ಧೈರ್ಯ ಮತ್ತು ಸಂಯಮದ ಬಲದಿಂದ ಕ್ರೂರ ಕಾಡು ನಾಯಿಗಳಿಂದ ತಮ್ಮ ಪ್ರಾಣ ರಕ್ಷಿಸಿಕೊಂಡ ಪುಟ್ಟ ಜಿಂಕೆ ಮರಿಗಳ ಅದ್ಭುತ ವಿಡಿಯೋ ವೈರಲ್! ಪೆಚ್ಚು ಮೋರೆ ಹಾಕಿ ಮರಳಿದ ನಾಯಿಗಳು…
ಕಾಡಿನಲ್ಲಿ ನಡೆಯುವ ಪ್ರಾಣಿಗಳ ಸಾವು ಬದುಕಿನ ಹೋರಾಟ ನಿಜಕ್ಕೂ ಅವರ್ಣನೀಯ ಮತ್ತು ರೋಮಾಂಚನಭರಿತವಾಗಿರುತ್ತದೆ. ಇಲ್ಲಿ ಪ್ರತಿಯೊಂದು ಪ್ರಾಣಿಯು ಸಾವು ಬದುಕಿನ ಹೋರಾಟದಲ್ಲಿ ತೊಡಗಿರುತ್ತದೆ. ಕ್ಷಣ ಕ್ಷಣಕ್ಕೂ ಅಲರ್ಟ್ ಆಗಿ ಜೀವಿಸಬೇಕಾಗುತ್ತದೆ ಕಾಡಿನಲ್ಲಿ. ಇಲ್ಲಿ ಸ್ವಲ್ಪೇ ಸ್ವಲ್ಪ ಮೈ ಮರೆತರೂ ಬೇರೆ ಪ್ರಾಣಿಗೆ ಆಹಾರವಾಗುವದರಲ್ಲಿ ಸಂಶಯವೇ ಇಲ್ಲ. ಈ ಹೋರಾಟದಲ್ಲಿ ಪ್ರಾಣಿಗಳಲ್ಲಿರುವ ಬುದ್ಧಿವಂತಿಕೆ, ಧೈರ್ಯ, ಚಪಲತೆ, ಸಂಯಮ, ಟೈಮಿಂಗ್, ಚಾಕಚಕ್ಯತೆ ಹೀಗೆ ವಿವಿಧ ಮುಖಗಳ ದರ್ಶನ ನಮಗಾಗುತ್ತದೆ.
ಸದ್ಯ ಜಿಂಕೆಯ ಪುಟ್ಟ ಪುಟ್ಟ ಮರಿಗಳ ಧೈರ್ಯ, ಸಾಹಸ ಹಾಗೂ ಸಂಯಮದ ಅದ್ಭುತ ಉದಾಹರಣೆಯನ್ನು ನೀಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸಂಚಲನ ಮೂಡಿಸಿದೆ. ವಿಡಿಯೋದಲ್ಲಿ ಜಿಂಕೆಯ ಮೂರು ಪುಟ್ಟ ಮರಿಗಳು ದೊಡ್ಡದಾದ ಹೆಬ್ಬಂಡೆಯ ಅಂಚಿಗೆ ನಿಂತಿವೆ. ಇದನ್ನು ಗಮನಿಸಿದ ಕಾಡು ನಾಯಿಗಳು ತಮಗೆ ಸಹಜವಾಗಿ ಆಹಾರ ಸಿಗಬಹುದು ಎಂದು ಜಪಿಸಿ ಮನಸ್ಸಿನಲ್ಲಿಯೇ ಮಂಡಿಗೆ ಹಾಕಿ ಮುಂದಿನ ಕೆಲಸಿಗೆ ಪ್ರಯತ್ನಿಸಿವೆ. ಆದರೆ ಆ ಕಾಡು ನಾಯಿಗಳ ದುರದೃಷ್ಟಕ್ಕೆ ಮತ್ತು ಜಿಂಕೆ ಮರಿಗಳ ಅದೃಷ್ಟಕ್ಕೆ ಆ ನಾಯಿಗಳ ಆಸೆ ಮಾತ್ರ ಫಲಿಸಿಲ್ಲ ಎಂಬುದು ವಿಡಿಯೋದಿಂದ ಗೊತ್ತಾಗುತ್ತದೆ.
ನೋಡಿ ಈ ವಿಡಿಯೋ…
ಬಂಡೆಯ ಕಟ್ಟ ಕಡೆಯ ಅಂಚಿಗೆ ನಿಂತ ಜಿಂಕೆ ಮರಿಗಳು ಕಾಡು ನಾಯಿಗಳಿಗೆ ಸ್ವಲ್ಪವೂ ಹೆದರದೆ, ಅಲುಗಾಡದೆ ತಟಸ್ಥವಾಗಿ ನಿಂತಿವೆ. ಆ ಸಂದರ್ಭದಲ್ಲಿ ಕಾಡುನಾಯಿಗಳು ಮಾತ್ರ ಅವುಗಳನ್ನು ಹಿಡಿಯಲು ತುಂಬಾ ಪ್ರಯತ್ನಪಟ್ಟಿವೆ. ಕೆಲವು ಕಾಡುನಾಯಿಗಳು ಒಂದೇ ಸಮನೆ ಬಂಡೆಯ ಕೆಳಗಡೆ ಜಿಂಕೆ ಮರಿಗಳನ್ನು ತಿಂದು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಹೊಂಚು ಹಾಕಿ ಇತ್ತಿಂದತ್ತ ಅತ್ತಿಂದಿತ್ತ ಸುತ್ತಾಡುತ್ತಿದ್ದವು. ಬಂಡೆಯ ಮೇಲ್ಗಡೆಯಂತೂ ಕಾಡು ನಾಯಿಗಳು ಜಿಂಕೆ ಮರಿಯನ್ನು ಹಿಡಿಯಲು ಮಾಡಿದ ಪ್ರಯತ್ನ ಕೂದಲೆಳೆಯ ಅಂತರದಲ್ಲಿ ನಿಷ್ಫಲವಾಗಿದೆ. ಅವು ಮೇಲಿನಿಂದ ಎಷ್ಟೇ ಪ್ರಯತ್ನಿಸಿದರೂ ಜಿಂಕೆ ಮರಿಗಳನ್ನು ಹಿಡಿಯಲು ಸಾಧ್ಯವೇ ಆಗಿಲ್ಲ. ಕೊನೆಗೆ ನಾಯಿಗಳು ಸೋತು ಸುಣ್ಣವಾಗಿ ಬಳಲಿ ಅಲ್ಲಿಂದ ಹೋಗಿಬಿಟ್ಟಿವೆ.
ಯೂಟ್ಯೂಬ್ ನಲ್ಲಿ Latest Sighting ಹೆಸರಿನ ಚಾನೆಲ್ ನಿಂದ ಶೇರ್ ಆದ ಈ ವಿಡಿಯೋವನ್ನು ಇಲ್ಲಿಯವರೆಗೆ 4.3 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಜಿಂಕೆ ಮರಿಗಳ ಧೈರ್ಯವನ್ನು ನೇಟಿಜನ್ಸ್ ಗಳು ಮಾತ್ರ ಕೊಂಡಾಡಿದ್ದಾರೆ.