“ದೇಶದಲ್ಲಿಯ ಎಲ್ಲ ಪೆಟ್ರೋಲ್ ಪಂಪ್ ಗಳ ಹೆಸರು ಬದಲಾಯಿಸಿ ನರೇಂದ್ರ ಮೋದಿ ವಸೂಲಿ ಕೇಂದ್ರ ಎಂದು ಮರುನಾಮಕರಣ ಮಾಡಿ”
ದೇಶದಲ್ಲಿಯ ಎಲ್ಲ ಪೆಟ್ರೋಲ್ ಪಂಪ ಗಳ ಹೆಸರು ಬದಲಾಯಿಸಿ ನರೇಂದ್ರ ಮೋದಿ ವಸೂಲಿ ಕೇಂದ್ರ ಎಂದು ಮರುನಾಮಕರಣ ಮಾಡಿ….
ನವದೆಹಲಿ:- ಸದ್ಯ ಭಾರತದ ಕೆಲವು ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ 90 ಕ್ಕೆ ತಲುಪಿತು. ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಅನುಕ್ರಮವಾಗಿ 28 ಮತ್ತು 29 ಪೈಸೆಗಳನ್ನು ಪ್ರತಿ ಲೀಟರ್ ಹಿಂದೆ ಹೆಚ್ಚು ಮಾಡಿದ್ದಾರೆ. ಈ ಕಾರಣದಿಂದಾಗಿ ಭಾರತದ ಕೆಲವು ಪಟ್ಟಣಗಳಲ್ಲಿ ಪೆಟ್ರೋಲ್ ಬೆಲೆ 90 ಗಡಿದಾಟಿದೆ.
ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆ ಏರಿಕೆಯಿಂದಾಗಿ ಕಾಂಗ್ರೆಸ್ ನೇತಾರರಾದ ಶ್ರೀವತ್ಸ ಇವರು ನೇರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಟಾರ್ಗೆಟ್ ಮಾಡಿ, ಪೆಟ್ರೋಲ್ ಪಂಪುಗಳ ಹೆಸರನ್ನು ಬದಲಾಯಿಸಿ ನರೇಂದ್ರ ಮೋದಿ ವಸೂಲಿ ಕೇಂದ್ರವೆಂದು ಮರುನಾಮಕರಣ ಮಾಡಿ ಎಂಬ ಮಾತನ್ನು ಹೇಳಿದ್ದಾರೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ rs.90 ಇದ್ದರೂ ಅದರಲ್ಲಿ ವಾಸ್ತವಿಕವಾಗಿ ಪ್ರತಿ ಲೀಟರ್ rs.30 ಮತ್ತು ಮೋದಿ ಟ್ಯಾಕ್ಸ್ rs.60 ಗಳನ್ನು ಆಡ್ ಮಾಡಿ ಒಟ್ಟು 90 ರೂಪಾಯಿಗಳವರೆಗೆ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಈ ಪೆಟ್ರೋಲ್ ಪಂಪ್ ಗಳ ಹೆಸರನ್ನೇ ಬದಲಾಯಿಸಬೇಕು.ಮತ್ತು ಇವುಗಳಿಗೆ ಮೋದಿ ವಸೂಲಿ ಕೇಂದ್ರವೆಂದು ಮರು ನಾಮಕರಣ ಮಾಡಬೇಕೆಂದು ಶ್ರೀವತ್ಸ ಅವರು ಟೀಕೆ ಮಾಡಿದ್ದಾರೆ.
Petrol Rate : ₹90
— Srivatsa (@srivatsayb) December 9, 2020
Real Cost : ₹30
Modi Tax : ₹60
All Petrol Bunks should be renamed as 'Narendra Modi Vasooli Kendra' pic.twitter.com/l38jpsucwx
ಬಿಜೆಪಿಯ ಹಿರಿಯ ಮುಖಂಡರಾದ ಮತ್ತು ರಾಜ್ಯಸಭೆಯ ಸಂಸತ್ ಸದಸ್ಯರಾದ ಸುಬ್ರಹ್ಮಣ್ಯಂ ಸ್ವಾಮಿ ಅವರು ಪೆಟ್ರೋಲ್ ದರ rs.40 ಪ್ರತಿ ಲೀಟರ್ ಇರಬೇಕು ಎಂದು ಹೇಳಿದ್ದಾರೆ. ಸುಬ್ರಮಣ್ಯ ಸ್ವಾಮಿ ಅವರ ಈ ಮಾತಿನಿಂದ ಬಿಜೆಪಿಯು ಮತ್ತಷ್ಟು ಪೇಚಿಗೆ ಸಿಲುಕಿದಂತಾಗಿದೆ.