Articles

ಮಂಗನ ತಲೆ ಬಾಯಲ್ಲಿ ಹಿಡಿದು ಹೊರಟ ಚಿರತೆ, ಮರಿಮಂಗ ತಾಯಿಗೆ ನೇತಾಡುತ್ತ… ಮನ ಕಲಕುವ ದೃಶ್ಯದ ವೈರಲ್ ವಿಡಿಯೋ

‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬ ಗಾದೆ ಮಾತು ನಾವು ಚಿಕ್ಕವರಿದ್ದಾಗಿನಿಂದಲೂ ಕೇಳುತ್ತಾ ಬಂದಿದ್ದೇವೆ. ತಾಯಿ ಎಂಬ ಪದಕ್ಕೆ ಈ ಜಗತ್ತಿನಲ್ಲಿ ಮತ್ತೊಂದು ಸರಿಸಮಾನವಾದದ್ದು ಯಾವುದು ಇಲ್ಲ. ತಾಯಿಯ ಪ್ರೀತಿಯ ಮುಂದೆ ಯಾರ ಪ್ರೀತಿಯೂ ಲೆಕ್ಕಕ್ಕೆ ಬಾರದು. ತಾಯಿ ತನ್ನ ಮಕ್ಕಳಿಗಾಗಿ ಪಡುವ ಕಷ್ಟ, ಮಾಡುವ ತ್ಯಾಗ, ಮಗುವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿ ಇಡುತ್ತಾಳೆ.

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಸಹ ತಾಯಿಯ ಪ್ರೀತಿ ನಿಜಕ್ಕೂ ಬೆಲೆ ಕಟ್ಟಲಾಗದು ಎಂಬ ಅರಿವು ಪ್ರತ್ಯಕ್ಷವಾಗಿ ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ವಿಡಿಯೋ ನೋಡಿದ ಮೇಲೆ ನಿಮ್ಮ ಕಣ್ಣಲ್ಲಿಯೂ ಸಹ ನೀರು ಬರದೆ ಇರಲಾರದು. ಏಕೆಂದರೆ ತಾಯಿ ತನ್ನ ಮಗುವಿಗೆ ಎಷ್ಟು ಮುಖ್ಯ ಎನ್ನುವದು ಈ ವಿಡಿಯೋ ತೋರಿಸಿ ಕೊಡುತ್ತದೆ. ತಾಯಿ ತನ್ನ ಪ್ರಾಣ ಹೋದರು ಸಹ ತಾನು ಹೆತ್ತ ಮಗುವಿಗೆ ಎಷ್ಟು ಆಸರೆ ಎಂಬುದು ನಾವು ಈ ವಿಡಿಯೋದಲ್ಲಿ ಕಾಣಬಹುದು.

ಪ್ರಸ್ತುತ ವಿಡಿಯೋದಲ್ಲಿ ನಾವು ಒಂದು ಚಿರತೆ ಕಾಣಬಹುದು. ಚಿರತೆ ನೈಸರ್ಗಿಕವಾದ ತನ್ನ ಹಸಿವನ್ನು ನೀಗಿಸಿಕೊಳ್ಳಲು ಬೇ#ಟೆಯಾಡಲು ಹೋದಾಗ ಅದಕ್ಕೆ ಸಿಕ್ಕಿದ್ದು ಒಂದು ಮಂಗ. ಮಂಗನ ಬೇ#ಟೆಯಾಡಿ ಅದನ್ನು ತನ್ನ ಬಾಯಲ್ಲಿ ಹಿಡಿದುಕೊಂಡು ಹೋಗುವಾಗ ಅದರ ವಿಡಿಯೋ ಸೆರೆಸಿಕ್ಕಿದೆ. ಆದರೆ ಈ ದೃಶ್ಯವನ್ನು ಕಂಡರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತವೆ ಏಕೆಂದರೆ ಚಿರತೆ ತನ್ನ ಬಾಯಲ್ಲಿ ಹಿಡಿದುಕೊಂಡ ಮಂಗ ಅದೊಂದು ತಾಯಿಯಾಗಿತ್ತು. ತಮ್ಮ ಎಳೆ ಮಗುವಿನ ಹಸಿವು ನೀಗಿಸಲು ಹಾಲನ್ನು ಕುಡಿಸುತ್ತಿತ್ತು ಅಷ್ಟರಲ್ಲಿ ಈ ಚಿರತೆ ಬಂದು ಆ ತಾಯಿ ಮಂಗಳ ಬೇ#ಟೆಯಾಡುತ್ತದೆ.

ವಿಡಿಯೋ ನೋಡಿ

ಕೋತಿ ತನ್ನ ಮರಿಯನ್ನು ತನ್ನ ಕಂಕುಳಲ್ಲಿ ಇರಿಸಿಕೊಂಡು ಚಿರತೆಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಸಹ ಅದು ಯಶಸ್ಸು ದೊರೆಯದೆ ಕೊನೆಗೆ ಅದರ ಬಾಯಲ್ಲಿ ಸಿಲುಕಿ ಬಿಟ್ಟಿತು. ಆದರೆ ತನ್ನ ಮರಿ ಹಾಗೆ ಹಾಲು ಕುಡಿಯುತ್ತಿತ್ತು ಇದನ್ನು ಸಹ ಅರಿಯದ ಚಿರತೆ ಕೋತಿಯನ್ನು ಬಾಯಲ್ಲಿ ಹಿಡಿದು ಅದನ್ನು ಕೊಂ#ದು ಹಾಕಿತು. ತದನಂತರ ಕೋತಿಯನ್ನು ತನ್ನ ಬಾಯಲ್ಲಿ ಹಿಡಿದುಕೊಂಡು ಚಿರತೆ ತನ್ನ ಇರುವಿಕೆಯ ಸ್ಥಳಕ್ಕೆ ಹೋಗುತ್ತಿತ್ತು ಆದರೂ ಸಹ ಕೋತಿ ಮರಿ ತನ್ನ ತಾಯಿಯನ್ನು ಹಾಗೆ ಜೋರಾಗಿ ಅಪ್ಪಿಕೊಂಡು ಕುಳಿತಿತ್ತು. ಇದನ್ನು ನೋಡಿದ ಎಷ್ಟೋ ನೆಟ್ಟಿಗರು ದುಃ#ಖ ಪಟ್ಟಿದ್ದಾರೆ.

Leave a Comment

Your email address will not be published. Required fields are marked *