ತಂಗಿಯ ಮದುವೆಗೆ ಬರುವ ಮುನ್ನವೇ ಅಣ್ಣನ ವೀರ ಮ#ರಣ, ಅಣ್ಣನ 100 ಕಮಾಂಡೋ ಮಿತ್ರರು ಕೂಡಿ ತಂಗಿಯ ಮದುವೆಯಲ್ಲಿ ಬಂದು ಮಾಡಿದ್ದನ್ನು ಕೇಳಿದರೆ ಆಶ್ಚರ್ಯಪಡುವಿರಿ!

ನಾವು ಯಾವಾಗ ಹಬ್ಬ-ಹರಿದಿನಗಳನ್ನು ಆಚರಿಸುತ್ತಿರುತ್ತೇವೆಯೋ ಆ ಸಮಯದಲ್ಲಿ ನಮ್ಮ ದೇಶ ಕಾಯುವ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮನ್ನು ರಕ್ಷಣೆ ಮಾಡುತ್ತಿರುತ್ತಾರೆ. ಆದ್ದರಿಂದಲೇ ನಾವು ಆರಾಮವಾಗಿ ಹಬ್ಬವನ್ನು ಆಚರಿಸಲು ಸಾಧ್ಯವಾಗುವದು. ಕೆಲವು ದಿವಸಗಳ ಹಿಂದೆ ದೀಪಾವಳಿ ಹಬ್ಬ ಆಗಿ ಹೋಯಿತು. ಆದರೆ, ಅನೇಕ ಸೈನಿಕರಿಗೆ ದೀಪಾವಳಿ ಹಬ್ಬವನ್ನು ಆಚರಿಸುವ ಸಲುವಾಗಿ ತಮ್ಮ ಮನೆಗೆ ಬರಲು ಸಾಧ್ಯವಾಗಲಿಲ್ಲ.

ಸೈನಿಕರು ಮನೆಗೆ ಬರದ ಕಾರಣ ಹೇಳುವ ಅವಶ್ಯಕತೆ ಏನಿಲ್ಲ, ಏಕೆಂದರೆ ಆ ಕಾರಣ ನಿಮಗೆಲ್ಲ ತಿಳಿದ ಸಂಗತಿಯಾಗಿದೆ. ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಹ ಈ ಬಾರಿ ದೀಪಾವಳಿಯನ್ನು ದೇಶದ ಯೋಧರೊಂದಿಗೆ ಆಚರಣೆ ಮಾಡಿದರು. ಮೋದಿಯವರು ಯೋಧರಿಗೆ ಸಿಹಿಯನ್ನು ಸಹ ಹಂಚಿದರು. ಎಷ್ಟೋ ಸಲ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಈ ಹಬ್ಬ ಅಥವಾ ಮನೆಯಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಸಹ ಬರಲು ಆಗುವದಿಲ್ಲ. ಅನೇಕ ಯೋಧರು ಸುಟ್ಟಿ ಪಡೆದುಕೊಳ್ಳುವ ಸಲುವಾಗಿ ತುಂಬಾನೇ ಪ್ರಯತ್ನ ಮಾಡುತ್ತಿರುತ್ತಾರೆ ಆದರೆ ಕೆಲವೊಮ್ಮೆ ಅವರಿಗೆ ಸುಟ್ಟಿ ದೊರೆಯುವದೇ ಇಲ್ಲ.

ನಾವು ಇಂದು ನಿಮಗೆ ಒಂದು ಘಟನೆಯ ಕುರಿತು ಹೇಳುವವರಿದ್ದೇವೆ, ಆ ಘಟನೆಯಲ್ಲಿ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣನಿಗೆ ತಂಗಿಯ ಮದುವೆಗೆ ಬರಲು ಸಾಧ್ಯವಾಗಲಿಲ್ಲ ಏಕೆಂದರೆ ಮದುವೆಗೆ ಮುಂಚೆನೇ ಅಣ್ಣನು ದೇಶದ ರಕ್ಷಣಾ ಕಾರ್ಯದಲ್ಲಿ ವೀರಮರ#ಣ ಹೊಂದಿದನು. ತದನಂತರ 100 ಕಮಾಂಡೋ ತಂಗಿಯ ಮದುವೆಯಲ್ಲಿ ಬಂದರು, ಬಂದು ಅವರು ಮಾಡಿದ್ದೇನು? ತಿಳಿದುಕೊಳ್ಳೋಣ ಬನ್ನಿ.

