Articles

ಮಹಿಳೆಯ ಅ ತ್ಯಾ ಚಾರ ಕ್ಕೆ ಯತ್ನಿಸಿದ ಕಿಡಿಗೇಡಿಗಳ ಮೇಲೆ ಧಾಳಿ ಮಾಡಿ ಮಹಿಳೆಯ ರಕ್ಷಣೆ ಮಾಡಿದ ಎಮ್ಮೆ

ಪ್ರಾಣಿಗಳು ಸಹಾ ಕಷ್ಟದಲ್ಲಿರುವ ಮನುಷ್ಯನ ಸಹಾಯಕ್ಕೆ ಬರುವ ಘಟನೆಗಳ ಬಗ್ಗೆ ಈಗಾಗಲೇ ನಾವು ಸಾಕಷ್ಟು ಸುದ್ದಿಗಳನ್ನು ಓದಿದ್ದೇವೆ. ಅ ಪಾ ಯ ಎದುರಾದಾಗ ಹೇಗೆ ಮೂಕ ಪ್ರಾಣಿಗಳು ತಮ್ಮನ್ನು ಸಾಕಿದವರು ಅಥವಾ ತಮ್ಮ ಆರೈಕೆ ಮಾಡುವವರನ್ನು ರಕ್ಷಿಸಲು ಮುಂದಾಗುತ್ತದೆ ಎಂಬ ವಿಶೇಷ ಸುದ್ದಿಗಳು ಬಂದಾಗ ಆಶ್ಚರ್ಯ ಎನಿಸುವ ಜೊತೆಗೆ, ಪ್ರಾಣಿಗಳ ಈ ಗುಣವನ್ನು ಕಂಡು ಹೊಗಳದೇ ಇರಲಾರೆವು. ಸಾಕು ಪ್ರಾಣಿಗಳು ತಮ್ಮ ಮಾಲೀಕರ ಪರ ತೋರುವ ನಿಸ್ವಾರ್ಥ ಕಾಳಜಿಯನ್ನು ಕಂಡಾಗ, ಮನುಷ್ಯರಲ್ಲಿ ಏಕೆ ಇಂತಹುದೊಂದು ಗುಣವಿಲ್ಲ ಎನಿಸುವುದು ಕೂಡಾ ನಿಜ. ಸಂಕಷ್ಟದಲ್ಲಿ ಸಹಾಯಕ್ಕೆ ಬರುವ ಪ್ರಾಣಿಗಳ ಪ್ರೀತಿ ನಮ್ಮನ್ನು ಆಶ್ಚರ್ಯದಲ್ಲಿ ಮುಳುಗುವಂತೆ ಮಾಡಿ ಬಿಡುತ್ತದೆ.

ಇದು ನಿಜವಾಗಿಯೂ ಒಂದು ವಿಶೇಷ ಹಾಗೂ ವಿಚಿತ್ರ ಎನಿಸುವ ಘಟನೆಯಾಗಿದೆ. ಈ ಘಟನೆಯು ನಿಜಕ್ಕೂ ಒಂದು ವಿಸ್ಮಯವನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಇಲ್ಲೊಂದು ಎಮ್ಮೆ ಮಾಡಿರುವ ಕೆಲಸವನ್ನು ನೋಡಿ ಬಹಳಷ್ಟು ಜನರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಘಟನೆಯ ಬಗ್ಗೆ ತಿಳಿದರೆ ನೀವು ಸಹಾ ಆಶ್ಚರ್ಯ ಪಡುವುದು ಮಾತ್ರವೇ ಅಲ್ಲದೇ ಮೆಚ್ಚುಗೆಯನ್ನು ಸಹಾ ನೀಡುವಿರಿ. ಇಲ್ಲೊಂದು ಎಮ್ಮೆ ತನ್ನನ್ನು ಸಾಕಿದ ಮಹಿಳೆಯನ್ನು ಎಂತಹ ಸಂದರ್ಭದಲ್ಲಿ ಕಾಪಾಡಿದೆ ಎಂದರೆ, ಆಕೆಯ ಮೇಲೆ ಕೆಲವು ಕಿಡಿಗೇಡಿಗಳು ಅ ತ್ಯಾ ಚಾ ರ ಕ್ಕೆ ಪ್ರಯತ್ನ ಪಟ್ಟ ವೇಳೆ ಎಮ್ಮೆಯು ಆಕೆಯನ್ನು ರಕ್ಷಣೆ ಮಾಡಿದ್ದು ಈ ವಿಷಯ ಎಲ್ಲೆಡೆ ಸುದ್ದಿಯಾಗಿದೆ. ಈ ಘಟನೆಯು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹಿರೇಮರಾಹಳ್ಳಿ ಎನ್ನುವಲ್ಲಿ ನಡೆದಿದೆ ಎನ್ನಲಾಗಿದೆ.

