ಟ್ಯಾಕ್ಸ್ ಎಕ್ಸೆಂಪ್ಷನ್ ಇನ್ ಬಜೆಟ್; ಸರಕಾರಿ ನೌಕರರಿಗೆ ಸಿಹಿಸುದ್ದಿ! ಮುಂಬರುವ ಬಜೆಟ್ ನಲ್ಲಿ ಈ 3 ಬಂಪರ್ ಗಿಫ್ಟ್ ಗಳ ನಿರೀಕ್ಷೆ!
ನವದೆಹಲಿ, ವೃತ್ತ ಸಂಸ್ಥೆ:- Tax Exemption In Budget ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು 2022-23 ರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಈಗ ನಾಲ್ಕನೆಯ ಬಾರಿ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಸಾದರ ಪಡಿಸುವ ಮುನ್ನ ವಿವಿಧ ಕ್ಷೇತ್ರಗಳಿಂದ ಟ್ಯಾಕ್ಸ್ ನಲ್ಲಿ ಸಾಕಷ್ಟು ರಿಯಾಯತಿಯ ನಿರೀಕ್ಷೆಗಳನ್ನು ಇಡಲಾಗಿದೆ. ಕೃಷಿ, ರಿಯಲ್ ಎಸ್ಟೇಟ್ ಮತ್ತು ಆರೋಗ್ಯ ಹೀಗೆ ಯಾವುದೇ ಕ್ಷೇತ್ರವಾಗಿರಲಿ ಪ್ರತಿಯೊಬ್ಬರೂ ಏನಾದರೊಂದು ಬಜೆಟ್ ನಿಂದ ಅಪೇಕ್ಷೆಯನ್ನಿಟ್ಟಿದ್ದಾರೆ.
ಟ್ಯಾಕ್ಸ್ ರಿಯಾಯತಿಯಲ್ಲಿ ಅನೇಕ ವರ್ಷಗಳಿಂದ ಹೆಚ್ಚಳವಾಗಿಲ್ಲ:- ಮೋದಿ ಸರಕಾರವು ನೌಕರ ವರ್ಗಕ್ಕೆ ತೆರಿಗೆಯಲ್ಲಿ ಸೂಟ್ ನೀಡುವ ಬಗ್ಗೆ ವಿಚಾರ ಮಾಡಲಿದೆ. ಕಳೆದ ಅನೇಕ ವರ್ಷಗಳಿಂದ ಯಾವುದೇ ರೀತಿಯ ರಿಯಾಯತಿ ನೀಡಿಲ್ಲ. ಹೀಗಾಗಿ ಎಲೆಕ್ಷನ್ ಮೊದಲು ತೆರಿಗೆಯಲ್ಲಿ ಸೌಲಭ್ಯ ಘೋಷಿಸಿ ನೌಕರ ವರ್ಗಕ್ಕೆ ತನ್ನತ್ತ ಸೆಳೆಯುವ ಪ್ರಯತ್ನ ಸರಕಾರ ಮಾಡಲಿದೆ ಎಂಬ ಸಂಕೇತಗಳು ಕಂಡು ಬರುತ್ತಿವೆ. ಇದರ ಜೊತೆಗೆ ನೌಕರ ವರ್ಗಕ್ಕೆ ಮತ್ತಿನ್ನೇನು ಲಾಭ ದೊರೆಯುವ ಸಂಕೇತಗಳಿವೆ ಎಂಬುದು ನೋಡುವ.
ತೆರಿಗೆ ರಿಯಾಯತಿ ಮಿತಿ ಹೆಚ್ಚಾಗಲಿದೆ. ಸದ್ಯದ ಮಿತಿ 2.5 ಲಕ್ಷ ರೂಪಾಯಿಗಳಷ್ಟು ಇದೆ. ಕಳೆದ 8 ವರ್ಷಗಳಲ್ಲಿ ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೊದಲು ಈ ಸೌಲಭ್ಯವನ್ನು 2 ರಿಂದ 2.5 ಲಕ್ಷ ರೂಪಾಯಿಗಳವರೆಗೆ ಹೆಚ್ಚಳ ಮಾಡಲಾಗಿತ್ತು.
