ಸರಿಯಾಗಿ ಮೋಸ ಹೋಗಿದ್ದೇವೆ ಎಂದು ಅವರಿಗೆ ಗೊತ್ತಾಯಿತು. ಆನಂತರ ಅವರು ಒಂದು ಕಾಲೇಜಿನಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ನಿಶ್ಚಯಿಸಿದರು. ಚಂದುಭಾಯಿಯವರ ವಯಸ್ಸು ಬರೀ 14 ಇತ್ತು. ಇವರು ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದರು.

ಮುಂದೆ ಕೆಲವು ದಿನಗಳ ನಂತರ ಕ್ಯಾಂಟೀನ್ ಸಹಿತ ನಿಂತು ಬಿಟ್ಟಿತು. 1974 ರಲ್ಲಿ ಥೇಟರ್ನಲ್ಲಿರುವ ಕ್ಯಾಂಟೀನಿನಲ್ಲಿ ಕೆಲಸ ಮಾಡಹತ್ತಿದರು. ಇಲ್ಲಿ ಕೆಲಸಮಾಡುತ್ತಲೇ ಇವರು ಬುಕಿಂಗ್ ಆಫೀಸ್ ನಲ್ಲಿ ಟಿಕೆಟ್ಗಳನ್ನು ಸಹ ಮಾರಾಟ ಮಾಡುತ್ತಿದ್ದರು. ಇವರು ಪಡುತ್ತಿರುವ ಪರಿಶ್ರಮವನ್ನು ಕಂಡು ಸಿನಿಮಾದ ಮಾಲಿಕ ಗೋವಿಂದಭಾಯಿಯವರು ತುಂಬಾ ಖುಷಿಯಾದರು.

1976 ರಲ್ಲಿ ಸಿನಿಮಾ ಮಾಲೀಕ ವಿರಾನಿ ಸಹೋದರರಿಗೆ ಗುತ್ತಿಗೆ ಆಧಾರದ ಮೇಲೆ ಕ್ಯಾಂಟೀನ್ ನಡೆಸಲು ಕೊಟ್ಟನು. ಪ್ರಾರಂಭದಲ್ಲಿ ಅವರು ಲೋಕಲ್ ವ್ಯಾಪಾರಿಗಳ ಕಡೆಯಿಂದ ವೇಫರ್ಸ್ ಗಳನ್ನು ಮಾರಾಟ ಮಾಡಲು ಶುರುಮಾಡಿದರು. ಆದರೆ ಅದರಲ್ಲಿ ಹೆಚ್ಚು ಲಾಭ ದೊರೆಯುತ್ತಿರಲಿಲ್ಲ.

ಇವರ ಉದ್ಯೋಗದಲ್ಲಿ ಸಹಾಯ ಮಾಡಲು ಅವರ ಮನೆಯ ಹೆಣ್ಣು ಮಕ್ಕಳು ಸಹ ಕ್ಯಾಂಟೀನಿಗೆ ಬರುತ್ತಿದ್ದರು. ಅವರು ಸ್ಟೋವ್ ಮೇಲೆ ಸ್ಯಾಂಡ್ವಿಚ್ ತಯಾರು ಮಾಡುತ್ತಿದ್ದರು.1982 ರಲ್ಲಿ ತಾವೇ ಸ್ವತಃ ವೇಫರ್ಸ್ ತಯಾರಿಸಲು ಪ್ರಾರಂಭಿಸಿದರು. ಇಲ್ಲಿಯೇ ಅವರ ಜೀವನಕ್ಕೆ ಒಂದು ಮಹತ್ವದ ತಿರುವು ಸಿಕ್ಕಿತು.

