ತನ್ನ ಮದುವೆಯ ಗೋಳನ್ನು ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತ ನಟಿ ಕರಿಷ್ಮಾ ಕಪೂರ್; ಮೊದಲ ರಾತ್ರಿಯೇ ನನ್ನ ಮೇಲೆ ಕಟ್ಟಿದ್ದನು ‘ಬೆಟ್!’.. ಬೇರೊಬ್ಬರ ಜೊತೆ…
90 ರ ದಶಕದಲ್ಲಿ ಬಿಂದಾಸ್ ಹುಡುಗಿಯಾಗಿ ಒಮ್ಮೆಲೆ ಪ್ರಸಿದ್ಧಿಗೆ ಬಂದಳು ಕಪೂರ್ ಫ್ಯಾಮಿಲಿಯ ಈ ಸುಂದರ ಬೆಡಗಿ. ತನ್ನ ಕರಿಯರ್ ನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟರು. ವಿಶೇಷವಾಗಿ ಗೋವಿಂದಾ ಅವರ ಜೊತೆಗೆ ಕೆಮಿಸ್ಟ್ರಿ ಚೆನ್ನಾಗಿ ಕೂಡಿತ್ತು. ಎಲ್ಲವೂ ಸರಿಯಾಗಿ ನಡೆದಿರುವಾಗಲೇ ಸಂಜಯ್ ಕಪೂರ್ ಹೆಸರಿನ ವ್ಯಕ್ತಿಯೊಂದಿಗೆ ಮದುವೆಯಾಗಿ ಬಾಲಿವುಡ್ ಗೆ ಬಾಯ್ ಬಾಯ್ ಮಾಡಿದರು.
2003 ರಲ್ಲಿ ಮದುವೆಯಾದ ನಂತರ ವೈವಾಹಿಕ ಜೀವನದ 13 ವರ್ಷಗಳಲ್ಲಿ ಕರೀಷ್ಮಾ ಅವರ ಜೀವನದಲ್ಲಿ ಅನೇಕ ರೀತಿಯ ಏಳುಬೀಳುಗಳು ಬಂದವು. ಕೊನೆಗೆ ಬೇಸತ್ತು 2016 ರಲ್ಲಿ ಸಂಜಯ್ ಕಪೂರ್ ಅವರ ಜೊತೆಗಿನ ವೈವಾಹಿಕ ಜೀವನಕ್ಕೆ ತಿಲಾಂಜಲಿಯನ್ನಿಟ್ಟರು.
ವಿಚ್ಛೇದನೆಯ ನಂತರ ಕರೀಷ್ಮಾ ಅವರು ಆಗಾಗ ಅವರ ಮನದಲ್ಲಿರುವ ಕಹಿ ನೆನಪುಗಳನ್ನು ಅಲ್ಲಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ, ಅಥವಾ ಮನದಲ್ಲಿ ಮನೆ ಮಾಡಿದ ಗಂಡನ ಜೊತೆಗಿನ ನೋವುಗಳನ್ನು ಹೊರ ಹಾಕುತ್ತಲೇ ಇರುತ್ತಾರೆ. ಈಗ ತಮ್ಮಿಬ್ಬರ ಮಧುಚಂದ್ರದ ಸಮಯದಲ್ಲಿನ ನೋವೊಂದು ಹೊರ ಹಾಕಿದ್ದಾರೆ, ಕರೀಷ್ಮಾ ಅವರು ಹೇಳುವ ಹಾಗೆ, ಯಾವಾಗ ನಾವು ಹನಿಮೂನ್ ಗೆ ಹೋಗಿದ್ದೆವು