Articles

ಮರಕುಟಿಕ ಹಕ್ಕಿಯು ನಿಮಿಷದಲ್ಲಿಯೇ ಮರದ ಕಾಂಡವನ್ನು ಚುಂಚಿನಿಂದ ಪೀಸ್ ಪೀಸ್ ಮಾಡುತ್ತಿರುವ ವಿಡಿಯೋ ವೈರಲ್!

ಮರಕುಟಿಕ ಹಕ್ಕಿಯು ಪ್ರಪಂಚದೆಲ್ಲೆಡೆ ಕಂಡುಬರುವ ಒಂದು ಜಾತಿಯ ಪಕ್ಷಿ. ಅದಕ್ಕೆ ಇಂಗ್ಲಿಷ್ ನಲ್ಲಿ ವುಡ್ ಪೀಕರ್ ಎನ್ನುತ್ತಾರೆ. ಮರಕುಟಿಕ ಹಕ್ಕಿಯಲ್ಲಿ ಸುಮಾರು ೨೦೦ ಪ್ರಭೇದಗಳಿದ್ದು ಇವು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಮರಗಳ ಕಾಂಡ, ರೆಂಬೆಗಳನ್ನು ಕುಟ್ಟಿ ತೊಗಟೆಗಳ ಒಳಗಿರುವ ಕ್ರಿಮಿ ಕೀಟಗಳನ್ನು ಭಕ್ಷಿಸುತ್ತವೆ. ಇವುಗಳ ಅಂಗರಚನೆಯೂ ಇದಕ್ಕೆ ಅನುಗುಣವಾಗಿದೆ. ಉದ್ದನೆಯ ಗಟ್ಟಿಮುಟ್ಟಾದ ಕೊಕ್ಕು, ಹರಿತವಾದ ಉಗುರುಗಳುಳ್ಳ ಕಾಲುಗಳು ಇರುವದರಿಂದ ಮರವನ್ನು ನಿಮಿಷಕ್ಕೆ ಸುಮಾರು 100 ಬಾರಿಗಿಂತಲೂ ಹೆಚ್ಚು ಸಲ ಕುಟ್ಟುವಂತೆ ರಚಿತವಾದ ಶಕ್ತಿಶಾಲಿ ತಲೆಬುರುಡೆಯನ್ನು ಹೊಂದಿರುವುದು ಇವುಗಳ ವೈಶಿಷ್ಟ್ಯ. ಈ ಹಕ್ಕಿಯ ಕೂಗು ತುಂಬಾ ಕರ್ಕಶ ಹಾಗೂ ಗಟ್ಟಿಯಾಗಿರುತ್ತದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮರಕುಟಿಕ ಹಕ್ಕಿಯ ವಿಡಿಯೋ ಒಂದು ಐಎಫ್ಎಸ್ ಅಧಿಕಾರಿಯಾದ ಡಾ. ಸಾಮ್ರಾಟ್ ಗೌಡ ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಮರಕುಟಿಕ ಹಕ್ಕಿಯು ಗಿಡದ ಕಾಂಡನ್ನು ತನ್ನ ಶಕ್ತಿಶಾಲಿ ಚುಂಚಿನಿಂದ ಸಹಜವಾಗಿಯೇ ಪುಡಿ ಪುಡಿ ಮಾಡುತ್ತಿದೆ. ಈ ಸುಂದರವಾದ ವಿಡಿಯೋ ನೋಡಿದ ನಂತರ ಇಂಟರ್ನೆಟ್ ಯೂಸರ್ಗಳು ಆಶ್ಚರ್ಯವಾಗುವಂತಿದೆ. ಈ ಕೆಲಸ ಮಾಡುವಾಗ ಇದರ ಚುಂಚಿನಲ್ಲಿ ಮತ್ತು ತಲೆಯಲ್ಲಿ ಹಾಗೂ ಆಧಾರ ಮಾಡಿಕೊಳ್ಳಲು ಇದರ ಕಾಲುಗಳಲ್ಲಿ ಅದೆಷ್ಟು ಶಕ್ತಿ ಇದೆ ಎಂಬುದರ ಅರಿವಾಗುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಮರಕುಟಿಕ ಹಕ್ಕಿಯು ತನ್ನ ಪ್ರತಿಯೊಂದು ಹೊಡೆತಕ್ಕೆ ಬಿರುಸಾದ ಮರದ ಕಾಂಡವನ್ನು ಸಹಜವಾಗಿ ಪುಡಿ ಮಾಡುತ್ತಿರುವುದು ಕಂಡುಬರುತ್ತದೆ.

ನೋಡಿ ಈ ವಿಡಿಯೋ…

ಈ ವಿಡಿಯೋ ಐಎಫ್ಎಸ್ ಅಧಿಕಾರಿಯಾದ ಸಾಮ್ರಾಟ್ ಗೌಡ ಅವರು ಶೇರ್ ಮಾಡುವುದರ ಜೊತೆಗೆ, ಕ್ಯಾಪ್ಷನಲ್ಲಿ ಪವರ್ ಆಫ್ ವುಡ್ ಕೀಪರ್ ಎಂದು ಬರೆದಿದ್ದಾರೆ.

Leave a Comment

Your email address will not be published. Required fields are marked *