ಇದರಿಂದ ಅವರಿಗೆ ತುಂಬಾ ಲಾಭವಾಯಿತು. ಮುಂದೆ ಇದೇ ವೇಫರ್ಸ್ ಗಳನ್ನು ಅಂಗಡಿಗಳಲ್ಲಿ ಮಾರಲು ಶುರುಮಾಡಿದರು. ಅದಕ್ಕಾಗಿ ಈ ವೇಫರ್ಸ್ ಗೆ ಬಾಲಾಜಿ ಎಂದೇ ಹೆಸರಿಟ್ಟರು. ಆದರೂ ಕೆಲವು ಅಂಗಡಿಗಳ ಮಾಲೀಕರು ಇವರಿಗೆ ಭಿಕ್ಷುಕನ ತರಹ ಟ್ರೀಟ್ ಮಾಡುತ್ತಿದ್ದರು.

ಆದರೆ ವಿರಾನಿಯವರು ಈ ರೀತಿಯ ವಿಷಯಗಳ ಕಡೆಗೆ ಗಮನ ನೀಡಲಿಲ್ಲ. ಬೇಡಿಕೆ ಹೆಚ್ಚಿಸಿದ ನಂತರ ವೇಫರ್ಸ್ ತಯಾರುಮಾಡುವ ಯಂತ್ರಗಳನ್ನು ಖರೀದಿಸಿದರು. ಆದರೂ ಇದರಲ್ಲಿ ಲಾಭ ಅಷ್ಟೊಂದು ಸಿಗುತ್ತಿರಲಿಲ್ಲ.1989 ರಲ್ಲಿ ಬ್ಯಾಂಕಿನಿಂದ 3.60 ಲಕ್ಷ ರೂಪಾಯಿಗಳ ಸಾಲ ಪಡೆದರು. ಆ ಹಣದಲ್ಲಿ ಸಾವಿರ ಚದರ ಅಡಿಯ ಜಾಗವನ್ನು ಖರೀದಿಸಿದರು.

ಮುಂದೆ ಬರಿ ಮೂರೇ ವರ್ಷಗಳಲ್ಲಿ ಅವರ ವ್ಯವಹಾರ 3 ಕೋಟಿ ರೂಪಾಯಿಗಳಿಗೆ ಮುಟ್ಟಿತ್ತು. ಆಗ ವಿರಾನಿಯವರು ಗಂಟೆಗೆ ಸಾವಿರ ಕಿಲೋ ವೇಪರ್ಸ್ ತಯಾರಿಸುವ ಯಂತ್ರವನ್ನು ಖರೀದಿಸಿದರು. ಆದರೆ ದುರ್ಭಾಗ್ಯ ಯಂತ್ರವು ಕೆಟ್ಟುಹೋಯಿತು. ಆದರೂ ಅವರು ಸೋಲೊಪ್ಪಿಕೊಳ್ಳದೆ 2003 ರಲ್ಲಿ 1200 ಕಿಲೋ ಪ್ರತಿ ಗಂಟೆಗೆ ವೆಫರ್ಸ್ ತಯಾರಿಸುವ ಯಂತ್ರವನ್ನು ಖರೀದಿಸಿದರು.

2000 ರಿಂದ 2006 ರ ವರೆಗೆ ಗುಜರಾತಿನಲ್ಲಿ 90% ಮಾರ್ಕೆಟ್ ಕ್ಯಾಪ್ಚರ್ ಮಾಡಿದರು. ನಮಕೀನ್ ಆಹಾರಗಳಲ್ಲಿ ಸದ್ಯ ಬಾಲಾಜಿಯವರು ಶಿಖರದ ಮೇಲಿದ್ದಾರೆ. ಇಂದು ಬಾಲಾಜಿ ಪೇಪರ್ಸ್ ಪ್ರತಿ ದಿನಕ್ಕೆ ನಾಲ್ಕುವರೆ ಲಕ್ಷ ಕಿಲೋ ಪೇಪರ್ಸ್ ತಯಾರು ಮಾಡುತ್ತದೆ. ಮತ್ತು 4 ಲಕ್ಷ ಕಿಲೋ ನಮಕೀನ್ ಪ್ರತಿ ದಿನಕ್ಕೆ ತಯಾರಿಸುತ್ತದೆ. ಬಾಲಾಜಿ ಕಂಪನಿಯ ಹಿಂದಿನ ಯಶಸ್ಸಿನ ಕಥೆ ಹೀಗಿದೆ ನೋಡಿ.