ಬಿಹಾರ್ ನಲ್ಲಿ ವಾಸಿಸುವ ಈ ಯೋಧ ಭಾರತೀಯ ಸೈನ್ಯದಲ್ಲಿಯ ಒಬ್ಬ ಜವಾನ್ ಆಗಿದ್ದನು. ಕಳೆದ ಹಲವಾರು ವರ್ಷಗಳಿಂದ ದೇಶದ ರಕ್ಷಣೆಗಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಬಿಹಾರ ನಲ್ಲಿಯ ಒಂದು ಚಿಕ್ಕ ಊರಿನಲ್ಲಿ ವಾಸಿಸುವ ತೇಜ್ ನಾರಾಯಣ ಸಿಂಗ್ ಇವರ ಮಗಳು ಶಶಿಕಲಾ ಸಿಂಗ್ ಇವರ ಮದುವೆ ಇತ್ತು. ಈ ಮದುವೆಯ ಸಲುವಾಗಿ ತುಂಬಾನೇ ತಯಾರಿ ಮಾಡಿದ್ದರು. ಈ ಮದುವೆಯ ಸಲುವಾಗಿ ಶಶಿಕಲಾ ಅವರ ಸಹೋದರ ಜ್ಯೋತಿ ಪ್ರಕಾಶ ನಿರಾಲ್ ಅವರು ತುಂಬಾ ಕನಸ್ಸನ್ನು ಕಂಡಿದ್ದರು. ಅವರು ಭಾರತೀಯ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತಂಗಿಯ ಮದುವೆಯ ಕುರಿತು ಅಷ್ಟೊಂದು ಕನಸ್ಸು ಕಟ್ಟಿಕೊಂಡಿರುವ ಅಣ್ಣ ಮದುವೆಗೆ ಬರುವ ಮುನ್ನವೇ ದೇಶದ ಸಲುವಾಗಿ ಹು#ತಾತ್ಮರಾದರು.

ಜ್ಯೋತಿ ಪ್ರಕಾಶ್ ನಿರಾಲ್ ಇವರು ಜೋಧಪುರ್ ನಲ್ಲಿ ಕರ್ತ್ಯವ್ಯದ ಮೇಲೆ ಇದ್ದರು. ಈ ಸಮಯದಲ್ಲಿ ಭ#ಯೋತ್ಪಾದಕರು ಫೈ#ರಿಂಗ್ ಮಾಡಲು ಪ್ರಾರಂಭಿಸಿದರು. ಈ ನಡುವೆ ನಿರಾಲ್ ಅವರು ಎರಡು ಭಯೋ#ತ್ಪಾದಕರನ್ನು ಮ#ಣ್ಣು ಮಾಡಿದರು. ಈ ಗುಂಡಿನ ಸುರಿಮಳೆಯಲ್ಲಿ ತಮ್ಮ ಗೆಳೆಯನ ಪ್ರಾಣ ಸಹ ಉಳಿಸಿದರು. ಆದರೆ ಅವರೊಡಗಿನ ಗುಂಡಿನ ಸುರಿಮಳೆಯಲ್ಲಿ ಇವರಿಗೂ ಸಹ ಗುಂಡು ತಾಗಿ ಸ್ಥಳದಲ್ಲೇ ಪ್ರಾ#ಣ ಬಿಟ್ಟರು. ಈ ಸುದ್ಧಿ ಅವರ ತಂದೆಗೆ ತಿಳಿಯುತ್ತಿದ್ದಂತೆಯೇ ಅವರು ತುಂಬಾ ಚಿಂತೆಗೆ ಒಳಗಾದರು. ಒಂದು ಕಡೆ ಮಗಳ ಮದುವೆ ಇದ್ದರೆ ಇನ್ನೊಂದೆಡೆ ಮಗನ ವೀರಮ#ರಣ ಇಂತಹ ವೇಳೆಯಲ್ಲಿ ತಾವು ಏನು ಮಾಡಬೇಕೆಂದು ದಿಕ್ಕು ದೋಚದಂತಾಯಿತು.

