ತಂದೆ ರಾಜ್ ಕುಂದ್ರಾ ಹಾಡು ಕೇಳಿ ಕೋಪಗೊಂಡ ಬೇಬಿ ಸಮೀಶಾ ಶೆಟ್ಟಿ: ಕ್ಯೂಟ್ ವೀಡಿಯೋ ಶೇರ್ ಮಾಡಿದ ಶಿಲ್ಪಾ ಶೆಟ್ಟಿ
ಬಾಲಿವುಡ್ ನ ಸೆಲೆಬ್ರಿಟಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಇಡೀ ಕುಟುಂಬವು ರಜಾ ದಿನಗಳನ್ನು ಸಂತೋಷವಾಗಿ ಕಳೆಯುವುದಕ್ಕಾಗಿ ಗೋವಾಕ್ಕೆ ಆಗಮಿಸಿದೆ. ಕಳೆದ ಕೆಲವು ದಿನಗಳಿಂದಲೂ ಕೂಡಾ ಅವರ ಕುಟುಂಬ ಗೋವಾದಲ್ಲಿ ವಾಸ್ತವ್ಯವನ್ನು ಹೂಡಿದ್ದು, ತಮ್ಮ ರಜಾದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ವೇಳೆ ನಟಿ ಶಿಲ್ಪಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಇತ್ತೀಚೆಗಷ್ಟೇ ನಟಿ ಶಿಲ್ಪಾ ಶೆಟ್ಟಿ ಒಂದು ಸುಂದರವಾದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರ ಪತಿ ರಾಜ್ ಕುಂದ್ರಾ ಒಂದು ಹಾಡನ್ನು ಹಾಡುತ್ತಿರುವುದನ್ನು ಹಾಗೂ ಅವರು ಹಾಡನ್ನು ಹಾಡುವ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಂಪತಿಯ ಮುದ್ದಿನ ಮಗಳು ಸಮೀಶಾ ತನ್ನ ಅಪ್ಪನ ಕಡೆಗೆ ಕೋಪದಿಂದ ನೋಡುತ್ತಿರುವುದನ್ನು ನಾವು ಗಮನಿಸಬಹುದು.
ಶಿಲ್ಪಾ ಶೆಟ್ಟಿ ಶೇರ್ ಮಾಡಿದ ಈ ವಿಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದು, ಶಿಲ್ಪಾ ಅವರ ಫ್ಯಾನ್ಸ್ ಈ ವಿಡಿಯೋವನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳು ಕಮೆಂಟುಗಳ ಮೂಲಕ ತಮ್ಮ ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ. ಸಮೀಶಾ ಶೆಟ್ಟಿ ಕುಂದ್ರಾ ಬೇಬಿಯ ಈ ಸುಂದರವಾದ ವಿಡಿಯೋವನ್ನು ಮೊದಲಿಗೆ ರಾಜ್ ಕುಂದ್ರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಾದ ನಂತರ ನಟಿ ಶಿಲ್ಪಾ ಶೆಟ್ಟಿ ಕೂಡಾ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋವನ್ನು ನಾವು ನೋಡಿದಾಗ ಅದರಲ್ಲಿ ರಾಜ್ ಕುಂದ್ರಾ ಹಾಡೊಂದನ್ನು ಹಾಡಲು ಪ್ರಾರಂಭಿಸಿದ್ದಾದೆ. ಅವರು ಹಾಡು ಕೇಳಿದ ಕೂಡಲೇ ಸಮೀಶಾ ಶೆಟ್ಟಿ ತನ್ನ ಅಪ್ಪನ ಕಡೆಗೆ ಕೋಪದಿಂದ ನೋಡುತ್ತಾಳೆ. ಆದರೂ ಸಹ ರಾಜ್ ಕುಂದ್ರಾ ತಮ್ಮ ಹಾಡನ್ನು ನಿಲ್ಲಿಸದೇ, ಮುಂದುವರೆಸಿದಾಗ ಮಗುವಿನ ಮುಖದಲ್ಲಿ ಕೋಪ ಕೂಡ ಹೆಚ್ಚಾಗುತ್ತದೆ. ಈ ವಿಡಿಯೋವನ್ನು ಶೇರ್ ಮಾಡಿ ಕೊಂಡ ಶಿಲ್ಪಾ ಶೆಟ್ಟಿ ವಿಡಿಯೋದ ಜೊತೆಗೆ ತಮ್ಮ ಪೋಸ್ಟ್ ನಲ್ಲಿ ” ಚಿಂತೆಯನ್ನು ಕಡಿಮೆ ಮಾಡಿ ಹೆಚ್ಚು ಹಾಡನ್ನು ಹಾಡಿ, ಸಮೀಶಾ ಶೆಟ್ಟಿ ತನ್ನ ತಂದೆಗೆ ನೀವು ಹಾಡು ಹಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾಳೆ” ಎಂದು ಬರೆದುಕೊಂಡಿದ್ದು, ಅದೇ ಸಂದರ್ಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ
ವಿಡಿಯೋದಲ್ಲಿ ಸಮೀಶಾ ಶೆಟ್ಟಿ ಹಳದಿ ಹಾಗೂ ನೀಲಿಬಣ್ಣದ ಡ್ರೆಸ್ ನಲ್ಲಿ ಬಹಳ ಮುದ್ದಾಗಿ ಕಾಣುತ್ತಾಳೆ. ಮಗುವಿನ ಕ್ಯೂಟ್ ನೆಸ್ ನೋಡಿದ ಅವರ ಕುಟುಂಬದ ಸದಸ್ಯರು ಬಹಳ ಪ್ರೀತಿಯಿಂದ ಮುದ್ದು ಮಗುವನ್ನು ಹೊಗಳುತ್ತಿರುವುದನ್ನು ಕೂಡಾ ನಾವು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಇನ್ನು ಶಿಲ್ಪಾ ಶೆಟ್ಟಿ ಅವರ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಇನ್ನು ಕೆಲವೇ ದಿನಗಳಲ್ಲಿ ಅವರು ತಮ್ಮ ಹೊಸ ಸಿನಿಮಾ ನಿಕಮ್ಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರ ಅಭಿಮನ್ಯು ದಾಸಾನಿ ಮತ್ತು ಶೆರ್ಲಿ ಸೆಟಿಯಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಡಿಯೋ ನೋಡಿ.
ಇದಲ್ಲದೆ, ಶಿಲ್ಪಾ ಶೆಟ್ಟಿ ಹಂಗಮಾ 2 ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅವರೊಂದಿಗೆ ನಟ ಪರೇಶ್ ರಾವಲ್ ಮತ್ತು ಮೀಜನ್ ಜಾಫ್ರಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಶಿಲ್ಪಾ ಶೆಟ್ಟಿ ಮುಂಬೈನಲ್ಲಿ ತಮ್ಮ ಕನಸಿನ ಉದ್ದಿಮೆಯಾದ ರೆಸ್ಟೋರೆಂಟ್ ಬ್ಯುಸಿನೆಸ್ ಅನ್ನು ಕೂಡಾ ಆರಂಭಿಸಿದ್ದಾರೆ. ಈ ವಿಷಯ ಕೂಡಾ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಶಿಲ್ಪಾ ಶೆಟ್ಟಿ ಅವರ ಈ ರೆಸ್ಟೋರೆಂಟ್ ಗೆ ಬಾಲಿವುಡ್ ನಟ ನಟಿಯರು ಆಗಮಿಸಿದ್ದ ಫೋಟೋ ಗಳು ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ನಾವಿಲ್ಲಿ ಸ್ಮರಿಸಬಹುದು.