ದಕ್ಷಿಣ ಸಿನಿಮಾ ರಂಗದ ಈ ದಿಗ್ಗಜ ನಟರ ಆಸ್ತಿ ಎಷ್ಟು? ಊಹೆ ಮಾಡೋದು ನಿಜಕ್ಕೂ ಕಷ್ಟ

ಬಾಲಿವುಡ್ ನಟರ ಬಗ್ಗೆ, ಅವರು ಯಾವ ಸಿನಿಮಾ ಮಾಡುತ್ತಿದ್ದಾರೆ? ಅವರು ವಾಸ ಇರುವುದು ಎಲ್ಲಿ? ಅವರ ಆದಾಯ ಮತ್ತು ಸಂಪತ್ತು ಎಷ್ಟು? ಅವರ ಇತರೆ ವ್ಯವಹಾರಗಳೇನು? ಎನ್ನುವ ಬಗ್ಗೆ ಅನೇಕ ವಿಚಾರಗಳು ಆಗಾಗ ಮಾದ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತವೆ‌. ಆದರೆ ಇಂದು ನಾವು ಅದಕ್ಕೆ ಬದಲಾಗಿ ದಕ್ಷಿಣ ಭಾರತದ ವಿಶೇಷವಾಗಿ ಟಾಲಿವುಡ್ ನ ಕೆಲವು ಜನಪ್ರಿಯ ಹಾಗೂ ಶ್ರೀಮಂತ ನಟರ ಬಗ್ಗೆ ಹೇಳಲಿದ್ದೇವೆ. ಈ ನಟರು ತಮ್ಮ‌ ನಟನೆಯಿಂದ ಸಂಚಲನ ಸೃಷ್ಟಿಸಿದವರು, ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವವರು ಮಾತ್ರವೇ ಅಲ್ಲದೇ ಗಳಿಕೆಯ ವಿಚಾರದಲ್ಲಿ ಕೂಡಾ ಇವರು ಮಂಚೂಣಿಯಲ್ಲಿರುವ ನಟಿರಾಗಿದ್ದಾರೆ ಎನ್ನುವುದು ನಿಜ. ಹಾಗಾದರೆ ಬನ್ನಿ ಅವರ ಬಗ್ಗೆ ತಿಳಿದುಕೊಳ್ಳೋಣ.

ತೆಲುಗು ಚಿತ್ರ ಗಳಲ್ಲಿ ಯುವಸಾಮ್ರಾಟ್ ಎನ್ನುವ ಬಿರುದು ಪಡೆದಿರುವ ನಟ ಅಕ್ಕಿನೇನಿ ನಾಗಾರ್ಜುನ ವಿಭಿನ್ನವಾದ ಪಾತ್ರ ಪೋಷಣೆಯ ಮೂಲಕ ಜನಪ್ರಿಯ. ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದನ್ನು ಕೂಡಾ ಮಾಡುತ್ತವೆ. ನಾಗಾರ್ಜುನ ನಟ ಮಾತ್ರವಲ್ಲದೇ ಒಬ್ಬ ಉದ್ಯಮಿ ಕೂಡಾ ಹೌದು. ಅವರು ಹೈದ್ರಾಬಾದ್ ಮೂಲದ ಬ್ಲೂ ಕ್ರಾಸ್ ಎನ್ಜಿಓ ದ ಸಹ ಸಂಸ್ಥಾಪಕರಾಗಿದ್ದು, ಅನ್ನಪೂರ್ಣ ಸ್ಟುಡಿಯೋಸ್ ನ ಮಾಲೀಕರು ಆಗಿದ್ದಾರೆ. ಇವರು ದಕ್ಷಿಣ ಭಾರತದ ಶ್ರೀಮಂತ ನಟನಾಗಿದ್ದು ಇವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 3000 ಕೋಟಿ ರೂಪಾಯಿಗಳಾಗಿದೆ.

