ಟಿವಿ ಯಲ್ಲಿ ಡಾನ್ಸ್ ನೋಡುತ್ತಾ ಡಾನ್ಸ್ ಮಾಡುತ್ತಿದ್ದ ಪುಟ್ಟ ಬಾಲಕಿ, ಆದರೆ ಆಗಲೇ ನಡೆಯಿತು ಅನಾಹುತ: ತಂದೆ ತಾಯಿಯನ್ನು ತೆಗಳಿದ ನೆಟ್ಟಿಗರು
ಟಿ ವಿ ನೋಡುವಾಗ ಅನೇಕರು ಟಿವಿ ಗಳಲ್ಲಿ ಬರುತ್ತಿರುವ ಶೋಗಳು ಅಥವಾ ಸಿನಿಮಾಗಳಲ್ಲಿ ಮುಳುಗಿ ಹೋಗಿರುತ್ತಾರೆ. ಕೆಲವರಂತೂ ಟಿವಿ ನೋಡುತ್ತಾ ಊಟ ಮಾಡುವುದನ್ನು ಕೂಡಾ ಮರೆತು ಬಿಡುತ್ತಾರೆ. ಹೀಗೆ ಟಿವಿ ಯಲ್ಲಿ ಲೀನವಾಗಿ ಕಳೆಯುವಾಗ ಅನೇಕ ಬಾರಿ ಕೆಲವು ಊಹಿಸಿರದ ಘಟನೆಗಳು ಕೂಡಾ ನಡೆಯುತ್ತವೆ. ಅಲ್ಲದೇ ಆ ಸಂದರ್ಭದಲ್ಲಿ ನಮಗೆ ಅರಿವಿಲ್ಲದಂತೆಯೇ ಬಹಳ ಸಹಜವೆಂಬಂತೆ ಒಂದು ಪ್ರಚೋದನೆ ಸಿಕ್ಕಿ ನಾವು ಟಿವಿಯಲ್ಲಿ ಬರುವ ಕಾರ್ಯಕ್ರಮದ ದೃಶ್ಯಕ್ಕೋ ಅಥವಾ ಇನ್ನಾವುದೋ ಡೈಲಾರ್ ಕೇಳಿ ನಮ್ಮ ಪ್ರತಿಕ್ರಿಯೆ ನೀಡಿ ಬಿಟ್ಟಿರುತ್ತೇವೆ. ಆದರೆ ಕೆಲವರು ಟಿವಿ ನೋಡುತ್ತಾ ಯಾವುದಾದರೂ ಇಂಪಾದ ಹಾಡು ಕೇಳಿದರೆ ಅದರ ಜೊತೆಗೆ ತಮ್ಮ ಧ್ವನಿ ಹೇಗಿದೆ ಎಂಬುದನ್ನು ಕೂಡಾ ಲೆಕ್ಕಿಸದೆ ತಾವು ತಮ್ಮ ಕಂಠವನ್ನು ಸೇರಿಸಿ ಹಾಡಲು ಆರಂಭಿಸಿ ಬಿಡುತ್ತಾರೆ.
ಇನ್ನೂ ಕೆಲವರಾದರೆ ಟಿವಿ ಯಲ್ಲಿ ಯಾವುದಾದರೂ ಒಳ್ಳೆ ಜೋಷ್ ಹಾಗೂ ಮ್ಯೂಸಿಕ್ ಇರುವ ಹಾಡು ಬಂದರೆ ಮೊದಲು ಅವರ ಕಾಲುಗಳು ಕುಳಿತ ಕಡೆಯೇ ಹೆಜ್ಜೆಗಳನ್ನು ಹಾಕಲು ಆರಂಭಿಸುತ್ತಾ ಹಾಡು ಮತ್ತಷ್ಟು ಜೋಷ್ ನೀಡದ ಕೂಡಲೇ ಎದ್ದು ನಿಂತು ಮೈಮರೆತು ಕುಣಿಯುವುದೂ ಉಂಟು. ಆದರೆ ಇಂತಹ ಸನ್ನಿವೇಶ ನೋಡಲು ಸಿಗುವುದು ಬಹಳ ವಿರಳ ಎನ್ನಬಹುದು. ಆದರೆ ಇಂತಹ ಸನ್ನಿವೇಶ ನಡೆದು ಅದನ್ನು ವೀಡಿಯೋದಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿದರೆ ವೈರಲ್ ಆಗದೇ ಇರೋದಕ್ಕೆ ಸಾಧ್ಯವಿದೆಯೇ? ಖಂಡಿತ ಇಲ್ಲ.
