Articles

ನೀರಿನಲ್ಲಿ ಚಲಿಸಲು ವ್ಯಕ್ತಿ ತಯಾರಿಸಿದ ಮೂರು ಚಕ್ರದ ಏರ್ ವ್ಹೀಲ್ ಸೈಕಲ್! ಆತನ ಪ್ರವಾಸ ನೋಡುವ ಕೆಲಸ ನಿಮ್ಮದು…ನೋಡಿ ಈ ವಿಡಿಯೋದಲ್ಲಿ.

ಜಗತ್ತಿನಲ್ಲಿ ಅನೇಕ ರೀತಿಯ ಜನರು ಇದ್ದಾರೆ. ಅವರ ತಲೆಯಲ್ಲಿ ಅನೇಕ ಬಣ್ಣಬಣ್ಣದ ಐಡಿಯಾಗಳು ಓಡಾಡುತ್ತಿರುತ್ತವೆ. ಕೆಲವರು ತಮ್ಮ ಐಡಿಯಾಗಳಿಗೆ ಪೂರ್ಣ ರೂಪ ಕೊಡಲು ಯಶಸ್ವಿಯಾಗುತ್ತಾರೆ ಇನ್ನೂ ಕೆಲವರು ತಮ್ಮ ಐಡಿಯಾಗಳಿಗೆ ಪೂರ್ಣರೂಪ ಕೊಡಲು ಸಾಧ್ಯವಾಗದೆ ಹಾಗೆಯೇ ಮಧ್ಯದಲ್ಲಿ ಬಿಟ್ಟು ಬಿಡುತ್ತಾರೆ.

ಇದೇ ರೀತಿಯ ಒಂದು ಐಡಿಯಾ ಹುಡುಕಿದ ವ್ಯಕ್ತಿಯ ವಿಡಿಯೋವೊಂದು ಇಂದು ನಿಮ್ಮ ಮುಂದೆ ತಂದಿದ್ದೇವೆ. ಈ ವಿಡಿಯೋದಲ್ಲಿ ಕಾಣುವಹಾಗೆ ವ್ಯಕ್ತಿಯು ನೀರಿನಲ್ಲಿ ಚಲಿಸುವ ಸೈಕಲ್ ಒಂದನ್ನು ತಯಾರಿಸಿದ್ದಾನೆ. ಈ ಸೈಕಲ್ ಮೂರು ಚಕ್ರ ಹೊಂದಿದೆ. ಚಕ್ರಕ್ಕೆ ಆತ ಮೂರು ದೊಡ್ಡ ದೊಡ್ಡ ಹವೆ ತುಂಬಿದ ಟ್ಯೂಬ್ ಗಳನ್ನು ಕೂಡಿಸಿದ್ದಾನೆ.

ನೀರಿನಲ್ಲಿಯ ಪ್ರವಾಸ ಆರಂಭ..

ವ್ಯಕ್ತಿಯು ನೀರಿನಲ್ಲಿ ಪ್ರವಾಸ ಶುರು ಮಾಡಿತ್ತಾನೆ. ಮೊದಲು ತನ್ನ ಸೈಕಲನ್ನು ನೀರಿನಲ್ಲಿ ಇಳಿಸುತ್ತಾನೆ. ಆತನಿಗೆ ಈ ಕೆಲಸದಲ್ಲಿ ಸಹಾಯ ಮಾಡಲು ಬೇರೊಬ್ಬ ಮಿತ್ರನು ಹಿಂದೆ ಇದ್ದಾನೆ. ಸೈಕಲ್ ನೀರಿಗೆ ಇಳಿಸಿದ ಮೇಲೆ ವ್ಯಕ್ತಿಯು ಅದರ ಮೇಲೆ ಕುಳಿತುಕೊಂಡು ಪ್ಯಾಡಲ್ ಹೊಡೆದು ಇನ್ನೇನು ಮುಂದೆ ಹೋಗಬೇಕು ಎನ್ನುವಷ್ಟರಲ್ಲಿಯೇ ಆತನ ಈ ಚಿಕ್ಕ ಮತ್ತು ಅದ್ಭುತವಾದ ಪ್ರವಾಸ ಮುಗಿದುಹೋಗುತ್ತದೆ ನೋಡಿ ತಮಾಷೆಯ ವಿಡಿಯೋ…

ಈ ವಿಡಿಯೋವನ್ನು reelsemperor ಹೆಸರಿನ ಅಕೌಂಟನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿ ಆನಂದಿಸಿದ್ದಾರೆ ಮತ್ತು ಅಷ್ಟೇ ಲೈಕ್ಸ್ ಗಳು ಸಹ ನೀಡಿದ್ದಾರೆ.

Leave a Comment

Your email address will not be published. Required fields are marked *