ಆಗ ಸಂಜಯ್ ತನ್ನ ಮಿತ್ರನ ಜೊತೆಗೆ ಬಿಡ್ ಕಟ್ಟಿದ್ದನು. ಅದರ ಪ್ರಕಾರ ಸಂಜಯ್ ನು ತನ್ನ ಮಿತ್ರನ ಜೊತೆಗೆ ಒಂದು ರಾತ್ರಿ ಕಳೆಯಲು ಒತ್ತಾಯ ಮಾಡಿದ್ದನು. ಅದು ನನಗೆ ತುಂಬಾ ಹೇಸಿಗೆ ತಂದಿತ್ತು. ಮತ್ತು ನನಗೆ ಇದು ಸಹನೆಯಾಗಲಿಲ್ಲ. ಎಷ್ಟೋ ದಿನಗಳವರೆಗೆ ಸಂಜಯ್ ಹಾಗೂ ಮನೆಯವರೆಲ್ಲರೂ ಸೇರಿ ನನಗೆ ಕಿರುಕುಳ ಸಹಿತ ಕೊಡುತ್ತಿದ್ದರು. ತಾನು ಗರ್ಭವತಿ ಇದ್ದಾಗಿನ ಕಹಿ ನೆನಪು ಒಂದು ಹೇಳುತ್ತಾರೆ. ಗರ್ಭವತಿ ಇದ್ದಾಗ ನನ್ನ ಅತ್ತೆ ನನಗೆ ಒಂದು ಡ್ರೆಸ್ ಗಿಫ್ಟ್ ಕೊಟ್ಟಿದ್ದರು. ಆದರೆ ಗರ್ಭ ಧರಿಸಿದ್ದರಿಂದ ನನಗೆ ಆ ಡ್ರೆಸ್ ಹಾಕಿ ಕೊಳ್ಳಲು ಸಾಧ್ಯವಾಗದ ಕಾರಣ ಮನೆಯವರು ನನಗೆ ಚೆನ್ನಾಗಿ ಥಳಿಸಿದರು.

ಗಂಡನ ವಿರುದ್ಧ ಆರೋಪವನ್ನು ಮಾಡುವ ಕಾರಣವೇನೆಂದರೆ, ವಿಚ್ಛೇದನೆಯನ್ನು ನೀಡಿದ ಹೆಂಡತಿ ನಂದಿತಾ ಮಹತಾನಿಯ ಜೊತೆಗೆ ಸಂಜಯ್ ಅವರ ಸರಸ ಸಲ್ಲಾಪ ನಡೆಯುತ್ತಿತ್ತು ಮತ್ತು ದೈಹಿಕ ಸಂಪರ್ಕವನ್ನು ಸಹ ಹೊಂದಿದ್ದರು.
ವಿಚ್ಛೇದನೆ ಯನ್ನು ನೀಡಿದ ಒಂದೇ ವರ್ಷದಲ್ಲಿ ಪ್ರಿಯಾ ಸಚದೆವ್ ಳ ಜೊತೆಗೆ 2017 ರಲ್ಲಿ ಮದುವೆಯಾಗಿ 2018 ರಲ್ಲಿ ಒಂದು ಮಗುವಿಗೆ ಜನ್ಮವನ್ನು ಕೊಟ್ಟರು.
ಕರೀಷ್ಮಾಳಿಗೂ ಸಂಜಯ್ ಅವರಿಂದ ಎರಡು ಮಕ್ಕಳಾಗಿವೆ. ಅವರ ಹೆಸರು ಸಮಾಯರಾ ಹಾಗೂ ಕಿಯಾನ್ ರಾಜ್ ಕಪೂರ್ ಇದೆ.
ಬಹಳ ದಿನಗಳ ನಂತರ ಕರೀಷ್ಮಾ ಕಪೂರ್ ಮತ್ತೆ ಡಿಜಿಟಲ್ ಮುಖಾಂತರ ಡೆಬ್ಯೂ ಮಾಡಲಿದ್ದಾರೆ. ಹೀಗಾಗಿ ಸದ್ಯ ತಮ್ಮ ಚಿತ್ರದ ಪ್ರಮೋಶನ್ ಮಾಡುವದರಲ್ಲಿ ಬಿಜಿ ಇದ್ದಾರೆ.