ಇಂತಹ ಒಂದು ವೀಡಿಯೋ ವೈರಲ್ ಆಗಿದೆ. ಪುಟಾಣಿ ಹುಡುಗಿಯೊಬ್ಬಳು ಟಿವಿ ಯನ್ನು ನೋಡುತ್ತಿರುವಾಗ ಅದರಲ್ಲಿ ನೋಡಿದ ಸನ್ನಿವೇಶವು ಆಕೆಯನ್ನು ಕುಳಿತಲ್ಲಿಂದ ಮೇಲೆದ್ದು ಡಾನ್ಸ್ ಮಾಡುವಂತೆ ಮಾಡಿದೆ. ಅಷ್ಟೇ ಅಲ್ಲ ಡಾನ್ಸ್ ನಲ್ಲಿ ಹೀರೋಯಿನ್ ಮಾಡುವ ಸ್ಟಂಟ್ ಗಳನ್ನು ಕಾಪಿ ಮಾಡುವ ಪ್ರಯತ್ನ ಕೂಡಾ ಮಾಡಿದ್ದಾಳೆ. ಈ ವೀಡಿಯೋ ದಕ್ಷಿಣ ಭಾರತದಲ್ಲಿ ನಡೆದಂತಹ ಘಟನೆ ಎನ್ನಲಾಗಿದೆ. ಬಾಲಕಿಯೊಬ್ಬಳು ತಮಿಳಿನ ಲಕ್ಷ್ಮೀ ಸಿನಿಮಾದ ಮೊರಾಕ್ಕೋ ಹಾಡನ್ನು ನೋಡುವಾಗ ಆ ಹಾಡಿನ ಜೋಷ್ ಗೆ ಎದ್ದು ಭರ್ಜರಿಯಾಗಿ ಡಾನ್ಸ್ ಮಾಡಿದ್ದಾಳೆ. ಸಿನಿಮಾದಲ್ಲಿ ಹೀರೋಯಿನ್ ಡಾನ್ಸ್ ಮಾಡುತ್ತಿರುವುದನ್ನು ಗಮನಿಸಿದ ಬಾಲಕಿ ತಾನು ಅದನ್ನು ಅನುಕರಣೆ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾಳೆ.
ಹಾಡಿನಲ್ಲಿ ಹೀರೋಯಿಸ್ ಬಸ್ ನಲ್ಲಿ ಡಾನ್ಸ್ ಮಾಡುತ್ತಾ ಸ್ಟಂಟ್ ಒಂದನ್ನು ಮಾಡುತ್ತಾಳೆ ಮಾತ್ರವಲ್ಲದೇ ಬಸ್ ನಲ್ಲಿ ಅಳವಡಿಸಲಾದ ಹ್ಯಾಂಡಲ್ ಹಿಡಿದು ಮೇಲಕ್ಕೆ ಹಾರುತ್ತಾಳೆ. ಇದನ್ನು ನೋಡಿದ ಬಾಲಕಿ ತಾನು ಆ ಸ್ಟೆಪ್ ಕಾಪಿ ಮಾಡಬೇಕೆಂದು ಬಂದು ಟಿವಿಯನ್ನು ಮೇಲಕ್ಕೆ ಎತ್ತುವ ಪ್ರಯತ್ನವನ್ನು ಮಾಡುತ್ತಾಳೆ. ಹಾಗೆ ಟಿವಿ ಎತ್ತಲು ಪ್ರಯತ್ನ ಮಾಡಿದ ಬಾಲಕಿ ಆಗ ಟಿವಿ ಮುಂದೆ ಬಿದ್ದು ಹೋಗುತ್ತಾಳೆ. ಬಾಲಕಿಗೆ ಹಾಗೆ ಬಿದ್ದಾಗ ಗಾಯಗಳೇನೂ ಆಗಿಲ್ಲ. ಈ ವೀಡಿಯೋವನ್ನು ಕಾವೇರಿ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋ ನೋಡಿ
It only takes a few seconds… pic.twitter.com/90F0D9SHDk
— Kaveri 🇮🇳 (@ikaveri) December 22, 2020
ವೈರಲ್ ಆದ ವೀಡಿಯೋ ನೋಡಿದವರೆಲ್ಲಾ ಬಾಲಕಿಯು ಡಾನ್ಸ್ ಮಾಡಲು ಮಾಡಿರುವ ಪ್ರಯತ್ನವನ್ನು ನೋಡಿ ಬಹಳ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಆದರೆ ಕೆಲವರು ಬಾಲಕಿ ಟಿವಿಯನ್ನು ಎತ್ತಲು ಹೋಗಿ ಕೆಳಗೆ ಬಿದ್ದಿದ್ದನ್ನು ನೋಡಿ ಬೇಸರ ಹೊರಹಾಕುತ್ತಾ, ಇದು ತಂದೆ ತಾಯಿಗಳ ತಪ್ಪು ಮಗು ಟಿವಿ ಮುಂದೆ ಇರುವಾಗ ಸರಿಯಾಗಿ ಗಮನಿಸಬೇಕು. ಅಲ್ಲದೇ ಟಿವಿಯನ್ನು ಗೋಡೆಯ ಮೇಲೆ ಹಾಕಿಸುವುದು ಉತ್ತಮ ಎಂದಿದ್ದು, ಅದೃಷ್ಟವಶಾತ್ ಬಾಲಕಿಗೆ ಕೆಳಗೆ ಬಿದ್ದಾಗ ಏನೂ ಆಗಿಲ್ಲ, ಎಲ್ಲಾ ದೇವರ ದಯೆ ಎಂದು ಕೂಡಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.