Articles

ರಾನು ಮಂಡಲ್ ನಂತರ ಸ್ಟೇಶನ್ ನಲ್ಲಿ ಭಿಕ್ಷೆ ಬೇಡುವ ಬೇರೊಬ್ಬ ವ್ಯಕ್ತಿಯ ಹಾಡು ವೈರಲ್! ಜನರೆಂದರು ನಿಜವಾದ ಟ್ಯಾಲೆಂಟ್ ಇಲ್ಲಿದೆ.

ಸೋಶಿಯಲ್ ಮೀಡಿಯಾ ಅನೇಕರ ಪಾಲಿಗೆ ವರದಾನವಾಗಿ ಸಾಬೀತಾಗಿದೆ ಎಂದರೆ ತಪ್ಪಲ್ಲ. ಇದು ಅನೇಕರ ಜೀವನ ಒಂದೇ ರಾತ್ರಿಯಲ್ಲಿ ಅತ್ಯದ್ಭುತವಾಗಿ ಪೂರ್ತಿಯಾಗಿ ಬದಲಾಯಿಸಿ ಬಿಟ್ಟಿದೆ. ಈ ರೀತಿಯ ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ ಮತ್ತು ಎಷ್ಟೋ ನೋಡಿದ್ದೇವೆ. ಹೀಗಾಗಿ ಇಂದಿನ ಸಮಯದಲ್ಲಿ ಟ್ಯಾಲೆಂಟ್ ಇದ್ದವರು ಜನರ ಮುಂದೆ ಬಂದೇ ಬರುತ್ತಾರೆ. ಅವರಿಗೆ ಮುಚ್ಚಿಡಲು ಸಾಧ್ಯವಿಲ್ಲ. ಸದ್ಯ ರೇಲ್ವೆ ಸ್ಟೇಶನ್ ಮೇಲೆ ಭಿಕ್ಷೆ ಬೇಡುತ್ತಾ ಸಮಯ ಕಳೆಯುತ್ತಿರುವ ಭಿಕ್ಷುಕನ ಗಾಯನದ ವಿಡಿಯೋ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಕೆಲವು ವರ್ಷಗಳ ಹಿಂದೆ ರಾನು ಮಂಡಲ್ ಸಹ ಹೀಗೆಯೇ ಸೋಷಿಯಲ್ ಮೀಡಿಯಾದಲ್ಲಿ ಗದ್ದಲ ಎಬ್ಬಿಸಿದ್ದಳು.

ಸ್ಟೇಷನ್ ನಲ್ಲಿ ಹಾಡು ಹಾಡುತ್ತಿರುವ ಈ ವ್ಯಕ್ತಿಯ ಗಾಯನ ಎಲ್ಲರನ್ನೂ ಮೋಡಿ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಹಾಡಿಗೆ ನೆಟ್ಟಿಗರು ತುಂಬಾನೇ ಪಸಂದ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಬಾಲಿವುಡ್ ಖ್ಯಾತ ಗಾಯಕ ದಿ. ಕಿಶೋರ್ ಕುಮಾರ್ ಅವರ ಹಾಡನ್ನು ಈತ ಹಾಡುತ್ತಿದ್ದಾನೆ.

ವಿಡಿಯೋ ನೋಡಿ

 

ಪ್ರಸ್ತುತ ವಿಡಿಯೋ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಭಿಕ್ಷೆ ಬೇಡುವ ವ್ಯಕ್ತಿ ದಿ. ಗಾಯಕ ಕಿಶೋರ್ ಕುಮಾರ್ ಅವರ ಫೇಮಸ್ ಹಿಂದಿ ಹಾಡು “ಓ ಮೇರೆ ದಿಲ್ ಕಿ ಚೈನ್” ಹಾಡನ್ನು ಹಾಡುತ್ತಿರುವುದು ಕಂಡು ಬರುತ್ತಿದೆ. ಆತ ಹಾಡುವ ಹಾಡಿನ ಶೈಲಿ ನೋಡಿ ನೆಟ್ಟಿಗರು ಮಂತ್ರಮುಗ್ಧವಾಗಿದ್ದಾರೆ. ಈ ವಿಡಿಯೋ ಬೇರೆ ಬೇರೆ ಪ್ಲಾಟ್ ಫಾರ್ಮ್ ಗಳಲ್ಲಿ ಶೇರ್ ಮಾಡಲಾಗುತ್ತಿದೆ. ಈತನ ಹಾಡು ನೋಡಿದ ಒಬ್ಬ ಯೂಸರ್, ಇಂಥ ಟ್ಯಾಲೆಂಟ್ ತುಂಬಿದ ರಾ ಸಿಂಗರ್ ಗಳಿಗೆ ಅವಕಾಶ ಯಾಕೆ ಸಿಗುತ್ತಿಲ್ಲ ಎಂದು ದುಃಖ ವ್ಯಕ್ತ ಮಾಡಿದ್ದಾನೆ. ಇನ್ನೊಬ್ಬ ವ್ಯಕ್ತಿ ರಾನು ಮಂಡಲ್ ಅಲ್ಲ, ನಿಜವಾದ ಟ್ಯಾಲೆಂಟ್ ಇಲ್ಲಿ ಅಡಗಿದೆ ಎಂದಿದ್ದಾನೆ.

Leave a Comment

Your email address will not be published. Required fields are marked *