ತನ್ನ ಮಾಲೀಕನ ಜೀವ ಉಳಿಸಲು 7 ಅಡಿ ಉದ್ದದ ವಿಷಪೂರಿತ ಹಾವಿನೊಂದಿಗೆ 30 ನಿಮಿಷಗಳವರೆಗೆ ಕಾದಾಟ ಮಾಡಿದ ನಾಯಿ…!
ಇಂದಿನ ಕಾಲದಲ್ಲಿ ಪ್ರತಿಯೊಬ್ಬರು ತಮ್ಮ ಮನೆಯ ರಕ್ಷಣೆಯ ಸಲುವಾಗಿ ನಾಯಿಯನ್ನು ಸಾಕುತ್ತಾರೆ. ಕಾಲಕ್ರಮೇಣ ಆ ನಾಯಿಯನ್ನು ತಮ್ಮ ಮನೆಯ ಒಬ್ಬ ಸದಸ್ಯನಂತೆ ನೋಡಿಕೊಳ್ಳುತ್ತಾರೆ. ನಾಯಿಯು ಸಹ ಮನೆಯ ಪ್ರತಿಯೊಬ್ಬರ ಜೊತೆಗೆ ಪ್ರೀತಿಯಿಂದ ಇರುತ್ತದೆ.
ಇಂದಿನ ಕಾಲದಲ್ಲಿ ನಾಯಿಯಷ್ಟು ನಿಯತ್ತು ಮನುಷ್ಯರಲ್ಲಿ ಕಾಣುವದಿಲ್ಲ. ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ ಎಂಬುದು ನಮಗೆಲ್ಲ ಗೊತ್ತೇ ಇದೆ. ಅಪರಚಿತ ವ್ಯಕ್ತಿ ಹಾಗೂ ಪ್ರಾಣಿಗಳನ್ನು ತನ್ನ ಮನೆಯೊಳಗೆ ನಾಯಿ ಬರಕೂಡದು. ಇಂತಹದೇ ಒಂದು ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆ ಘಟನೆಯ ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ದೊರೆತ ಮಾಹಿತಿಯ ಪ್ರಕಾರ, ಈ ಘಟನೆ ಪಟ್ಟಣದಲ್ಲಿಯ ಚಿಲ್ಲಾ ಪೊಲೀಸ ಠಾಣೆಯ ಸರಹದ್ದಿನ ತಿಲಾಠಿ ಎಂಬ ಉರಲ್ಲಿ ನಡೆದಿದೆ. ಈ ಗ್ರಾಮದ ನಿವಾಸಿಯಾದ ಉಮೇಶಕುಮಾರ ದುಬೆ ಯವರು ತಮ್ಮ ಮನೆಯಲ್ಲಿ ಒಂದು ಬೀದಿ ನಾಯಿಯನ್ನು ಸಾಕಿದ್ದರು. ಈ ಘಟನೆ ನಾಲ್ಕು ದಿವಸಗಳ ಹಿಂದೆ ನಡೆದಿದೆ ಎಂದು ನಾಯಿಯ ಮಾಲೀಕ ಉಮೇಶ್ ಹೇಳುತ್ತಾರೆ. ನಡೆದದ್ದು ಏನೆಂದರೆ ಮನೆಯಲ್ಲಿ ಒಂದು ಹಾವು ನುಸುಳುತ್ತಿರುತ್ತದೆ ಇದನ್ನು ಹೊರಗಡೆ ರಕ್ಷಣೆ ನೀಡುತ್ತಿರುವ ನಾಯಿಯು ನೋಡುತ್ತದೆ, ನೋಡಿದ ಕೂಡಲೇ ಆ ಹಾವನ್ನು ಹೇಗಾದರೂ ಮಾಡಿ ಮನೆಯ ಒಳಗಡೆ ಹೋಗಬಾರದು ಎಂದು ಅದರ ಜೊತೆಗೆ ಹೊರಡಲು ಶುರು ಮಾಡಿತು. ಆ ಹಾವು ಸುಮಾರು 7 ಅಡಿ ಉದ್ದವಾಗಿತ್ತು. ನಾಯಿಯು ಈ ಹಾವಿನೊಂದಿಗೆ ಸುಮಾರು ಅರ್ಧ ಗಂಟೆಯಷ್ಟು ಹೋರಾಟ ಮಾಡಿತು. ತದನಂತರ ಆ ಹಾವನ್ನು ಕೊಂ#ದು ಹಾಕಿದೆ ಎಂದು ಮನೆಯ ಮಾಲೀಕ ಹೇಳಿದ್ದಾರೆ. ಈ ಬಹದ್ದೂರ್ ಶ್ವಾನದ ಹೆಸರು ಜ್ಯುಲಿ ಇದೆ. ಇದರ ಸಾಹಸ ಕಂಡು ಮನೆಯಲ್ಲಿಯ ಎಲ್ಲ ಜನರು ನಾಯಿಯನ್ನು ತುಂಬಾ ಹೋಗಳುತ್ತಿದ್ದಾರೆ.
ನೋಡಿ ವೀಡಿಯೋ..
#Mirzapur: मालिक की जान बचाने के लिए सांप से भिड़ गया कुत्ता। घर के अंदर घुस रहा था 7 फ़ीट लंबा सांप, जूली ने आधे घंटे तक की लड़ाई और मालिक की जान बचाई। वीडियो सोशल मीडिया पर वायरल।#UttarPradesh #ViralVideo pic.twitter.com/0qsSiyRzqr
— UP Tak (@UPTakOfficial) November 6, 2022
ಪ್ರಸ್ತುತ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ UPTakOfficial ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಲಕ್ಷದಷ್ಟು ಜನರು ವೀಕ್ಷಣೆ ಮಾಡಿದ್ದಾರೆ.