ಈಗ ಈ ವಿನಾಯಿತಿ 2.5 ದಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ತೆರಿಗೆದಾರರ ಆಗ್ರಹವಾಗಿದೆ. ಆದರೆ ಸರಕಾರ ಇದನ್ನು 3 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸುವ ನಿರೀಕ್ಷೆ ಇಡಲಾಗಿದೆ. ಸದ್ಯ UP ಯಂತಹ ದೊಡ್ಡ ರಾಜ್ಯದಲ್ಲಿ ಎಲೆಕ್ಷನ್ ನಡೆಯಲಿದೆ. ಈ ಕಾರಣದಿಂದ ಸರಕಾರ ನೌಕರ ವರ್ಗಕ್ಕೆ ಸಂತೋಷ ಪಡಿಸುವ ಚಿಹ್ನೆಗಳು ಕಂಡು ಬರುತ್ತಿವೆ.
80 C ನಲ್ಲಿ ಹೆಚ್ಚಾಗಬಹುದು ರಿಯಾಯತಿಯ ವ್ಯಾಪ್ತಿ – ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ 80 C ಅಡಿಯಲ್ಲಿ 1.5 ಲಕ್ಷದ ವರೆಗೆ ರಿಯಾಯತಿ ನೀಡಲಾಗಿದೆ. 2014 ರಲ್ಲಿ 1 ರಿಂದ 1.5 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಲಾಗಿತ್ತು. ಸಂಬಳ ಪಡೆಯುವ ವ್ಯಕ್ತಿಗಳ ತೆರಿಗೆ ಉಳಿಸುವದಕ್ಕಾಗಿ ಈ ವಿಭಾಗ ತುಂಬಾ ಮಹತ್ವದ್ದಾಗಿದೆ. ಬಜೆಟ್ ನಲ್ಲಿ ಈ ಮಿತಿಯನ್ನು 1.5 ದಿಂದ 2 ಲಕ್ಷ ರೂಪಾಯಿಗಳ ವರೆಗೆ ಹೆಚ್ಚಿಸುವ ನಿರೀಕ್ಷೆ ಇದೆ.
ತೆರಿಗೆ ಮುಕ್ತ ವಾಗುವ ನಿರೀಕ್ಷೆ ಇದೆ 3 ವರ್ಷಗಳ FD – ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ (IBA) ತೆರಿಗೆ ಮುಕ್ತ FD ಯ ಲಾಕ್ ಇನ್ ಅವಧಿಯನ್ನು 5 ವರ್ಷಗಳಿಂದ ಮೂರು ವರ್ಷಗಳವರೆಗೆ ಕಡಿಮೆ ಮಾಡಬೇಕು ಎಂದು ಡಿಮಾಂಡ್ ಮಾಡಿದೆ. ಬ್ಯಾಂಕುಗಳು ಸಹ ಬಡ್ಡಿದರ ಕಡಿಮೆ ಮಾಡಿವೆ. PPF ಮೇಲಿನ ಬಡ್ಡಿದರ FD ಗಿಂತಲೂ ಕಡಿಮೆ ಇದೆ. ಹೀಗಾಗಿ ಗ್ರಾಹಕರು FD ಯಲ್ಲಿ ಕಡಿಮೆ ಇನ್ವೆಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬಂಡವಾಳದಾರರು ಮ್ಯೂಚುವಲ್ ಫಂಡ್ ಮತ್ತು ಶೇರ್ಸ್ ಕಡೆಗೆ ವಾಲುತ್ತಿದ್ದಾರೆ. ಈ ವಿಷಯದಲ್ಲಿ ಮೂರು ವರ್ಷಗಳ FD ಟ್ಯಾಕ್ಸ ಸೇವರ್ FD ಯಲ್ಲಿ ಸಮಾವೇಶ ಮಾಡುವ ನಿರೀಕ್ಷೆ ಇದೆ.