“ದ ಕಾಶ್ಮೀರ್ ಫೈಲ್” ಚಿತ್ರ ನೋಡಿದ ನಂತರ ಸಲ್ಮಾನ್ ಖಾನ್ ಅವರ ಪ್ರತಿಕ್ರಿಯೆ; ನೇರ ಅನುಪಮ್ ಖೇರ್ ಗೆ ಕಾಲ್ ಮಾಡಿ…
ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಅವರ ‘ದ ಕಾಶ್ಮೀರ್ ಫೈಲ್’ ಚಿತ್ರ ಪ್ರದರ್ಶನದ ನಂತರ ಸತತವಾಗಿ ಚರ್ಚೆಯಲ್ಲಿದೆ. ಈ ಚಿತ್ರವು ಇಲ್ಲಿಯವರೆಗೆ 200 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಇಲ್ಲಿಯವರೆಗೆ ಈ ಚಿತ್ರದ ಬಗ್ಗೆ ತುಂಬಾ ಎಲ್ಲ ಕಡೆಯಿಂದಲೂ ತುಂಬಾ ಹೊಗಳಿಕೆಯೇ ಕೇಳಿ ಬರುತ್ತಿದೆ. ಪ್ರಸ್ತುತ ಚಿತ್ರವು 1990 ರಲ್ಲಿ ಕಾಶ್ಮೀರದಲ್ಲಿಯ ಪಂಡಿತರ ಮೇಲೆ ನಡೆದ ಹಿಂಸಾಚಾರದಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಚಿತ್ರವನ್ನು ನೋಡಿದ ನಂತರ ಬಾಲಿವುಡ್ ನಟರಾದ ಅಮೀರ್ ಖಾನ್, ಅಕ್ಷಯ್ ಕುಮಾರ್ ಮತ್ತು ಯಾಮಿ ಗೌತಮ್, ಮನೋಜ್ ವಾಜಪೇಯಿ ಹೀಗೆ ಅನೇಕ ದಿಗ್ಗಜರು ತಮ್ಮ ಪ್ರತಿಕ್ರಿಯೆ ನೀಡುತ್ತ ಚಿತ್ರವನ್ನು ಶ್ಲಾಘಿಸಿದ್ದಾರೆ. ಸದ್ಯ ಬಾಲಿವುಡ್ ಭಾಯಿ ಸಲ್ಮಾನ್ ಖಾನ್ ಅವರು ಸಹ ಈ ಚಿತ್ರದ ಬಗ್ಗೆ ಈಗ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ದೊರೆತ ಮೂಲಗಳ ಮಾಹಿತಿಯ ಪ್ರಕಾರ, ಸಲ್ಮಾನ್ ಖಾನ್ ಅವರು ಈ ಚಿತ್ರವನ್ನು ನೋಡಿದ ನಂತರ ಸ್ವಲ್ಪವೂ ಸಮಯವನ್ನು ವ್ಯರ್ಥ ಮಾಡದೆ ಮೊದಲು ಅನುಪಮ್ ಖೇರ್ ಅವರಿಗೆ ಕಾಲ್ ಮಾಡಿದ್ದಾರೆ. ಅನುಪಮ್ ಖೇರ್ ಅವರು ಈ ಚಿತ್ರದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ಅವರು ಫೋನ್ ನಲ್ಲಿ ಅನುಪಮ್ ಖೇರ್ ಅವರ ಜೊತೆಗೆ ಮಾತನಾಡಿ ಚಿತ್ರವನ್ನು ಬಾಯಿತುಂಬಾ ಹೊಗಳಿದ್ದಾರೆ. ಈ ಚಿತ್ರಕ್ಕೆ ದೊರೆತಿರುವ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಲು ಸಲ್ಮಾನ್ ಖಾನ್ ಅವರು ಮರೆತಿಲ್ಲ.
ಹಿಂದಿ ನ್ಯೂಸ್ ಪೇಪರ್ ‘ನವಭಾರತ್ ಟೈಮ್ಸ್’ ಜೊತೆಗೆ ಮಾತನಾಡುತ್ತಾ ಅನುಪಮ್ ಖೇರ್ ಅವರು ಈ ಮೇಲಿನ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಸಂದರ್ಶನದಲ್ಲಿ ಅನುಪಮ್ ಖೇರ್ ಅವರಿಗೆ ಚಿತ್ರವನ್ನು ನೋಡಿದ ಹಿಂದಿ ಸಿನೆಮಾರಂಗದ ಯಾರ್ಯಾರು ದಿಗ್ಗಜರು ತಮ್ಮ ವಿಚಾರಗಳನ್ನು ನಿಮ್ಮ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಅನುಪಮ್ ಖೇರ್ ಅವರು ಉತ್ತರಿಸುತ್ತಿದ್ದರು.