ತನ್ನನ್ನು ಕೇಳದೇ ಗಂಡ ಪಾನೀಪುರಿ ತಂದನೆಂದು ರಂಪಾಟ ಮಾಡಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ!

ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಅದೇಕೋ ಪ್ರಾಣ ಎಂದರೆ ಬೆಲೆ ಇಲ್ಲದಂತೆ ವರ್ತಿಸುವುದು ಹೆಚ್ಚಾಗುತ್ತಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಪ್ರಾಣ ಕಳೆದುಕೊಳ್ಳುವ ನಿರ್ಧಾರಗಳನ್ನು ಮಾಡಿ ಬಿಡುತ್ತಾರೆ. ತಮ್ಮವರ ಬಗ್ಗೆಯಾಗಲೀ, ತಮ್ಮನ್ನು ನಂಬಿದವರು, ಹೆತ್ತು ಹೊತ್ತವರು, ತಮ್ಮ ಮಕ್ಕಳು ಹೀಗೆ ಯಾವುದರ ಬಗ್ಗೆಯೂ ಕ್ಷಣ ಮಾತ್ರವೂ ಆಲೋಚನೆ ಮಾಡದೆ ಆ ತ್ಮ ಹ ತ್ಯೆ ಗೆ ಶರಣಾಗಿ ಬಿಡುತ್ತಾರೆ. ಇದನ್ನು ನೋಡಿದಾಗ ಇವರೆಲ್ಲಾ ಎಂತಹ ಆತುರದ ನಿರ್ಧಾರ ಮಾಡಿಬಿಡುತ್ತಾರೆ. ಅದು ಅವರು ಇಂತಹ ನಿರ್ಧಾರ ಮಾಡಿದ ಕಾರಣವನ್ನು ತಿಳಿದಾಗ ಅಯ್ಯೋ ಎಂತಹ ಮೂರ್ಖತನ ಇದು ಎಂದು ಅನಿಸಿಬಿಡುತ್ತದೆ. ಇದೀಗ ಇಂತಹುದೇ ಒಂದು ಘಟನೆ ನಡೆದಿದ್ದು, ಪಾನೀಪೂರಿ ವಿಷಯಕ್ಕಾಗಿ ಗೃಹಿಣಿಯೊಬ್ಬಾಕೆ ಆ ತ್ಮ ಹ ತ್ಯೆ ಗೆ ಶರಣಾದ ಸುದ್ದಿಯೊಂದು ಹೊರ ಬಂದಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಾನೀಪೂರಿ ವಿಚಾರ ಕ್ಕಾಗಿ 23 ವರ್ಷದ ಯುವತಿಯೊಬ್ಬಳು ಪತಿಯೊಡನೆ ಜಗಳವಾಡಿ ಆ ತ್ಮ ಹ ತ್ಯೆ ಮಾಡಿಕೊಂಡು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಹೌದು ಘಟನೆಯಲ್ಲಿ ಹೆಂಡತಿ ಮನೆಯಲ್ಲಿ ಅದಾಗಲೇ ಅಡುಗೆಯನ್ನು ಮಾಡಿದ್ದಳು ಎನ್ನಲಾಗಿದ್ದು, ಪತಿ ಆಕೆಗೆ ತಿಳಿಸದೇ ಪಾನೀಪೂರಿ ತಂದಿದ್ದನು ಎನ್ನಲಾಗಿದ್ದು, ಅಡುಗೆ ಮಾಡಿದ್ದರೂ ಗಂಡ ಪಾನೀಪೂರಿ ತಂದಿದ್ದಾನೆ ಎನ್ನುವ ಕಾರಣಕ್ಕೆ ಸತಿ ಪತಿ ನಡುವೆ ಜಗಳ ಆರಂಭವಾಗಿದೆ ಎನ್ನಲಾಗಿದೆ.
ಪೋಲಿಸರ ಪ್ರಕಾರ ಮಹಿಳೆ ಪ್ರತೀಕ್ಷಾ ಸರ್ವಾಡೆ 2019 ರಲ್ಲಿ ಗಹನೀನಾಥ್ ಸರ್ವಾಡೆ ಅವರನ್ನು ವಿವಾಹವಾಗಿದ್ದರು.

ಈ ದಂಪತಿಯ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಭಾರತಿ ವಿದ್ಯಾಪೀಠ ಪೋಲಿಸ್ ಠಾಣೆಯ ಒಬ್ಬ ಅಧಿಕಾರಿಯು, ಕಳೆದ ಶುಕ್ರವಾರ ಆಕೆಯ ಪತಿ ಪತ್ನಿಗೆ ತಿಳಿಸದೇ ಮನೆಗೆ ಪಾನೀಪೂರಿ ತಂದಿದ್ದಾನೆ. ಆ ಹೊತ್ತಿಗಾಗಲೇ ಆಕೆ ಅಡುಗೆ ಮಾಡಿದ್ದರಿಂದ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿದೆ‌. ಮರು ದಿನ ಮಹಿಳೆ ಹಿಂದಿನ ನಡೆದ ಜಗಳವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು, ವಿಷ ಪದಾರ್ಥಗಳನ್ನು ಸೇವಿಸಿದ್ದಾರೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಭಾನುವಾರ ಆಕೆ ಮೃತಳಾಗಿದ್ದು, ಆಕೆಯ ಪತಿಯ ಮೇಲೆ ಆ ತ್ಮ ಹ ತ್ಯೆ ಗೆ ಕುಮ್ಮಕ್ಕು ನೀಡಿದ ಎನ್ನುವ ಆ ರೋ ಪದ ಅಡಿಯಲ್ಲಿ ದೂರನ್ನು ದಾಖಲು ಮಾಡಲಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ ನೀಡಿರುವ ವರದಿಯ ಪ್ರಕಾರ, ಮೃತ ಮಹಿಳೆಯನ್ನು ಪ್ರತೀಕ್ಷಾ ಸರ್ವಾಡೆ ಎಂದು ಗುರುತಿಸಲಾಗಿದೆ. ಆಕೆ ತನ್ನ 18 ತಿಂಗಳ ಮಗು ಮತ್ತು ಗಂಡನೊಂದಿಗೆ ಅಂಬೆಗಾಂವ್ ನ ತನ್ನ ಮನೆಯಲ್ಲಿ ವಾಸಿಸುತ್ತಿದ್ದಳು. ಮಹಿಳೆಯ ಗಂಡ ಆಕೆಯ ಆ ತ್ಮ ಹ ತ್ಯೆ ಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಾಗಿದೆ. ಇದಾದ ನಂತರ ಪೊಲೀಸರು ಸೋಮವಾರ ಗಹನೀ ನಾಥನನ್ನು ಬಂಧಿಸಿದ್ದಾರೆ ಮತ್ತು ಮಂಗಳವಾರ ಆತನನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಹಿರಿಯ ಅಧಿಕಾರಿ ಇನ್ಸ್‌ಪೆಕ್ಟರ್ ಜಗನ್ನಾಥ್ ಕಲ್ಸ್ಕರ್ ಅವರು, ‘2019 ರಲ್ಲಿ ಮದುವೆಯಾದಾಗಿನಿಂದ ಗಂಡ ಮತ್ತು ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.