ಜಾಕೆಟ್ ತೊಟ್ಟು ತಲೆ ಮೇಲೆ ಟೊಪ್ಪಿಗೆ ಹಾಕಿಕೊಂಡ ಈ ಹುಡುಗಿ ಇದ್ದಳು ಮೊದಲ ಲೇಡಿ ಸೂಪರ್ ಸ್ಟಾರ್! ಯಾರು ಹೇಳುತ್ತೀರಾ?

ಚಿತ್ರರಂಗದಲ್ಲಿ ಅನೇಕರು ಬರುತ್ತಾರೆ ಹೋಗುತ್ತಾರೆ, ಆದರೆ ಕೆಲವೇ ಕೆಲವರು ಮಾತ್ರ ತಮ್ಮ ಪರ್ಫಾರ್ಮೆನ್ಸ್ ಕೊನೆಯವರೆಗೂ ಉಳಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾರೆ. ನೂರಕ್ಕೆ 99 ಜನರು ಈ ಥಳುಕು ಬಳುಕಿನ ಲೋಕದಲ್ಲಿ ನೆಲೆಯೂರಲು ಫೇಲಾಗುತ್ತಾರೆ. ಎಲ್ಲೋ ಒಬ್ಬ ಮಾತ್ರ ಯಶಸ್ವಿಯಾಗುತ್ತಾನೆ. ಅಂಥವರೇ ಮುಂದೆ ಸೂಪರ್ ಸ್ಟಾರ್ ಎಂದು ಮೆರೆಯುತ್ತಾರೆ.

ಗುರುತು ಸಿಕ್ಕಿತೇ? ಹೇಳಿ ನೋಡೋಣ ಇಲ್ಲಿ ಕಾಣುವ ಜನಪ್ರಿಯ ನಟಿ ಯಾರು ಎಂದು. ಇವರೇ ಬಾಲಿವುಡ್ ನ ಮೊದಲ ಲೇಡಿ ಸೂಪರ್ ಸ್ಟಾರ್ ದಿ. ಶ್ರೀದೇವಿ.

ಹೌದು ಇವರು ಶ್ರೀದೇವಿ ಇದ್ದಾರೆ. ಮೊದಮೊದಲು ಚಿಕ್ಕ ಪಾತ್ರಗಳಲ್ಲಿ ಕಂಡ ನಂತರ ದೊಡ್ಡವರಾಗಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾದರು. ಇವರು ಜಗತ್ತಿನಾದ್ಯಂತ ಕೊಟ್ಯಾವಧಿ ಫ್ಯಾನ್ಸ್ ಗಳನ್ನು ತಮ್ಮ ಕಡೆಗೆ ಆಕರ್ಷಿಸುವಲ್ಲಿ ಸಫಲರಾದವರು. ಇವರು ಬಹುಭಾಷಾ ತಾರೆಯಂದೂ ಬಿರುದು ಗಳಿಸಿದವರು. ದಕ್ಷಿಣದ ಎಲ್ಲ ಭಾಷೆಗಳಲ್ಲಿ ನಟಿಸುವದರೊಂದಿಗೆ ಹಿಂದಿ ಭಾಷೆಯಲ್ಲೂ ನಟಿಸಿ ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಇವರು 80 ರಿಂದ 90 ರ ದಶಕದ ವರೆಗೆ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯಾಗಿದ್ದರು. ಅಷ್ಟೇ ಅಲ್ಲ ಇವರು ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಪಡೆದಿದ್ದರು.

1975 ರಲ್ಲಿ ಹಿಂದಿ ಚಿತ್ರ ‘ಜ್ಯೂಲಿ’ಯಲ್ಲಿ ಬಾಲ ನಟಿಯಾಗಿ ಚಿತ್ರರಂಗದಲ್ಲಿ ಶ್ರೀದೇವಿಯವರು ಕಾಲಿಟ್ಟರು. ಈ ಚಿತ್ರದಲ್ಲಿ ಕನ್ನಡದ ಪ್ರಸಿದ್ಧ ತಾರೆ ಲಕ್ಷ್ಮಿಯವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದೇ ವರ್ಷ ಶ್ರೀದೇವಿಯವರು ಇನ್ನೊಂದು ತಮಿಳು ಚಿತ್ರದಲ್ಲಿ ನಟಿಸಿದರು. ಆದರೆ ಅವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟ ಚಿತ್ರವೆಂದರೆ 1983 ರಲ್ಲಿ ಪ್ರದರ್ಶನಗೊಂಡ ನಟ ಜಿತೇಂದ್ರ ಅವರ ಜೋಡಿಯಾಗಿ ನಟಿಸಿದ ‘ಹಿಮ್ಮತವಾಲಾ’ ಚಿತ್ರ. ಅಲ್ಲಿಂದ ಶುರುವಾದ ಅವರ ಯಶಸ್ಸಿನ ಫಿಲಂ ಪ್ರವಾಸ ಮುಂದೆ ಎಲ್ಲಿಯೂ ನಿಲ್ಲಲಿಲ್ಲ. ಅವರು ನಟಿಸಿದ ಅತ್ಯುತ್ತಮ ಚಿತ್ರಗಳು… ಸದ್ಮಾ, ನಾಗಿನ್, ನಿಗಾಹೆ, ಮಿಸ್ಟರ್ ಇಂಡಿಯಾ, ಚಾಲ್ಬಾಜ್, ಲಮ್ಹೆ, ಖುದಾಗವಾಹ್ ಮತ್ತು ಜುದಾಯಿ. ಶ್ರೀದೇವಿಯವರು 63 ಹಿಂದಿ, 62 ತೆಲುಗು, 58 ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.