Articles

ಹೆಂಡತಿಯ ಮೇಲೆ ಸೇಡು ತೀರಿಸಿಕೊಳ್ಳಲು ಗಂಡ ಚೂಸ್ ಮಾಡಿದ ಸಖತ್ ಐಡಿಯಾ! ಕ್ಷಣದಲ್ಲಿ ಗಂಡನಿಗೆ ಶಾಕ್ ನೀಡಿದ ಹೆಂಡತಿ…

ಗಂಡ ಹೆಂಡಿರ ಜಗಳ ಒಂದು ಶೃಂಗಾರ ಕಾವ್ಯವಿದ್ದಂತೆ ಎಂದು ಸಾಹಿತಿಗಳು ವರ್ಣಿಸುತ್ತಾರೆ. ಇವರ ಜಗಳ ಉಂಡು ಮಲಗುವತನಕ ಎನ್ನುತ್ತಾರೆ. ಹೀಗೆಯೇ ಇಬ್ಬರ ಪ್ರೀತಿಯ ಜಗಳದ ವಿಡಿಯೋ ಒಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕಂಡು ಬರುತ್ತಿದೆ. ಇಲ್ಲಿ ಗಂಡ ಹೆಂಡತಿಯ ಮೇಲಿನ ಕೋಪಕ್ಕೆ ಸೇಡು ತೀರಿಸಿಕೊಳ್ಳಲು ಬಯಸಿ ತಾನೇ ಮಂಗನಾಗಿದ್ದಾನೆ. ಪ್ರಸ್ತುತ ವಿಡಿಯೋ ನೋಡಲು ಸಖತ್ ಇಂಟರೆಸ್ಟಿಂಗ್ ಆಗಿದೆ.

ಇಲ್ಲಿ ಹೆಂಡತಿಯು ಮನೆಯ ಮುಂದಿನ ಅಂಗಳದ ಕಸ ಗುಡಿಸುವಾಗ ಗಂಡನ ತಲೆಯಲ್ಲಿ ಒಂದು ಪ್ಲಾನ್ ಬರುತ್ತದೆ ಮತ್ತು ತಾನೇ ಜಾಣನೆಂದು ತಿಳಿದು ಹೆಂಡತಿಗೆ ಕಾಟ ಕೊಡುವ ಒಂದು ಕೆಲಸಕ್ಕೆ ಕೈ ಹಾಕುತ್ತಾನೆ. ಕಸ ಗುಡಿಸುತ್ತಿರುವ ಹೆಂಡತಿಯ ಹಿಂದಿನಿಂದ ಗಂಡ ಬಕೆಟ್ ತೆಗೆದುಕೊಂಡು ಬಂದು ಹಠಾತ್ ಹೆಂಡತಿಯ ತಲೆಗೆ ಹಾಕಿ ಆಕೆಗೆ ಎರಡೇಟು ಕೊಟ್ಟು ನಂತರ ತಾನು ಸಹ ಬೇರೊಂದು ಬಕೆಟ್ ತನ್ನ ತಲೆಗೆ ಹಾಕಿಕೊಂಡು ಈ ಕೆಲಸವನ್ನು ಬೇರೆ ಯಾರೋ ಒಬ್ಬರು ಮಾಡಿದ್ದಾರೆ ಎಂದು ಬಿಂಬಿಸುವ ಹಾಗೆ ನಾಟಕ ಮಾಡುತ್ತಾನೆ. ಆಗ ಹೆಂಡತಿ ತನ್ನ ಮತ್ತು ಗಂಡನ ಮುಖದ ಮೇಲೆ ಹಾಕಿರುವ ಬಕೆಟ್ ತೆಗೆದು ಗಂಡನಿಗೆ ಮನೆಯ ಮೂಲೆಯಲ್ಲಿ ತೋರಿಸುತ್ತಾಳೆ. ಅದನ್ನು ನೋಡುತ್ತಲೇ ಗಂಡ ಅಕ್ಷರಶಃ ನಿಂತಲ್ಲಿಯೇ ತಣ್ಣಗಾಗುತ್ತಾನೆ. ಕಾರಣ ಅಲ್ಲಿ ಇರುತ್ತೆ CCTV ಕ್ಯಾಮೆರಾ. ಇದು ಗಂಡನ ತಲೆಯಲ್ಲಿ ಹೊಳೆದಿರುವುದೇ ಇಲ್ಲ.

ವೀಡಿಯೋ ನೋಡಿ

 

View this post on Instagram

 

A post shared by Ajeesh Shonima (@mallucouple_2.0)

ಪ್ರಸ್ತುತ ಈ ಕಾಮಿಡಿ ವಿಡಿಯೋ mallucouple_2.0 ಹೆಸರಿನ ಐಡಿಯಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಮಿಲಿಯನ್ ಲೆಕ್ಕಾಚಾರದಲ್ಲಿ ವೀಕ್ಷಣೆಯನ್ನು ಪಡೆದಿದ್ದು 3 ಲಕ್ಷ 12 ಸಾವಿರ ನೆಟ್ಟಿಗರು ಈ ವಿಡಿಯೋಗೆ ಲೈಕ್ ಸಹ ಮಾಡಿದ್ದಾರೆ.

Leave a Comment

Your email address will not be published. Required fields are marked *