ದ. ಆಫ್ರಿಕಾದಲ್ಲಿ ಏಕದಿನ ಸರಣಿ ಸೋತು ಮನೆಗೆ ಬಂದ ನಂತರ ಶಿಖರ್ ಧವನ್ ಗೆ ತಂದೆಯಿಂದ ಕಪಾಳಮೋಕ್ಷ? ವಿಡಿಯೋ ಸಖತ್ ವೈರಲ್! ನೋಡಿ…
ಕನ್ನಡ ಕಲಿ K L ರಾಹುಲ್ ನೇತೃತ್ವದಲ್ಲಿ ಭಾರತ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿತು. ಸರಣಿ ಮುಗಿಸಿ ಮನೆಗೆ ತಲುಪಿದ ಶಿಖರ್ ಧವನ್ ಗೆ ತಂದೆಯಿಂದ ಕಪಾಳಮೋಕ್ಷವಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರು ಹಿಡಿದಿದೆ. ಆದರೆ ಹರಿದಾಡುತ್ತಿರುವ ಈ ಸುದ್ದಿ ಸತ್ಯಕ್ಕೆ ತುಂಬಾ ದೂರವಿದೆ. ಏತನ್ಮಧ್ಯೆ ಶಿಖರ್ ಧವನ್ ಅವರಿಗೆ ತಂದೆಯಿಂದ ಕಪಾಳಮೋಕ್ಷವಾದದ್ದು 100 ಕ್ಕೆ ನೂರರಷ್ಟು ಸತ್ಯವಿದೆ, ಕಾರಣವೇನು ನೋಡಿ…
ಶಿಖರ್ ಅವರು ತಂದೆಯ ಜೊತೆಗೆ ಕೂಡಿ ಒಂದು ವಿಡಿಯೋ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಂದೆಯು ಶಿಖರ್ ಅವರಿಗೆ ನೀನು ನಿನ್ನ ರೂಮಿನಲ್ಲಿ ಹೋಗಿ ಬಂದಿರುವೆಯಾ? ಎಂದು ಕೇಳುತ್ತಾರೆ. ಅದಕ್ಕೆ ಶಿಖರ್ ಅವರು ಫಿಲ್ಮಿ ಸ್ಟೈಲ್ ನಲ್ಲಿ ತುಂಬಾ ಮಾರ್ಮಿಕವಾಗಿ, ನಿಮ್ಮ ಹತ್ತಿರ ಸಾಕ್ಷಾಧಾರಗಳೆನಾದರೂ ಇವೆಯಾ? ಮತ್ತು ನಿಮ್ಮ ಹತ್ತಿರ ವಾರೆಂಟ್ ಏನಾದರೂ ಇದೆಯಾ? ಎಂದು ತಂದೆಗೆ ಮರುಪ್ರಶ್ನೆ ಹಾಕುತ್ತಾರೆ. ಈ ಡೈಲಾಗ್ ನಂತರ ಶಿಖರ್ ಅವರ ತಂದೆ ತ್ವರಿತವಾಗಿ ಕಪಾಳಕ್ಕೆ ಒಂದು ಏಟು ಕೊಟ್ಟು ಮನೆಯಲ್ಲಿಯ ಟೈಲ್ಸ್ ಗಳನ್ನು ಒರೆಸಲು ಆದೇಶಿಸುತ್ತಾರೆ. ಆಗ ಶಿಖರ್ ಅವರು ಒಂದು ಮಾತನ್ನೂ ಹೇಳದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಸಂಪೂರ್ಣ ಸಂಭಾಷಣೆ ಪಂಜಾಬಿ ಭಾಷೆಯಲ್ಲಿ ಇದೆ.
ಈ ವಿಡಿಯೋ ಭಾರತೀಯ ಕ್ರಿಕೆಟ್ ತಾರೆಯರ ಜೊತೆಗೆ ನೇಟಿಜನ್ಸ್ ಗಳಿಗೂ ತುಂಬಾ ಇಷ್ಟವಾಗಿದೆ. ಈ ವೀಡಿಯೋವನ್ನು ಶಿಖರ್ ಧವನ್ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ಮುಖಾಂತರ ಶೇರ್ ಮಾಡಿದ್ದಾರೆ.
ನೋಡಿ ಈ ವಿಡಿಯೋ…