ಪೋಲಿಸ್ ಮುಖ್ಯ ಕಛೇರಿಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಹಿರೇಮರಾಹಳ್ಳಿಯ ನಿವಾಸಿ ಮೂವತ್ತು ವರ್ಷ ವಯಸ್ಸಿನ ಮಹಿಳೆಯೊಬ್ಬರು ಗ್ರಾಮದ ಜನರ ಸಾಕು ದನ ಕರುಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದಳು ಎನ್ನಲಾಗಿದೆ. ನೀಲಗಿರಿ ತೋಪಿನಲ್ಲಿ ಮಹಿಳೆಯು ಹಸುಗಳನ್ನು ಮೇಯಿಸುವ ವೇಳೆಯಲ್ಲಿ ಆರೋಪಿಗಳಾದ ಬಸವರಾಜ್ ( 34 ) ಮತ್ತು ಪರಶುರಾಮ್ ( 32 ) ಎನ್ನುವವರು ವಿಳಾಸವನ್ನು ಕೇಳುವ ನೆಪದಲ್ಲಿ ಆ ಮಹಿಳೆಯನ್ನು ಹತ್ತಿರದ ಮಂದಿರವೊಂದರ ಹಿಂದಕ್ಕೆ ಬಲವಂತವಾಗಿ ಎಳೆದುಕೊಂಡು ಹೋಗಿ ಆಕೆಯನ್ನು ಬಲಾತ್ಕಾರ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.

ಹೀಗೆ ಮಹಿಳೆಯ ಮೇಲೆ ಆ ಇಬ್ಬರೂ ದೌ ರ್ಜ ನ್ಯ ಎಸಗಲು ಪ್ರಯತ್ನ ಮಾಡಿದ್ದು, ಆಗ ಮಹಿಳೆಯು ಜೋರಾಗಿ ಕಿರುಚಿ, ತನ್ನ ರಕ್ಷಣೆಗೆ ಕೂಗಿ ಕೊಂಡಿದ್ದಾಳೆ. ಮಹಿಳೆಯ ಕಿರುಚಾಟ ಕೇಳಿದ ಕೂಡಲೇ ಅಲ್ಲಿಗೆ ಎಮ್ಮೆಯೊಂದು ಓಡಿ ಬಂದಿದೆ. ಎಮ್ಮೆ ತನ್ನ ಹರಿತವಾದ ಕೊಂಬಿನಿಂದ ಆ ಇಬ್ಬರೂ ಆ ರೋ ಪಿಗಳ ಮೇಲೆ ಧಾಳಿ ಮಾಡಿದೆ. ಎಮ್ಮೆಯ ಭೀ ಕರವಾದ ಆಕ್ರಮಣವನ್ನು ಕಂಡ ಆ ಇಬ್ಬರೂ ಕಿಡಿಗೇಡಿಗಳು, ಭ ಯ ಪಟ್ಟು ಅಲ್ಲಿಂದ ಓಡಿ ಹೋಗಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.

ಪೋಲಿಸರು ದೂರು ದಾಖಲಿಸಿಕೊಂಡು ನಂತರ ನಾಪತ್ರೆಯಾಗಿರುವ ಇಬ್ಬರು ಆರೋಪಿಗಳ‌ನ್ನು ಪತ್ತೆ ಹಚ್ಚುವ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ ಎಮ್ಮೆಯು ಮಾಡಿದಂತಹ ಸಮಯೋಚಿತ ಕಾರ್ಯದಿಂದಾಗಿ ಒಬ್ಬ ಮಹಿಳೆಯ ಮಾನ ಉಳಿದಿದ್ದು ಮಾತ್ರವೇ ಅಲ್ಲದೇ, ಪ್ರಾಣಿಗಳು ಸಹಾ ಅಪಾಯದ ಮುನ್ಸೂಚನೆಯನ್ನು ಅರಿತು ರಕ್ಷಣೆಗೆ ಮುಂದಾಗಿರುವುದನ್ನು ನೋಡಿದಾಗ ಅವುಗಳಲ್ಲಿನ ಅಂತಃ ಕರಣದ ಗುಣ ನಮ್ಮನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.

Leave a Comment

Your email address will not be published. Required fields are marked *