ತಂದೆಯ ಹುಟ್ಟುಹಬ್ಬಕ್ಕೆ ಮಗ ನೀಡಿದ ಅದ್ಭುತ ಸರ್ಪ್ರೈಸ್ ಗಿಫ್ಟ್; ತಂದೆ ಕುಣಿದ ಹುಚ್ಚೆದ್ದು, ಎಮೋಷನಲ್ VIDEO ವೈರಲ್..!

.ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಇಷ್ಟ ಪಡುತ್ತಿದ್ದಾರೆ. ಸದ್ಯಕ್ಕೆ ಈ ವಿಡಿಯೋಗೆ ಲಕ್ಷಕ್ಕೂ ಮೀರಿ ವೀಕ್ಷಣೆಗಳು ದೊರಕಿವೆ. ಜೊತೆಗೆ ನೆಟ್ಟಿಗರು ಫುಲ್ ಫಿದಾ ಆಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಇಂಟರ್ನೆಟ್ ಯೂಸರ್ ನಿಜವಾಗಿಯೂ ಈ ವಿಡಿಯೋ ತುಂಬಾ ಭಾವುಕವಾಗಿದೆ ಎಂದಿದ್ದಾನೆ. ಇನ್ನೊಬ್ಬ ನೆಟ್ಟಿಗ ಈ ರೀತಿಯ ಎಮೋಷನಲ್ ವಿಡಿಯೋ ನಾನು ಇಲ್ಲಿಯವರೆಗೆ ನೋಡಿಯೇ ಇಲ್ಲ ಎಂದಿದ್ದಾನೆ.

ಪೋಷಕರು ತಮ್ಮ ಮಕ್ಕಳಿಗೆ ಜಗತ್ತಿನ ಪ್ರತಿಯೊಂದು ಸುಖ ಸಂತೋಷವನ್ನು ನೀಡಲು ಬಯಸುತ್ತಾರೆ. ಇದಕ್ಕಾಗಿ ಪೋಷಕರು ಹಗಲು ರಾತ್ರಿ ಕಷ್ಟಪಡಲು ಇಷ್ಟ ಪಡುತ್ತಾರೆ. ಅದೇ ರೀತಿ ಮಕ್ಕಳು ಸಹ ತಮ್ಮ ತಂದೆ ತಾಯಿಗಳಿಗೆ ಸಾಕಷ್ಟು ಪ್ರೀತಿಯನ್ನು ನೀಡುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ಎಮೋಷನಲ್ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತನ್ನ ಮಗನ ಪ್ರತಿ ತಂದೆಯ ಮಮತೆ ಉಕ್ಕಿ ಉಕ್ಕಿ ಹರಿಯುವುದನ್ನು ನೋಡಬಹುದು.

ಈ ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ತಂದೆಯ ಹುಟ್ಟು ಹಬ್ಬದ ಕಾರ್ಯಕ್ರಮ ನಡೆದಿರುತ್ತದೆ. ಈ ಸಂದರ್ಭದಲ್ಲಿ ಕೆನಡಾದಲ್ಲಿ ನೆಲೆಸಿರುವ ಮಗ ತನ್ನ ತಂದೆಗೆ ತಾನು ಮನೆಗೆ ಬಂದ ಸುಳಿವು ನೀಡದೆ ಒಮ್ಮೆಲೆ ತಂದೆಯ ಮುಂದೆ ಪ್ರತ್ಯಕ್ಷನಾಗಿಬಿಡುತ್ತಾನೆ. ಈ ಸಂದರ್ಭದಲ್ಲಿ ತಂದೆಯ ಕಣ್ಣುಗಳನ್ನು ಮುಚ್ಚಲಾಗಿತ್ತು. ಆಗ ವಿದೇಶದಿಂದ ಬಂದ ಮಗ ತಂದೆಯ ಮುಂದೆ ಕೇಕ್ ತಂದು ಇಡುತ್ತಾನೆ. ತಂದೆಯ ಕಣ್ಣುಗಳನ್ನು ಒಮ್ಮೆಲೆ ತೆರೆಯಲಾಗಿ ಹಠಾತ್ ಮಗನ ಮುಖ ನೋಡಿದ ತಂದೆ ಎಲ್ಲವನ್ನು ಬಿಟ್ಟು ಮಗನನ್ನು ತಬ್ಬಿ ಹುಚ್ಚೆದ್ದು ಕುಣಿಯಲು ಮತ್ತು ಆನಂದಾಶ್ರುಗಳನ್ನು ಹೊರ ಹಾಕಲು ಶುರು ಮಾಡುತ್ತಾನೆ.

ನೋಡಿ ಈ ವಿಡಿಯೋ…

https://twitter.com/Gulzar_sahab/status/1580448954952847361?ref_src=twsrc%5Etfw%7Ctwcamp%5Etweetembed%7Ctwterm%5E1580448954952847361%7Ctwgr%5E9995a6334d3d56f136924e8d9d46e58b52867be7%7Ctwcon%5Es1_c10&ref_url=https%3A%2F%2Fd-42342533714088234871.ampproject.net%2F2210010655000%2Fframe.html

ಈ ಫುಲ್ ಎಮೋಷನಲ್ ವಿಡಿಯೋವನ್ನು ಟ್ವಿಟರ್ ನಲ್ಲಿ @Gulzar_sahab ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಇಲ್ಲಿ ಮಗ ಕೆನಡಾದಿಂದ ತನ್ನ ತಂದೆಗೆ ಸರ್ಪ್ರೈಸ್ ನೀಡಲು ತಾನೇ ಗಿಫ್ಟ್ ರೀತಿಯಲ್ಲಿ ಬಂದಿದ್ದಾನೆ. ಮಗನನ್ನು ನೋಡಿದ ತಂದೆಗೆ ಆಕಾಶ ಮೂರೇ ಗೇಣು ಉಳಿದಿತ್ತು.