ತಲೆಯೇ ಇಲ್ಲದ ವಾಚ್ ಮನ್ ಫೋಟೋ ಆಗುತ್ತಿದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್! ಸತ್ಯವೇನು ನೋಡಿ…

ಹಾಗೆ ನೋಡಲಾಗಿ ಇಂಟರ್ನೆಟ್ ನಲ್ಲಿ ಅನೇಕ ರೀತಿಯ ಫೋಟೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ಫೋಟೋಗಳು ನೋಡುಗರ ಕಣ್ಣುಗಳಿಗೆ ವಿಚಿತ್ರ ಭ್ರಮೆಯನ್ನು ನಿರ್ಮಾಣ ಮಾಡುತ್ತವೆ. ಇದೇ ರೀತಿಯ ನೋಡಲು ತುಂಬಾ ವಿಚಿತ್ರವಾದ ಫೋಟೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತಿದೆ. ಈ ಫೋಟೋದ ಹಿಂದಿರುವ ನಿಜವಾದ ಸತ್ಯವೇನು ನೋಡಿ…

ಚೇರ್ ಮೇಲೆ ಕುಳಿತ ತಲೆಯೇ ಇಲ್ಲದ ವಾಚ್ಮನ್ ನ ಫೋಟೋ ನೋಡಲು ತುಂಬಾ ವಿಚಿತ್ರವೆನಿಸುತ್ತಿದೆ, ಅಲ್ವಾ? ಈ ಫೋಟೋವನ್ನು ರೇಡಿಟ್ ಮೇಲೆ ಶೇರ್ ಮಾಡಲಾಗಿದೆ. ಒಂದು ರೀತಿಯಲ್ಲಿ ಈ ಚಿತ್ರ ತುಂಬಾ ಸಾಮಾನ್ಯವಾಗಿದೆ. ಕಾರಣ ಪಟ್ಟಣಗಳಲ್ಲಿ ಆಫೀಸುಗಳ ಮುಂದೆ, ದೊಡ್ಡ ದೊಡ್ಡ ಬಂಗಲೆಗಳ ಮುಂದೆ, ಅಪಾರ್ಟ್ಮೆಂಟ್ ಗಳ ಮುಂದೆ ಜೊತೆಗೆ ದೊಡ್ಡ ದೊಡ್ಡ ಶೋರೂಮ್ ಗಳ ಮುಂದೆಯೂ ವಾಚ್ಮನ್ ಗಳು ಕುಳಿತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಆಶ್ಚರ್ಯ ಪಡುವ ವಿಷಯವೇನೆಂದರೆ ಪ್ರಸ್ತುತ ಚಿತ್ರದಲ್ಲಿ ವಾಚ್ಮನ್ ನ ತಲೆಯೇ ಕಂಡುಬರುತ್ತಿಲ್ಲ.

ಈ ಚಿತ್ರವನ್ನು ನೋಡಿ ನೀವು ಕನ್ಫ್ಯೂಸ್ ನಲ್ಲಿ ಬಿದ್ದಿರಬೇಕು. ಆದರೆ ಈ ಚಿತ್ರವನ್ನು ನೋಡಿದ ನಂತರ ನೀವಷ್ಟೇ ಕನ್ಫ್ಯೂಸ್ ಆಗಿಲ್ಲ. ನೇಟಿಜನ್ಸ್ ಗಳಿಗೆ ಈ ಚಿತ್ರದ ಹಿಂದಿರುವ ರಹಸ್ಯವನ್ನು ತಿಳಿದುಕೊಳ್ಳಲು ತುಂಬಾ ಸಮಯ ಬೇಕಾಯಿತು. ತನಿಖೆ ನಂತರ ಗೊತ್ತಾಯಿತು ವಾಚ್ಮನ್ ಎಲ್ಲ ಕಡೆಗೆ ಮಾಡುವ ಮುಖ್ಯ ಕೆಲಸವೆಂದರೆ ನಿದ್ರೆ. ಆತ ನಿದ್ರೆಯಲ್ಲಿ ಜಾರಿದಾಗ ಆತನ ತಲೆ ಸಂಪೂರ್ಣವಾಗಿ ಹಿಂದೆ ಹೋಗಿದೆ. ಹೀಗಾಗಿ ಆತನ ದೇಹ ಕಾಣಿಸುತ್ತದೆ ಹೊರತಾಗಿ ತಲೆ ಮಾತ್ರ ಚಿತ್ರದಲ್ಲಿ ಕಾಣಿಸುತ್ತಿಲ್ಲ.

ವಾಚ್ಮನ್ ಗಳು ವಾಚ್ ಮಾಡುತ್ತಾ ಮಾಡುತ್ತಾ ಬೇಸತ್ತು ನಿದ್ರೆಗೆ ಜಾರಿದಾಗ ಈ ರೀತಿಯ ಸ್ಥಿತಿ ಕಂಡು ಬಂದಿದೆ. ಪ್ರಸ್ತುತ ಫೋಟೋ ರಾತ್ರಿಯ ಸಮಯದಲ್ಲಿ ಕ್ಲಿಕ್ ಮಾಡಿರುವುದರಿಂದ ವ್ಯಕ್ತಿಯ ಮುಖದ ಬಣ್ಣವು ಕಪ್ಪಾಗಿರುವುದರಿಂದ ಜೊತೆಗೆ ಮುಖ ಸಂಪೂರ್ಣವಾಗಿ ಹಿಂದೆ ಜಾರಿರುವುದರಿಂದ ಕತ್ತಲೆಯಲ್ಲಿ ಮುಖವಿಲ್ಲದ ಬರೀ ವಾಚ್ಮನ್ ನ ದೇಹವೇ ಕಾಣಿಸುತ್ತಿರುವ ಫೋಟೋ ಇದಾಗಿದೆ.