ತಾಯಿಗಿಂತ ಬಂಧುವಿಲ್ಲ; ಮಗನ ಜೀವ ಉಳಿಸಲು ತಾಯಿಯ ಆದಳು ಸೂಪರ್ ಮಾಮ್! ನೋಡಿ ಮೈನವಿರೇಳಿಸುವ ವೈರಲ್ ವಿಡಿಯೋ.
ಮಕ್ಕಳ ಮೇಲೆ ತಾಯಿಯು ಪ್ರೀತಿ ಮಾಡುವ ಹಾಗೆ ಬೇರೆ ಯಾರಿಗೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ತಾಯಿಗೆ ಬೇರೆ ಪರ್ಯಾಯವೇ ಇಲ್ಲ. ತನ್ನ ಮಕ್ಕಳನ್ನು ಸಂಕಟ ಸಮಯದಲ್ಲಿ ಉಳಿಸಲು ಆಕೆ ಯಾವ ರೂಪವನ್ನು ಸಹ ಪಡೆದುಕೊಳ್ಳುತ್ತಾಳೆ. ಅದಕ್ಕಾಗಿಯೇ ದೇವರು ಪ್ರತಿಯೊಬ್ಬರಿಗೆ ಗಮನ ನೀಡಲು ಸಾಧ್ಯವಿಲ್ಲವೆಂದೇ ತಾಯಿಯನ್ನು ನಿರ್ಮಿಸಿದ್ದಾನೆ ಎಂದು ಹೇಳುತ್ತಾರೆ. ಇದರ ಉದಾಹರಣೆಯೊಂದನ್ನು ನೀಡುವ ಘಟನೆಯ ಈ ವಿಡಿಯೋ ನೀವಿಲ್ಲಿ ನೋಡಬಹುದು.
ತಾಯಿ ಹಾಗೂ ಪುಟ್ಟ ಮಗುವಿನ ವಿಡಿಯೋ ವೈರಲ್…
ಪ್ರಸ್ತುತ ವಿಡಿಯೋವನ್ನು ನೋಡಿದ ನೇಟಿಜನ್ಸ್ ಗಳು ತಾಯಿಯ ಚಾಕಚಕ್ಯತೆಯನ್ನು ನೋಡಿ ಹೊಗಳುತ್ತಿದ್ದಾರೆ. ತಾಯಿಯಿಂದ ಮಗುವನ್ನು ಯಾರು ಕಸಿದುಕೊಂಡು ಹೋಗಲು ಸಾಧ್ಯವಿಲ್ಲ, ಅದು ಸಾಕ್ಷಾತ್ ಯಮರಾಜನೇ ಬಂದರೂ ಸಹ. ವಿಡಿಯೋದಲ್ಲಿ ತಾಯಿ ಮತ್ತು ಮಗು ಲಿಫ್ಟ್ ನಿಂದ ಹೊರಗೆ ಬರುತ್ತಾರೆ. ನಂತರ ಮಗುವು ತಾಯಿಯನ್ನು ಬಿಟ್ಟು ಸ್ವಲ್ಪ ಮುಂದೆ ಹೋಗುತ್ತದೆ. ಅಲ್ಲಿಯೇ ಗ್ಯಾಲರಿಯಲ್ಲಿ ಮಗು ಇಣುಕಿ ನೋಡುವಾಗ ಇನ್ನೇನು ಕೆಳಗೆ ಬೀಳುತ್ತದೆ ಎನ್ನುವಷ್ಟರಲ್ಲಿ ತಾಯಿಯು ಕ್ಷಣಾರ್ಧದಲ್ಲಿ ಮಗುವಿನ ಕಡೆಗೆ ಡೈವ್ ಹೊಡೆದು ಮಗುವಿನ ಕಾಲುಗಳನ್ನು ಕೈಯಲ್ಲಿ ಹಿಡಿದು ಕೆಳಗೆ ಬೀಳುವುದರಿಂದ ಉಳಿಸಿಕೊಂಡಿದ್ದಾಳೆ.
ವೀಡಿಯೋ ನೋಡಿ
ನಂತರ ತಾಯಿ ಹಾಗೂ ಮಗುವಿನ ಜೋರಾದ ಕೂಗು ಕೇಳಿ ಅಲ್ಲಿಯೇ ಇದ್ದ ನಾಲ್ಕೈದು ಜನರು ಒಟ್ಟುಗೂಡಿ ಸಾವಕಾಶವಾಗಿ ಮಗುವನ್ನು ಮೇಲೆ ತೆಗೆದುಕೊಳ್ಳುತ್ತಾರೆ. ವಿಡಿಯೋ ನೋಡಿದ ನಂತರ ನೀವು ಸಹ ‘ದೇವರ ನಂತರ ಈ ಜಗತ್ತಿನಲ್ಲಿ ಯಾರಾದರೂ ಇದ್ದರೆ ಅದು ಬರೀ ತಾಯಿ’ ಎಂದು ಅನ್ನುತ್ತೀರಿ.