VIDEO : ಮುಂಬಯಿಯಲ್ಲಿ ಮುಳುಗಿದ ಕಾರು : ಪೆಟ್ರೋಲ್-ಡಿಸೆಲ್ ರೇಟ್ ಕೇಳಿ ಮುಳುಗಿ ಸ ತ್ತಿ ತು ಎಂದ ನೆಟ್ಟಿಗರು! ವಿಡಿಯೋ ನೋಡಿ

ಭಾನುವಾರ ಮುಂಬೈನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಇದ್ದಕ್ಕಿದ್ದಂತೆ ತಗ್ಗಿನಲ್ಲಿ ಮುಳುಗಿ ಹೋಯಿತು. ಈ ಘಟನೆ ಮುಂಬೈನ ಘಾಟ್ಕೋಪರ್ ಪಶ್ಚಿಮ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಕೇವಲ 15 ಸೆಕೆಂಡಿನಲ್ಲಿ ಕಾರು ಸಂಪೂರ್ಣ ಮುಳುಗಿ ಹೋಯಿತು. ಈ ವಿಡಿಯೊ ಇವತ್ತು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ.

ಭಾನುವಾರ, ಮುಂಬೈನ ವಸತಿ ಪ್ರದೇಶದಲ್ಲಿ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದ ಕಾರು ಕಾಂಕ್ರೀಟ್ ಬೇಸ್ ನಲ್ಲಿನ ಗುಂಡಿಯಲ್ಲಿ ಏಕಾಏಕಿ ಮುಳುಗಿ ಹೋಯಿತು, ಆ ವಿಡಿಯೋ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಘಾಟ್ಕೋಪರ್ ಪಶ್ಚಿಮ ಪ್ರದೇಶದದ್ದು.

ಘಟನೆ ಭಾನುವಾರ ಬೆಳಿಗ್ಗೆ ಘಾಟ್‌ಕೋಪರ್ ವೆಸ್ಟ್ ನ ಕ್ಯಾಮಾ ಲೇನ್‌ ನಲ್ಲಿರುವ ವಸತಿ ಸೊಸೈಟಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. “ಸ್ಥಳೀಯ ನಿವಾಸಿಗಳು ತಮ್ಮ ಕಾರುಗಳನ್ನು ನಿಲ್ಲಿಸಲು ಈ ಪ್ರದೇಶವನ್ನು ಬಳಸುತ್ತಾರೆ” ಎಂದು ಅಧಿಕಾರಿ ಹೇಳಿದರು.

ವೈರಲ್ ಆದ ವೀಡಿಯೊದಲ್ಲಿ, ಕೆಲವು ಕಾರುಗಳನ್ನು ತೆರೆದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದೆ ಎಂದು ಸ್ಪಷ್ಟವಾಗಿ ಕಾಣಬಹುದು. ಹ್ಯುಂಡೈ ಕಾರನ್ನು ನಿಲ್ಲಿಸಿದ ಸ್ಥಳದಿಂದ ಇದ್ದಕ್ಕಿದ್ದಂತೆ ಅದರ ಕೆಳಗೆ ಒಂದು ಹಳ್ಳವು ರೂಪುಗೊಳ್ಳುತ್ತದೆ. ಈ ಹಳ್ಳವು ನೀರಿನಿಂದ ತುಂಬಿದೆ. ಇದ್ದಕ್ಕಿದ್ದಂತೆ ಇಡೀ ಕಾರು ಹಳ್ಳಕ್ಕೆ ಬೀಳುತ್ತದೆ, ನಂತರ ನೀರಿನಲ್ಲಿ ಲೀನವಾಗುತ್ತದೆ.

ಘಟನೆಯ ನಂತರ ಸಂಚಾರ ಪೊಲೀಸರ ತಂಡ ಸ್ಥಳಕ್ಕೆ ತಲುಪಿ ಕಾರನ್ನು ಹಳ್ಳದಿಂದ ಹೊರಗೆಳೆದಿದೆ. ನಿವಾಸಿಗಳ ಸುರಕ್ಷತೆಗಾಗಿ ಅಲ್ಲಿ ಜಾಗೃತೆ ಮೂಡಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಜನರು ಪೆಟ್ರೋಲ್ – ಡಿಸೆಲ್ ರೇಟ್ ಕೇಳಿ ಕಾರು ನೀರಲ್ಲಿ ಮುಳುಗಿ ಆ’ ತ್ಮ ‘ಹ ‘ತ್ಯೆ ಮಾಡಿಕೊಂಡಿದೆ ಎಂದು ತಮಾಷೆ ಮಾಡಿದ್ದಾರೆ.

ಕೆಳಗೆ ಅದೇನಿತ್ತೋ ಏನೋ, ಮಳೆಯ ಹೊಡೆತಕ್ಕೆ ನೆಲ ಕುಸಿದು ಅದರ ಮೇಲಿನ ಕಾಂಕ್ರೀಟ್ ಕೂಡ ಕುಸಿದಿದೆ, ಇದರಿಂದ ಕಾರು ಮುಳುಗಿದೆ. ಈ ವಿಡಿಯೊ ಉಳಿದ ಸಾಮಾಜಿಕ ಮಾಧ್ಯಮ ವೇದಿಕೆಗಳಿಗಿಂತ ಫೆಸ್ ಬುಕ್ ನಲ್ಲಿ ಭಾರಿ ವೇಗದಲ್ಲಿ ವೈರಲ್ ಆಗುತ್ತಿರುವ ವಿಡಿಯೊ ಮೇಲಿದೆ, ನೋಡಿ…
-Team Infotrend