ತಾಯಿಯ ಹೆದರಿಕೆ ಅಂದ್ರೆ ಇದು! ಬರೀ ಒಂದೇ ಒಂದು ಶಬ್ದಕ್ಕೆ ಮಗು ತಬ್ಬಿಬ್ಬಾಗಿ ಮಾಡಿದ ಆಕ್ಟ್ ನೋಡಿ; ನಕ್ಕು ನಕ್ಕು ಸಾಕಾಗುತ್ತೆ.

ಮಕ್ಕಳಿಗೆ ತಂದೆಯ ಹೆದರಿಕೆಗಿಂತ ತಾಯಿಯ ಹೆದರಿಕೆ ಇರಬೇಕಂತ ಹೇಳುತ್ತಾರೆ. ಅದಕ್ಕೆ ಕಾರಣ ಮಗು ಜಾಸ್ತಿ ತಾಯಿಯ ಹತ್ತಿರ ಇರುತ್ತದೆ. ಇದರಿಂದ ಮಕ್ಕಳು ಒಳ್ಳೆಯ ಸಂಸ್ಕಾರ ಬೇಗ ಕಲಿಯಲು ಸಹಾಯವಾಗುತ್ತದೆ. ತಂದೆ ಕೆಲಸ ನಿಮಿತ್ಯವಾಗಿ ಮನೆಯಿಂದ ಜಾಸ್ತಿ ಹೊರಗೆ ಇರುವುದರಿಂದ ಮಕ್ಕಳ ಮೇಲೆ ಅಷ್ಟೊಂದು ಗಾಢ ಪರಿಣಾಮ ಬೀಳದೆ ಇರಬಹುದು, ಮತ್ತು ಇರುವ ಸ್ವಲ್ಪ ಸಮಯ ತಂದೆ ಮಕ್ಕಳಿಗೆ ಹೆದರಿಸಲು ಉಪಯೋಗಿಸುವದೂ ಸರಿಯಲ್ಲ, ಅಲ್ವಾ?

ಸದ್ಯ ಇಲ್ಲಿ ನೋಡುವ ವಿಡಿಯೋ ತುಂಬಾ ಚೂಟಿಯಾಗಿದೆ. ಈ ವಿಡಿಯೋದಲ್ಲಿ ಕಂಡು ಬರುವ ಚೋಟುದ್ದ ಹುಡುಗನ ಆಕ್ಟಿಂಗ್ ಸಕ್ಕತ್ ಸೂಪರ್ ಆಗಿದೆ. ತಾಯಿಯ ಹೆದರಿಕೆ ಎಂದರೆ ಹೇಗಿರುತ್ತದೆ ಎಂಬುದರ ಉದಾಹರಣೆಯನ್ನು ಇಲ್ಲಿ ನೋಡಬಹುದು. ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಮಗು ನಲ್ಲಿಯ ನೀರಿನಲ್ಲಿ ಆಡುತ್ತಾ ತುಂಬಾ ಮಜಾ ಮಾಡುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಕೋಣೆಯಿಂದ ಬಾಬು….. ಎಂದು ತಾಯಿಯು ಜೋರಾಗಿ ಕರೆದ ಶಬ್ದ ಕೇಳಿ ಬರುತ್ತದೆ. ಈ ಶಬ್ದ ಕೇಳಿ ಬರುತ್ತಲೇ ಮಗು ಅಕ್ಷರಶಃ ಕಕ್ಕಾಬಿಕ್ಕಿಯಾಗುತ್ತದೆ, ಮತ್ತು ತಕ್ಷಣ ನೀರಿನಲ್ಲಿ ಆಡುವುದನ್ನು ಬಿಟ್ಟು ಶರ್ಟ್ ಮೇಲೇರಿಸಿ ಅಂಗಳದಲ್ಲಿ ಬಂದು ಕಕ್ಕಸಿಗೆ ಕುಳಿತುಕೊಳ್ಳುವ ತರ ಸೂಪರ್ ನಟನೆ ಮಾಡುತ್ತಾನೆ. ಮಗುವಿನ ಈ ನಾಟಕ ಮತ್ತು ತಾಯಿಯ ಹೆದರಿಕೆ ಇವೆರಡು ನೆಟ್ಟಿಗರಿಗೆ ಸಖತ್ ಇಷ್ಟವಾಗಿವೆ.

ವಿಡಿಯೋ ನೋಡಿ

 

View this post on Instagram

 

A post shared by meera chodhary (@meera_choudhary705)

ಈ ವಿಡಿಯೋ ನೇಟಿಜನ್ಸ್ ಗಳಿಗೆ ಇಷ್ಟವಾದ ಕಾರಣ ಇಲ್ಲಿಯವರೆಗೆ ಪ್ರಸ್ತುತ ವಿಡಿಯೋ 6.7 ಮಿಲಿಯನ್ ವರೆಗೆ ವೀಕ್ಷಣೆ ಪಡೆದು ಧೂಳ್ ಎಬ್ಬಿಸಿದೆ. ಈ ಮನರಂಜಿಸುವ ಕಂಟೆಂಟನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮಿನಲ್ಲಿ ಮೀರಾಚೌದರಿ705 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.