‘ಬುರ್ಜ್ ಖಲೀಫಾ’ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಾಶ್ರೀ; ‘ಜಬರದಸ್ತ್’ ಎಂದ ಫ್ಯಾನ್ಸ್! ನೋಡಿ ಈ Video

RCB ತಂಡದ ಪ್ರಮುಖ ಬಾಲರ್ ಆದ ಯಜುರ್ವೆಂದ್ರ ಚಹಲ್ ಅವರ ಭಾವಿ ಪತ್ನಿ ವೃತ್ತಿಯಲ್ಲಿ ಡೆಂಟಿಸ್ಟ್ ಇದ್ದರೂ ಡ್ಯಾನ್ಸ್ ನ್ನು ತುಂಬಾ ಇಷ್ಟ ಪಡುತ್ತಾರೆ. ಮತ್ತು ಅವರು ಕೊರಿಯೋಗ್ರಾಫರ್ ಇದ್ದಾರೆ. ಆಗಾಗ್ಗೆ ತಮ್ಮ ಡ್ಯಾನ್ಸಿಂಗ್ ವಿಡಿಯೋಗಳನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡುತ್ತಾ ಇರುತ್ತಾರೆ.

ಸದ್ಯ IPL 13 ನೇ ಆವೃತ್ತಿ ದುಬೈನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. RCB ಕಡೆಯಿಂದ ಆಡುತ್ತಿರುವ ಮತ್ತು ಭವಿಷ್ಯದಲ್ಲಿ ತಮ್ಮ ಗಂಡನಾಗುವ ಚಹಲ್ ಅವರಿಗೆ ಪ್ರೋತ್ಸಾಹಿಸುವ ಸಲುವಾಗಿ ಧನಶ್ರೀ ದುಬೈಗೆ ಹೋಗಿದ್ದಾರೆ.

ವಿಡಿಯೋ ನೋಡಿ

ಧನಶ್ರೀಯವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುತ್ತಾರೆ. ಮತ್ತು ಅವರು ಮಾಡಿದ ವಿಶೇಷ ಡ್ಯಾನ್ಸ್ ಗಳ ವೀಡಿಯೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಅವರು ಇತ್ತೀಚೆಗೆ ಡ್ಯಾನ್ಸ್ ಮಾಡಿದ ಕೆಲವು ವಿಡಿಯೋಗಳು ತುಂಬಾ ವೈರಲ್ ಆಗಿವೆ. ಈಗ ಧನಶ್ರೀಯವರು ಭುರ್ಜ ಖಲೀಫಾ ಕಟ್ಟಡದ ಮೇಲೆ ಡ್ಯಾನ್ಸ್ ಒಂದು ಹೊಡೆದಿದ್ದಾರೆ. ಈ ಡ್ಯಾನ್ಸ್ ಸದ್ಯ ತುಂಬಾ ವೈರಲ್ ಆಗುತ್ತಿದೆ. ಅಕ್ಷಯ್ ಕುಮಾರ್ ಮತ್ತು ಕಿಯಾರ್ ಅಡ್ವಾಣಿ ಯವರ ಹಾಡಿನ ಮೇಲೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋದಲ್ಲಿ ರೆಡ್ ಕಲರ್ ಮಿನಿ ಡ್ರೆಸ್ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ. ಇಲ್ಲಿ ಧನಶ್ರೀ ಯವರು ಬುರ್ಜ್ ಖಲೀಫಾ ಡ್ಯಾನ್ಸ್ ಚಾಲೆಂಜ್ ಅಂತ ಉಲ್ಲೇಖಿಸಿದ್ದಾರೆ. ಜೊತೆಗೆ ತಮ್ಮ ಫ್ಯಾನ್ಸ್ ಗಳಿಗೆ ಈ ಹಾಡಿನ ಮೇಲೆ ವೀಡಿಯೋ ಒಂದನ್ನು ನಿರ್ಮಿಸಿ ನನ್ನ ಅಕೌಂಟ್ ಗೆ ಕಳಿಸಿ ಎಂದು ಚಾಲೆಂಜ್ ಹಾಕಿದ್ದಾರೆ.