ಆದರೂ ಕೂಡಾ ಎಲ್ಲವನ್ನು ಸಹಿಸಿಕೊಂಡು ಮಗಳ ಮದುವೆ ಮಾಡಲು ಸಿದ್ಧರಾದರು. ತನ್ನ ಮಗಳ ಮದುವೆಯಲ್ಲಿ ತನ್ನ ಮಗ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು ಮನದಲ್ಲಿಯೇ ಕೊರಗುತ್ತಿದ್ದರು. ಮಗಳ ಮದುವೆ ಸುಜಿತ್ ಕುಮಾರ ಅವರೊಂದಿಗೆ ನಿಶ್ಚಯ ವಾಗಿತ್ತು. ಆದರೆ ಮದುವೆಯಲ್ಲಿ ಮಗ ಇಲ್ಲದ ಕೊರತೆಯನ್ನು ಹೋಗಲಾಡಿಸಲು ಜ್ಯೋತಿ ಪ್ರಕಾಶ ಅವರ 100 ಕಮಾಂಡೋ ಗೆಳೆಯರು ಮದುವೆಗೆ ಬಂದರು ಇದನ್ನು ಕಂಡು ತಂದೆ ಹಾಗೂ ಮಗಳು ತುಂಬಾ ಖುಷಿ ಪಟ್ಟರು. ತದನಂತರ ಬಿಹಾರಿ ಸಂಪ್ರದಾಯದ ಪ್ರಕಾರ ವಧುವಿಗೆ ವಿದಾಯ ಹೇಳುತ್ತಿದ್ದರು ಅಂತಹ ಸಮಯದಲ್ಲಿ ಸೈನ್ಯದಿಂದ ಬಂದ 100 ಕಮಾಂಡೋ ತಮ್ಮ ಕೈಯನ್ನು ನೆಲದ ಮೇಲೆ ಇಡುತ್ತಾರೆ. ಇದನ್ನು ಕಂಡು ತಂಗಿಯ ಕಣ್ಣಲ್ಲಿ ಅನಂದಭಾಷ್ಪ ಹರಿಯತೊಡಗಿದವು. ಅಣ್ಣನ ಕೊರತೆ ಇಲ್ಲದ ಹಾಗೆ ಮಾಡಿರುವ ಎಲ್ಲ ಯೋಧರ ಕೈ ಮೇಲೆ ತನ್ನ ಹೆಜ್ಜೆಯನ್ನಿಡುತ್ತ ಮುಂದೆ ಸಾಗಿದಳು. ಇದನ್ನು ಕಂಡು ತಂದೆ ಹೇಳಿದ್ದೇನೆಂದರೆ” ನನ್ನ ಮಗನ ಇಲ್ಲದಿರುವ ಕೊರತೆಯನ್ನು ಈ ನೂರು ಕಮಾಂಡೋಗಳು ಪೂರ್ಣ ಮಾಡಿದ್ದಾರೆ ಅವರಿಗೆ ನಾನು ಚಿರ ಋಣಿ”ಎಂದರು.

ಜ್ಯೋತಿ ಪ್ರಕಾಶ್ ಅವರು ಅಶೋಕ ಚಕ್ರದಿಂದ ಸನ್ಮಾನಿಸಲಾದ ಒಬ್ಬ ನಿಷ್ಠಾವಂತ ಯೋಧರಾಗಿದ್ದರು. ಈ ಯೋಧನಿಗೆ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಶೋಕ ಚಕ್ರವನ್ನು ಪ್ರದಾನ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆ ವ್ಯಾಪಕ ಚರ್ಚೆಗೆ ಒಳಗೊಂಡಿದೆ. ಒಬ್ಬ ನೆಟ್ಟಿಗನ ಪ್ರಕಾರ, ಒಬ್ಬ ಸಹೋದರಿ ಒಬ್ಬ ಸಹೋದರನನ್ನು ಕಳೆದುಕೊಂಡಾಗ ಆ ದೇವರು ನೂರು ಸಹೋದರರು ಅವಳಿಗೆ ನೀಡಿದನು ಎಂದು ಹೇಳುತ್ತಾರೆ. ಜ್ಯೋತಿ ಪ್ರಕಾಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.