🐏ಬಕೆಟ್ ಜೊತೆಗೆ ಕಾದಾಟವಾಡಲು ಹೋದ ಟಗರು, ಮುಂದೇನಾಯ್ತು ನೋಡಿ ಟಗರಿನ ರಾದ್ಧಾಂತ🤣🤣………!!!
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದೊಂದಿಗೆ ಶೇರ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಟಗರು ತಾನಿದ್ದ ಸ್ಥಳದಲ್ಲಿ ಅದಕ್ಕೆ ಕುಡಿಯಲು ನೀರು ಬಕೆಟ್ ನಲ್ಲಿ ಇಟ್ಟಿರುತ್ತಾರೆ. ಅಲ್ಲಿದ್ದ ಎಲ್ಲ ಟಗರುಗಳು ನೀರನ್ನು ಕುಡಿದು ಬಕೆಟ್ ಖಾಲಿಯಾಗುತ್ತದೆ. ಅದನ್ನು ಕಂಡು ಒಂದು ಟಗರು ಬಕೆಟ್ ಜೊತೆಗೆ ಮೋಜು ಮಸ್ತಿ ಮಾಡಬೇಕೆಂದು ತಿಳಿದು ಬಕೀಟನ್ನು ಮೊದಲಿಗೆ ತನ್ನ ಕೊಂಬುಗಳಿಂದ ಗುದ್ದುತ್ತದೆ ಆಗ ಬಕೆಟ್ ಸಾವಕಾಶವಾಗಿ ಕೆಳಗೆ ಉರಳಿ ಮತ್ತೆ ತನ್ನ ಯಥಾ ಸ್ಥಿತಿಗೆ ಅಂದರೆ ಮೇಲೆ ನಿಲ್ಲುತ್ತದೆ. ಹೀಗೆ ಆಗುವದನ್ನು ಕಂಡು ಈ ಟಗರಿಗೆ ತುಂಬಾನೇ ಕೋಪ ಬರುತ್ತೆ. ಈ ಬಕೆಟ್ ಗೆ ಬುದ್ದಿ ಕಲಿಸಬೇಕು ಎಂದು ತಿಳಿದುಕೊಂಡು ಅದು ಸ್ವಲ್ಪ ಮುಂದೆ ಹೋಗಿ ಅಲ್ಲಿಂದ ತುಂಬಾ ವೇಗವಾಗಿ ಬಂದು ಬಕೆಟ್ ಗೆ ಗುದ್ದುತ್ತದೆ. ಗುಡ್ಡುತ್ತಿದ್ದಂತೆಯೇ ಏನಾಗಿರಬಹುದು ಅಂತೀರಾ? ಏನಾಗುತ್ತೆ ಅಂದರೆ ಆ ವೇಗದಿಂದ ಬಂದು ಗುದ್ದುವಾಗ ಅದರ ಕುತ್ತಿಗೆ ಬಕೆಟ್ ಒಳಗೆ ಹೋಗಿ, ಬಕೆಟ್ ನ್ನು ತನ್ನ ಮೇಲೆ ಹಾಕಿಕೊಂಡು ಹಾರಿ ದೂರ ಹೋಗಿ ಕೆಳಗೆ ಬೀಳುತ್ತದೆ.
ವೀಡಿಯೋ ನೋಡಿ.
Allow me to introduce to you … The bucket
(Wait for It) pic.twitter.com/11wzC3RjBh— Gabriele Corno (@Gabriele_Corno) October 3, 2022
ಸುಮ್ಮನಿದ್ದ ಯಾವುದೇ ವ್ಯಕ್ತಿ ಅಥವಾ ವಸ್ತುವಿನ ಮೇಲೆ ನಮ್ಮ ಕೋಪ ತೋರಿಕೊಂಡರೆ ಅದರ ಪರಿಣಾಮ ನಮಗೇಯೇ ಬೀರುತ್ತದೆ ಅನ್ನೊದು ಈ ವೀಡಿಯೋದಿಂದ ತಿಳಿದು ಬರುತ್ತದೆ. ಈ ವಿಡಿಯೋ ವನ್ನು ಟ್ವಿಟ್ಟರ್ ನಲ್ಲಿ @Gabriele_corno ಎಂಬ ಹೆಸರಿನ ವ್ಯಕ್ತಿ ತನ್ನ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾನೆ. ಇದುವರೆಗೆ ಈ ವಿಡಿಯೋ ವನ್ನು ಸುಮಾರು ಏಳು ಮಿಲಿಯನ್ ಗೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