Articles

VIDEO : ಅಮಾನತು ಅವಧಿ ಮುಗಿದಿದ್ದಕ್ಕೆ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಪಾಕಿಸ್ತಾನಿ ಇನ್ಸಪೆಕ್ಟರ್ ನನ್ನು ಮತ್ತೆ ಅಮಾನತು ಮಾಡಲಾಯಿತು! ವಿಡಿಯೊ ನೋಡಿ

ಪಾ’ಕಿ’ಸ್ತಾನ ಬಾಲಿವುಡ್ ಮೇಲೆ ದ್ವೇ’ಷ ಕಾರುವುದು ಇದೇ ಮೊದಲೇನಲ್ಲ, ಕೊನೆ ಅಂತೂ ಖಂಡಿತ ಅಲ್ಲ. ತಮಗೆ ಗೊತ್ತಿರುವಂತೆ ಭಾರತ್ ಸಿನೆಮಾಗಳಿಗೆ ಪಾಕಿಸ್ತಾನದಲ್ಲಿ ಸಾಕಷ್ಟು ಫ್ಯಾನ್ಸ್ ಇದ್ದಾರೆ, ಇಲ್ಲಿನ ಬಾಲಿವುಡ್ ಸ್ಟಾರ್ ಗಳು ಅಲ್ಲಿ ಕೂಡ ಸ್ಟಾರ್ ಗಳು. ಆದರೆ ಪಾಕಿಸ್ತಾನ ಸರ್ಕಾರಕ್ಕೆ ಇದನ್ನು ಮೊದಲಿನಿಂದಲೂ ಸಹಿಸಿಕೊಳ್ಳಲು ಆಗುತ್ತಿಲ್ಲ. ಈಗ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದರು ಎಂಬ ಕಾರಣಕ್ಕೆ ಇನ್ಸಪೆಕ್ಟರ್ ಒಬ್ಬರನ್ನು ಸ’ಸ್ಪೆಂ’ಡ್ ಮಾಡಲಾಗಿದೆ.

ಬಾಲಿವುಡ್ ನ ಹಿಟ್ ಹಾಡು ದಿಲ್ ಭರ್ ದಿಲ್ ಭರ್ ಗೆ ಆಬೀದ್ ಶಾಹ ಎಂಬ ಸಬ್ ಇನ್ಸಪೆಕ್ಟರ್ ಒಬ್ಬರು ತಮ್ಮ ಸ್ನೇಹಿತರೊಡನೆ ಡ್ಯಾನ್ಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಸಬ್ ಇನ್ಸಪೆಕ್ಟರ್ ಆಬಿದ್ ಶಾಹ ರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ!

ಪಾಕಿಸ್ತಾನದ ಪತ್ರಿಕೆ ಎಕ್ಸಪ್ರೆಸ್ ಟ್ರಿಬ್ಯೂನ್ ಪ್ರಕಾರ, ಕರಾಚಿಯ ಲಿಯಾಖತ್ ಬಾದ್ ಪೊಲೀಸ್ ಠಾಣೆಯಲ್ಲಿ ಈ ಆಬೀದ್ ಶಾಹ್ ಸಬ್ ಇನ್ಸಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವೈರಲ್ ಆದ ವಿಡಿಯೊದಲ್ಲಿ ಅವರು ಸಾದಾ ಬಟ್ಟೆಯಲ್ಲಿ ತಮ್ಮ ಸ್ನೇಹಿತರೊಡನೆ ನೃತ್ಯ ಮಾಡಿರುವುದು ಕಾಣಿಸುತ್ತದೆ. ಇಲ್ಲಿ ಯಾರೂ ಯೂನಿಫಾರ್ಮ್ ನಲ್ಲಿ ಇರಲಿಲ್ಲ.ಆದರೂ ಇಲಾಖೆ ಅವರ ಮೇಲೆ ಕ್ರಮ ತಗೆದುಕೊಂಡಿದೆ, ಅದಕ್ಕೆ ಕಾರಣ ಬಾಲಿವುಡ್ ಹಾಡಂತೆ!

ಇದಕ್ಕಿಂತ ಅಚ್ಚರಿಯ ಸಂಗತಿಯೆಂದರೆ, ಈ ಮೊದಲೇ ಆಬೀದ್ ಶಾಹ್ ಯಾವುದೊ ಕಾರಣಕ್ಕೆ ಸ’ಸ್ಪೆಂ’ಡ್ ಆಗಿದ್ದರು, ಆ ಅಮಾನತು ಅವಧಿ ಮುಗಿದು ಅವರು ಮತ್ರೆ ಡ್ಯೂಟಿಗೆ ಹಾಜರಾಗಲು ಆದೇಶ ಬಂದಿತ್ತು. ಆ ಖುಷಿಗೆ ಸಬ್ ಇನ್ಸಪೆಕ್ಟರ್ ಈ ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡಿದ್ದರು. ಅದಕ್ಕಾಗಿ ಮತ್ತೆ ಸ’ಸ್ಪೆಂ’ಡ್ ಆದರು!

ಪಾಕಿಸ್ತಾನದ ಈ ವಿಡಿಯೊ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಸೇರಿದಂತೆ ಎಲ್ಲ ಕಡೆ ವೈರಲ್ ಆಗಿದೆ. ಆ ವಿಡಿಯೊ ಮೇಲೆ ಇದೆ, ಅಸಕ್ತರು ನೋಡಿ…
-Team Infotrend

Leave a Comment

Your email address will not be published. Required fields are marked *