Articles

ನೂರರ ಹರೆಯದಲ್ಲಿ ಅಜ್ಜಿ ಮಾಡುತ್ತಿರುವ ಕೆಲಸವನ್ನೊಮ್ಮೆ ನೋಡಿಯೇ ಬಿಡಿ ಈ ವಿಡಿಯೋದಲ್ಲಿ…

ಸದ್ಯದ ಸಮಯದಲ್ಲಿ ಕೆಲಸ ಯಾರಿಗೂ ಬೇಡವಾಗಿದೆ. ಎಲ್ಲವೂ ತನ್ನಂತಾನೆ ತಯಾರಾಗಿ ಆಟೋಮೆಟಿಕ್ ಆಗಬೇಕೆಂಬ ಮನೋಭಾವನೆ ಉಳ್ಳವರು ಹೆಚ್ಚಾಗುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಎಲ್ಲವೂ ಡಿಜಿಟಲ್ ಆಗಿ ನಡೆಯಬೇಕೆಂಬ ಆಸೆ ಹೆಚ್ಚಾಗುತ್ತಿದೆ. ಬಸವಣ್ಣನವರ ಹೇಳಿದ ಕಾಯಕವೇ ಕೈಲಾಸವೆಂಬ ಮಾತು ನಿಧಾನವಾಗಿ ಮರೆಯುತ್ತಾ ನಡೆಯುತ್ತಿದೆ ಈ ಜಗತ್ತು. ನೀರು ಸದಾ ಹರಿಯುತ್ತಲೇ ಇರಬೇಕು. ಕಾರಣ ಹರಿಯುವ ನೀರು ಒಮ್ಮೆ ನಿಂತರೆ ಮುಗಿದು ಹೋಯಿತು, ಗಬ್ಬೆದ್ದು ದುರ್ವಾಸನೆ ಹೊಡೆಯಲು ಶುರುವಾಗುತ್ತದೆ. ಹಾಗೆಯೇ ಮನುಷ್ಯನು ಸಹ ಸದಾ ತನ್ನ ಕರ್ಮದಲ್ಲಿ ಅಥವಾ ಕೆಲಸದಲ್ಲಿ ತೊಡಗಿದ್ದಾಗಲೇ ಆತ ಆಕ್ಟಿವ್ ಆಗಿರಲು ಸಾಧ್ಯ. ಈಗಿನ ಡಿಜಿಟಲ್ ಯುಗದ ಹೊಸಪೀಳಿಗೆ ಮೈ ಮುರಿದು ದುಡಿಯುವ ಗೋಜಿಗೆ ಹೋಗುವುದೇ ಇಲ್ಲ. ಹಳೆಯ ಹಿರಿಯ ವ್ಯಕ್ತಿಗಳು ಮಾತ್ರ ಈಗಲೂ ಚಿಲುಮೆಯ ಬುಗ್ಗೆಯಂತೆ ಸದಾ ಉತ್ಸಾಹಿಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಇದೇ ರೀತಿಯ ನೂರರ ಹೊಸ್ತಿಲಲ್ಲಿರುವ ಅಜ್ಜಿಯೊಬ್ಬಳು ಕೆಲಸ ಮಾಡುತ್ತಿರುವ ವೀಡಿಯೋ ಒಂದು ಸದ್ಯ ನಿಮಗಾಗಿ ತಂದಿದ್ದೇವೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಅಜ್ಜಿಯ ವಯಸ್ಸು ಏನಿಲ್ಲವೆಂದರೂ ನೂರರ ಆಸುಪಾಸಿದೆ. ಇಷ್ಟಿದ್ದರೂ ಸಣಕಲು ದೇಹದ ಅಜ್ಜಿ ತನ್ನ ತೋಟದಲ್ಲಿ ಮೈ ಮುರಿದು ಕಳೆ ಕೀಳುವ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಈ ವಯಸ್ಸಿನಲ್ಲಿಯೂ ಸುಮ್ಮನೆ ಮನೆಗೆ ಅಥವಾ ಭೂಮಿಗೆ ಭಾರವಾಗಿ ಕೂಡದೆ ಇವರು ಮಾಡುತ್ತಿರುವ ಕೆಲಸ ನೋಡಿ ನಿಜಕ್ಕೂ ಯುವ ಪೀಳಿಗೆ ಹೆಮ್ಮೆಪಡಬೇಕು. ಅಜ್ಜಿ ತೋಟದಲ್ಲಿ ಎದ್ದ ನಿರುಪಯುಕ್ತ ಗಿಡಗಳನ್ನು ಯಾವ ರೀತಿಯಾಗಿ ಉತ್ಸಾಹದಿಂದ ನೆಲಸಮ ಮಾಡುತ್ತಿದ್ದಾಳೆ ನೋಡಿ. ಅಷ್ಟೇ ಅಲ್ಲ ಜೊತೆಗೆ ಆ ಕಸವನ್ನು ಕೀಳುವ ಉಪಕರಣಕ್ಕೆ ಮಧ್ಯದಲ್ಲಿ ಸಾಣೆ ಹಚ್ಚಿ ಇನ್ನಷ್ಟು ಹರಿತವನ್ನಾಗಿ ಮಾಡುತ್ತಾಳೆ. ಮತ್ತೆ ಕಸ ಕೀಳುವ ಕೆಲಸದಲ್ಲಿ ಮಗ್ನಳಾಗುತ್ತಾಳೆ. ಅಜ್ಜಿಯು ಈ ವಯಸ್ಸಿನಲ್ಲಿ ಮಾಡುತ್ತಿರುವ ಕೆಲಸ ನೋಡಿದರೆ ನಿಜಕ್ಕೂ ಆಶ್ಚರ್ಯವೇ ಪಡಬೇಕು, ಅಜ್ಜಿಯ ಈ ವಿಡಿಯೋ ಸುಮ್ಮನೆ ಕೆಲಸವಿಲ್ಲದೆ ತಂದೆತಾಯಿಗಳಿಗೆ ಮತ್ತು ಮನೆಗೆ ಭಾರವಾಗಿ ಕುಳಿತುಕೊಳ್ಳುವ ಕೈಲಾಗದವರನ್ನು ಹೊಡೆದು ಎಬ್ಬಿಸುವಂತಿದೆ.

ವಿಡಿಯೋ ನೋಡಿ

ಅಜ್ಜಿಯು ದುಡಿಯುವ ಮತ್ತು ಇನ್ನೊಬ್ಬರಿಗೆ ದುಡಿಯಲು ಪ್ರೇರಣೆಯಾಗುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಪೇಜ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.

Leave a Comment

Your email address will not be published. Required fields are marked *