Articles

ಚಿರತೆಯು ಅಟ್ಯಾಕ್ ಮಾಡುತ್ತಲೇ ನಾಯಿಯು ಚಿರತೆಯ ಬಾಯಿಯನ್ನೇ ಹಿಡಿಯಿತು ತನ್ನ ಬಾಯಿಯಲ್ಲಿ! ನೋಡಿ ಕತರ್ನಾಕ್ ವಿಡಿಯೋ…

ಚಿರತೆಯ ಬಾಯಿಯನ್ನೇ ತನ್ನ ಬಾಯಿಯಲ್ಲಿ ಜೋರಾಗಿ ಹಿಡಿದ ವಿಡಿಯೋ ಒಂದು ಸದ್ಯ ಸೋಶಿಯನ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಪ್ಪು ಬಣ್ಣದ ನಾಯಿಯೊಂದು ಚಿರತೆಗೆ ಅದರದೇ ಭಾಷೆಯಲ್ಲಿ ಚೆನ್ನಾಗಿ ಪಾಠ ಕಲಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಎಲ್ಲ ಕಡೆಗೆ ಓಡಾಡುತ್ತಿದೆ.

ಎಲ್ಲಿ ನಡೆದಿದೆ ಈ ಘಟನೆ?

ಮಹಾರಾಷ್ಟ್ರದ ಅಂಬೇಗಾಂವ್ ಹೆಸರಿನ ಊರಿನಲ್ಲಿ ಈ ಘಟನೆ ನಡೆದಿದೆ. ಈ ನಾಯಿಯು ಗಣೇಶ ಹೆಸರಿನ ರೈತನು ಸಾಕಿದ ನಾಯಿಯಾಗಿದೆ. ಕಳೆದ ಹತ್ತು ವರ್ಷಗಳಿಂದ ಈ ನಾಯಿಯು ಗಣೇಶ್ ಅವರ ಮನೆಯಲ್ಲಿ ಬೆಳೆದಿದೆ. ರಾತ್ರಿ ಸಮಯದಲ್ಲಿ ಚಿರತೆ ಒಂದು ನಾಯಿಯ ಮೇಲೆ ಅಟ್ಯಾಕ್ ಮಾಡಿದೆ. ಮೊದಮೊದಲು ಚಿರತೆಯು ತನ್ನ ವೇಗ ಮತ್ತು ಬಲ ಪ್ರಯೋಗಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವ ಪ್ರಯತ್ನ ಮಾಡಿತು. ಆದರೆ ನಾಯಿಯು ತಿರುಗಿ ಅದರದೇ ಪ್ಲಾನ್ ಉಲ್ಟಾ ಮಾಡಿ ಅದನ್ನು ಓಡಿಸಿ ಕಳಿಸುವಲ್ಲಿ ಯಶಸ್ವಿಯಾಗಿದೆ.

ಏನಿದೆ ವಿಡಿಯೋದಲ್ಲಿ…

30 ಸೆಕೆಂಡಿನ ಈ ವಿಡಿಯೋದಲ್ಲಿ ಮನುಷ್ಯನೊಬ್ಬ ಎರಡು ಪ್ರಾಣಿಗಳ ಕಾದಾಟ ನಡೆದಾಗ ಟಾರ್ಚಿನ ಪ್ರಕಾಶ ಚೆಲ್ಲಿದ್ದಾನೆ. ಈ ವಿಡಿಯೋದಲ್ಲಿ ಕಪ್ಪು ನಾಯಿ ಮತ್ತು ಚಿರತೆ ಹೊರತಾಗಿ ಬೇರೆ ಯಾರೂ ಕಾಣಿಸುತ್ತಿಲ್ಲ. ಕತ್ತಲಿನಿಂದಾಗಿ ನಾಯಿಯು ಚಿರತೆಯ ಬಾಯಿಯನ್ನು ಹೇಗೆ ಲಾಕ್ ಮಾಡಿತ್ತು ಎಂಬುದು ಮಾತ್ರ ತಿಳಿದು ಬಂದಿಲ್ಲ. ಕೊನೆಗೆ ನಾಯಿಯು ಚಿರತೆಯನ್ನು ಹೆದರಿಸಿ ಓಡಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ.

Leave a Comment

Your email address will not be published. Required fields are marked *