ದೇವರು ಸದಾ ಮಕ್ಕಳ ಜೊತೆಗೆ ಇರುತ್ತಾನೆ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ! ಕಾರಿನಲ್ಲಿ ಆಡುತ್ತಿದ್ದ ಪುಟ್ಟ ಮಗುವಿನೊಂದಿಗೆ……!!
ಸೋಶಿಯಲ್ ಮೀಡಿಯಾದಲ್ಲಿ ನಂಬಲು ಅಸಾಧ್ಯವಾದ ಕೆಲವೊಂದು ವಿಡಿಯೋಗಳು ಆಗಾಗ ಶೇರ್ ಆಗುತ್ತಿರುತ್ತವೆ. ಈ ವಿಡಿಯೋಗಳನ್ನು ನೋಡಿದಾಗ ನಿಜಕ್ಕೂ ನಮ್ಮ ಕಣ್ಣುಗಳಿಗೆ ವಿಶ್ವಾಸವಿಡಲು ಸಾಧ್ಯವೇ ಆಗುವುದಿಲ್ಲ. ಅಷ್ಟೊಂದು ಕನ್ಫ್ಯೂಸ್ ಮಾಡುತ್ತವೆ ಈ ವಿಡಿಯೋಗಳು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಂಬಾ ರೋಚಕತೆಯಿಂದ ಕೂಡಿದೆ. ಈ ವಿಡಿಯೋ ನೋಡಿದಾಗ ಪ್ರಸ್ತುತ ರಸ್ತೆಯಲ್ಲಿ ಏನಾದರೂ ಒಂದು ರಹಸ್ಯ ಅಡಗಿದೆಯೇನೋ ಎಂಬಂತೆ ಪ್ರಶ್ನೆ ಹುಟ್ಟುತ್ತದೆ. ವಿಡಿಯೋದಲ್ಲಿ ಕಾಣಿಸುವ ದೃಶ್ಯ ನೋಡಿದಾಗ ಇದು ಹೇಗೆ ಆಗಲು ಸಾಧ್ಯ ಎಂಬ ಪ್ರಶ್ನೆ ಹುಟ್ಟಿ ನೆಟ್ಟಿಗರು ಪ್ರಸ್ತುತ ವಿಡಿಯೋವನ್ನು ಮೇಲಿಂದ ಮೇಲೆ ನೋಡುತ್ತಿದ್ದಾರೆ.
ಈ ವೀಡಿಯೋ ನೋಡಿದ ಕೂಡಲೇ ಮಕ್ಕಳ ಜೊತೆಗೆ ದೇವರು ಸದಾ ಇರುತ್ತಾನೆ ಎನ್ನುವಿರಿ. ಈ ವಿಡಿಯೋ ನೋಡಿ ಪುಟ್ಟ ಮಗುವಿನ ಅದೃಷ್ಟದ ಬಗ್ಗೆ ತುಂಬಾ ಹೋಗಳುತ್ತಿದ್ದರೆ, ಮಗುವಿನ ತಂದೆ ಮಾತ್ರ ದೇವರಿಗೆ ಧನ್ಯವಾದಗಳು ತಿಳಿಸುತ್ತಿದ್ದಾನೆ. ಏಕೆಂದರೆ ತನ್ನ ಮಗುವಿನ ಜೀವನ ಕೇವಲ ಸೆಕೆಂಡ್ ನಲ್ಲಿ ಮಾತ್ರ ದೇವರು ಉಳಿದಿದ್ದಾನೆ ಎಂದು ಮನದಲ್ಲಿ ತಿಳಿದುಕೊಂಡು ಧನ್ಯವಾದಗಳು ತಿಳಿಸುತ್ತಿದ್ದಾನೆ. ಈ ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಮಗು ತನ್ನ ಮನೆಯ ಮುಂದೆ ನಿಂತಿದ್ದ ಕಾರಿನಲ್ಲಿ ಆಟ ಆಡುತ್ತಿರುತ್ತದೆ ಅದೇ ಸಮಯದಲ್ಲಿ ಮಗುವಿನ ಮೇಲೆ ನಿಗಾ ಇಡಲು ತಂದೆಯೂ ಸಹ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ಮೊಬೈಲ್ ನೋಡುತ್ತಿರುತ್ತಾನೆ. ಇದ್ದಕ್ಕಿದ್ದಂತೆ ಮಗು ಕಾರಿನಿಂದ ಇಳಿದುಕೊಂಡು ತಂದೆಯತ್ತ ಸಾಗುತ್ತದೆ. ಹೋಗುತ್ತಿದ್ದ ಕೆಲವೇ ಸೆಕೆಂಡ್ ಗಳಲ್ಲಿ ರಸ್ತೆಯ ಮೇಲಿಂದ ಒಂದು ಕಾರು ತುಂಬಾ ವೇಗವಾಗಿ ಅಲ್ಲಿ ನಿಂತಿದ್ದ ಕಾರಿನತ್ತ ಬರುತ್ತದೆ, ಅದರ ಸ್ಪೀಡ್ ನಿಂದಾಗಿ ಅಲ್ಲಿದ್ದ ಮರ ಮತ್ತು ಕಾರು ಎರಡು ಅಲ್ಲಿಂದ ಇಲ್ಲದಂತಾಗುತ್ತವೆ ಅಂದರೆ ಅಷ್ಟೊಂದು ಸ್ಪೀಡ್ ನಿಂದಾಗಿ ಕಾರು ಮತ್ತು ಮರ ಎರಡು ಹಾರಿ ಹೋಗುತ್ತವೆ. ಒಂದು ವೇಳೆ ಮಗು ಕಾರಿನಲ್ಲಿ ಇದ್ದಿದ್ದರೆ ಮಗುವಿನ ಪರಸ್ಥಿತಿ ಏನಾಗಿರಬಹುದು? ಯೋಚನೆ ಮಾಡಿದರೆ ಮೈಜುಮ್ಮ ಎನ್ನುತ್ತೆ. ರಸ್ತೆಯ ಮೇಲೆ ಬರುತ್ತಿದ್ದ ಗಾಡಿಯ ಚಾಲಕನ ನಿಯಂತ್ರಣ ಇಂತಹ ದು#ರ್ಘಟನೆ ನಡೆದಿದೆ. ಈ ಎಲ್ಲ ಘಟನೆಯ ರೆಕಾರ್ಡ್ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋ ನೋಡಿದ ಮೇಲೆ ಆ ಮಗುವನ್ನು ಆ ದೇವರೇ ಅಲ್ಲಿಂದ ದೂರ ಹೋಗಲು ಹೇಳಿರಬಹುದು, ಹಾಗಾಗಿ ಮಕ್ಕಳ ಜೊತೆಗೆ ದೈವ ವಿರುತ್ತಾನೆ’. ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ಸೋಶಿಯಲ್ ಮಿಡಿಯಾದ ಒಂದು ಪ್ರಸಿದ್ಧ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ baba_ki_nagari_aao_kabiಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಪ್ರಸ್ತುತ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.