ಜೀವನದಲ್ಲಿ ಮೊದಲ ಬಾರಿಗೆ ಏರ್ ಪೋರ್ಟ್ ನಲ್ಲಿ ಎಂಟ್ರಿ ಮಾಡುತ್ತಿದ್ದ ವ್ಯಕ್ತಿ! ನೋಡಿ ಆತ ಮಾಡಿದ ಮೊದಲ ಕೆಲಸ…
ಸೋಶಿಯಲ್ ಮೀಡಿಯಾದಲ್ಲಿ ಅನೇಕ ತಮಾಷೆಯ ವಿಡಿಯೋಗಳು ದಿನನಿತ್ಯ ಹರಿದಾಡುತ್ತವೆ ಮತ್ತು ನಮ್ಮನ್ನು ಮನರಂಜಿಸಿ ಹೋಗುತ್ತವೆ. ಸದ್ಯ ಹೊಸದಾದ ವಿಡಿಯೋ ಒಂದು ಈ ಪ್ಲಾಟ್ ಫಾರ್ಮ್ ಮೇಲೆ ಕಂಡು ಬರುತ್ತಿದೆ. ಅದನ್ನು ನಿಮಗಾಗಿ ತಂದಿದ್ದೇವೆ ನೋಡಿ.
ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೊದಲ ಬಾರಿಗೆ ಏರ್ ಪೋರ್ಟ್ ನಲ್ಲಿ ಎಂಟ್ರಿ ಮಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಆತನಿಂದ ಒಂದು ತಮಾಷೆಯ ಕೆಲಸ ನಡೆಯುತ್ತದೆ. ಅದನ್ನೇ ನಿಮಗಾಗಿ ಇಲ್ಲಿ ಸೆರೆ ಹಿಡಿದು ತಂದಿದ್ದೇವೆ. ಆತ ಏರ್ ಪೋರ್ಟ್ ನಲ್ಲಿ ಎಂಟ್ರಿ ಮಾಡುತ್ತಲೇ ಅಲ್ಲಿ ಕಾರ್ಯನಿರತರಾಗಿದ್ದ ಸುರಕ್ಷಾ ಕರ್ಮಿಗಳು ಆತನ ಲಗೇಜ್ ನ್ನು ಎಕ್ಸರೇ ಮಶೀನ್ ನಲ್ಲಿಡಲು ಹೇಳಿದರು. ಈ ಸಂದರ್ಭದಲ್ಲಿ ಆತ ತನ್ನ ಲಗೇಜ್ ಗಳನ್ನಷ್ಟೆ ಮಶೀನ್ ನಲ್ಲಿ ಇಡದೆ ಅದರ ಜೊತೆಗೆ ತಾನು ಒಳಗೆ ಪ್ರವೇಶ ಮಾಡುತ್ತಾನೆ. ವ್ಯಕ್ತಿಯ ಈ ಚಟುವಟಿಕೆ ನೆಟ್ಟಿಗರಿಗೆ ತುಂಬಾನೇ ನಗು ತರುತ್ತಿದೆ.
ನೋಡಿ ಈ ತಮಾಷೆಯ ದೃಶ್ಯ…
His first time at an airport 🤦♂️ pic.twitter.com/B07b9P3ZbK
— Tansu Yegen (@TansuYegen) December 21, 2022
ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಇಂಟರ್ನೆಟ್ ನಲ್ಲಿ TansuYegen ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸುಮಾರು 36 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಪ್ರಸ್ತುತ ವಿಡಿಯೋ ನೋಡಿ ಯೂಸರ್ಸ್ ಗಳು ಅನೇಕ ರೀತಿಯ ತಮಾಷೆಯ ಕಾಮೆಂಟ್ ಗಳು ಮಾಡುತ್ತಿದ್ದಾರೆ.