ತೆಲುಗು ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಮಾಡಿರುವ ಯುವ ನಟ ರಾಮ್ ಚರಣ್ ತೇಜಾ ಅವರ ಖಾತೆಯಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳ ಪಟ್ಟಿಯೇ ಇದೆ‌.‌ ಮೆಗಾಸ್ಟಾರ್ ಚಿರಂಜೀವಿ ಅವರ ಮಗ ಎನ್ನುವುದಕ್ಕಿಂತಲೂ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿರುವ ರಾಮ್ ಚರಣ್ ಕೊನಿಡಾಲ ಪ್ರೊಡಕ್ಷನ್ ಕಂಪನಿ, ರಾಮ್ ಚರಣ್ ಪೋಲೊ ತಂಡ, ಹೈದ್ರಾಬಾದ್ ಮೂಲದ ವಿಮಾನಯಾನ ಟ್ರುಜೆಡ್ ನ ಮಾಲೀಕರಾಗಿದ್ದು, ರಾಮ್ ಚರಣ್ ಚಿಕ್ಕ ವಯಸ್ಸಿಗೆ 2,800 ಕೋಟಿ ರೂಪಾಯಿಗಳ ಆಸ್ತಿಯ ಒಡೆಯ ಎಂದರೆ ಆಶ್ಚರ್ಯ ಆಗುವುದು.

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಎಂದೇ ಖ್ಯಾತರಾದ ಅದ್ಭುತ ನಟನೆ ಮತ್ತು ಡಾನ್ಸ್ ಗೆ ಹೆಸರಾಗಿರುವ ನಟ ಚಿರಂಜೀವಿ ಎಂದರೆ ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ. ಇವರು ತೆಲುಗಲ್ಲಿ ಒಟ್ಟು 150 ಸಿನಿಮಾಗಳಲ್ಲಿ ನಟಿಸಿದ್ದು, ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಇವರದ್ದು. ಮೆಗಾಸ್ಟಾರ್ ಚಿರಂಜೀವಿ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 1500 ಕೋಟಿ ರೂಗಳಾಗಿವೆ.

ಟಾಲಿವುಡ್ ನಲ್ಲಿ ಸಿಂಹಾದ್ರಿ, ಯಮದೊಂಗ, ಕಂತ್ರಿ, ಜನತಾ ಗ್ಯಾರೇಜ್, ಹೀಗೆ ಅದ್ಭುತ ಸಿನಿಮಾಗಳ ಮೂಲಕ ತನ್ನ ನಟ ವಿಶ್ವರೂಪವನ್ನು ತೋರಿದ ನಟ ನಂದಮೂರಿ ಕುಟುಂಬದ ಕುಡಿ ಜೂನಿಯರ್ ಎನ್.ಟಿ.ಆರ್. ನಟನೆ ಹಾಗೂ ಡಾನ್ಸ್ ಎರಡರಿಂದಲೂ ಅಭಿಮಾನಿಗಳ ಅಭಿಮಾನ ಪಡೆದವರು, ಈ ನಟ ಕೂಡಾ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದು, ಇವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 1000 ಕೋಟಿಯಾಗಿದೆ‌.

ತೆಲುಗು ಚಿತ್ರರಂಗ ಕಂಡ ನಟ ವಿಶ್ವರೂಪ ಪ್ರದರ್ಶನ ಮಾಡಿದ ಹಿರಿಯ ನಟ ಎನ್.ಟಿ.ಆರ್. ಅವರ ಪುತ್ರ ನಂದಮೂರಿ ಬಾಲಕೃಷ್ಣ ಕೂಡಾ ಟಾಲಿವುಡ್ ನಲ್ಲಿ ತನ್ನದೇ ಆದ ವರ್ಚಸ್ಸು, ಅಭಿಮಾನಿಗಳ ಬಳಗ ಹೊಂದಿರುವ ನಟ, ದಶಕಗಳಿಂದ ಸಿನಿಮಾಗಳಲ್ಲಿ ನಟಿಸುತ್ತಾ ಅನೇಕ ಸೂಪರ್ ಹಿಟ್ ಗಳನ್ನು ನೀಡಿರುವ ಅವರು ಭೈರವ ದ್ವೀಪಂ, ಲೆಜೆಂಡ್, ಸಮರಸಿಂಹ ರೆಡ್ಡಿ, ಚೆನ್ನಕೇಶವ ರೆಡ್ಡಿ ಹೀಗೆ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 800 ಕೋಟಿ ರೂಪಾಯಿಗಳಾಗಿವೆ.