ದಶಕಗಳ ಹಿಂದೆ ಷೇರುಗಳ ಮೇಲೆ 2 ಲಕ್ಷ ಹೂಡಿಕೆ ಮಾಡಿದ ವ್ಯಕ್ತಿ, ಇಂದು ಆ ಷೇರುಗಳ ಮೌಲ್ಯ ಬರೋಬ್ಬರಿ 160 ಕೋಟಿ!

ಯಾವುದೇ ವ್ಯಕ್ತಿಯಾಗಲಿ ಆರ್ಥಿಕವಾಗಿ ಸಬಲರಾಗಲು ಹಾಗೂ ಭವಿಷ್ಯವನ್ನು ಭದ್ರ ಪಡಿಸಿಕೊಳ್ಳಲು ಅತಿ ಮುಖ್ಯವಾಗಿ ಬೇಕಾಗಿರುವುದು ಉಳಿತಾಯ ಬಹಳ ಮುಖ್ಯವೆಂದು ಹೇಳಲಾಗುತ್ತದೆ. ಆದರೆ ಕೇವಲ ಉಳಿತಾಯ ಒಂದರಿಂದಲೇ ಮಾತ್ರವೇ ಸಾಧ್ಯವಿಲ್ಲವೆನ್ನುವುದು ಕೂಡಾ ಸತ್ಯವಾದ ಮಾತಾಗಿದೆ‌. ಉಳಿತಾಯದ ಜೊತೆಗೆ ಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಕೂಡಾ ನಮ್ಮ ಭವಿಷ್ಯಕ್ಕೆ ಬಹಳ ಅನುಕೂಲಕರವಾಗುತ್ತದೆ ಮಾತ್ರವೇ ಅಲ್ಲದೇ ನಮ್ಮ ಭವಿಷ್ಯವನ್ನು ಭದ್ರಪಡಿಸಲು ನೆರವಾಗುತ್ತದೆ. ಇದೇ ವೇಳೆ ಹಾಗಾದರೆ ಯಾವುದರ ಮೇಲೆ ಹಣವನ್ನು ಹೂಡಿಕೆ ಮಾಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ .ಈ ವಿಚಾರದಲ್ಲಿ ಒಂದು ಉದಾಹರಣೆಯನ್ನು ನಾವು ಈಗ ಹೇಳಲು ಹೊರಟಿದ್ದೇವೆ.

ಈ ವಿಷಯವು 1990 ರ ದಶಕದಲ್ಲಿ ನಡೆದಂತಹ ಒಂದು ಸತ್ಯ ಘಟನೆಯನ್ನು ಆಧರಿಸಿದೆ. ಮುಂಬೈ ನಗರದ ಒಬ್ಬ ವ್ಯಕ್ತಿಯು ಎಂ ಆರ್ ಎಫ್ ಕಂಪನಿಯ 20,000 ಷೇರಯಗಳನ್ನು ಖರೀದಿ ಮಾಡಿದ್ದರು. ಅಂದರೆ ಅವರು 20, 000 ಷೇರುಗಳ ಮೇಲೆ ಹೂಡಿಕೆಯನ್ನು ಮಾಡಿದ್ದರು ಎಂದು ಹೇಳಬಹುದು. ಆಗ ಒಂದು ಶೇರಿನ ಬೆಲೆ ಹತ್ತು ರೂಪಾಯಿಗಳಾಗಿತ್ತು. ಆದರೆ ಆ ಲೆಕ್ಕದಲ್ಲಿ ಆ ವ್ಯಕ್ತಿಯು ದಶಕಗಳ ಹಿಂದೆ ಎಂ ಆರ್ ಎಫ್ ಕಂಪನಿಯ ಷೇರುಗಳ ಮೇಲೆ ಎರಡು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು.

ಇದಾದ ನಂತರ ಆ ವ್ಯಕ್ತಿಯು ಪಾರ್ಶ್ವವಾಯುವಿಗೆ ಗುರಿಯಾದರು. ಅದರಿಂದ ಚೇತರಿಸಿಕೊಳ್ಳಲು ಅವರಿಗೆ ಬರೋಬ್ಬರಿ ಹತ್ತು ವರ್ಷಗಳ ಕಾಲ ಹಿಡಿಯಿತು. ಈ ಹತ್ತು ವರ್ಷಗಳ ಕಾಲ ಅವರು ತಾನು ಬಂಡವಾಳ ಹೂಡಿಕೆ ಮಾಡಿದ್ದ ಶೇರುಗಳ ಕುರಿತಾಗಿ ಆಲೋಚನೆ ಮಾಡಲು ಅಥವಾ ಅದರ ಬಗ್ಗೆ ತಿಳಿದುಕೊಳ್ಳಲು ಅವಕಾಶವೇ ಸಿಗಲಿಲ್ಲ. ಕೇವಲ ಆರೋಗ್ಯ ಪರಿಸ್ಥಿತಿಯ ಸುಧಾರಣೆ ಕಡೆಗೆ ಗಮನ ನೀಡಬೇಕಾಯಿತು. ಹತ್ತು ವರ್ಷಗಳ ನಂತರ ಅವರು ಚೇತರಿಸಿಕೊಂಡ ಮೇಲೆ ತಾನು ಎಂ ಆರ್ ಎಫ್ ಕಂಪನಿಯ 20,000 ಶೇರುಗಳನ್ನು ಖರೀದಿ ಮಾಡಿದ ವಿಷಯವನ್ನು ತಮ್ಮ ಮೊಮ್ಮಗನಿಗೆ ತಿಳಿಸಿದರು.

ಆ ವ್ಯಕ್ತಿಯ ಮೊಮ್ಮಗ ತಾತ ಖರೀದಿ ಮಾಡಿದಂತಹ
ಷೇರುಗಳ ಇಂದಿನ ಬೆಲೆಯನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಆತ ಶಾಕ್ ಆಗಿದ್ದಾರೆ. ಏಕೆಂದರೆ ದಶಕಗಳ ಹಿಂದೆ ತಾತ ಖರೀದಿ ಮಾಡಿದ್ದ ಷೇರುಗಳ ಬೆಲೆ 130 ಕೋಟಿ ರೂಪಾಯಿಗಳಾಗಿತ್ತು. ಇನ್ನು ವಿಶೇಷ ಏನೆಂದರೆ ಇಂದು ಅದೇ ಷೇರುಗಳ ಬೆಲೆ ಬರೋಬ್ಬರಿ 160 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದನ್ನೇ ಹೂಡಿಕೆಯ ಪವರ್ ಎಂದು ಹೇಳಿದರೆ ಖಂಡಿತ ತಪ್ಪಾಗುವುದಿಲ್ಲ. ಮದ್ಯಮ ವರ್ಗದ ಜನರು ಸಾಮಾನ್ಯವಾಗಿ ತಮ್ಮ ಉಳಿತಾಯದ ಹಣವನ್ನು ಎಫ್ ಡಿ ಅಥವಾ ಆರ್ ಡಿ ಗಳಲ್ಲಿ ಇಡುತ್ತಾರೆ. ಹೀಗೆ ಇಡುವ ಹಣದಲ್ಲಿ 10 % ಅಥವಾ 20 % ಹಣವನ್ನು ಹೂಡಿಕೆ ಮಾಡಿದರೂ ಸಹಾ ನಮ್ಮ ಭವಿಷ್ಯ ಉಜ್ವಲವಾಗುವ ಸಾಧ್ಯತೆಗಳಿವೆ. ಇನ್ನು ಮುಂದೆಯಾದರೂ ಹೂಡಿಕೆ ಬಗ್ಗೆ ಆಲೋಚನೆ ಮಾಡಿ..