ನಟ ವಿಜಯ್ ಸೇತುಪತಿಗೆ ಕಿಕ್ (ಒದೆ) ಕೊಟ್ಟವನಿಗೆ ಬಹುಮಾನವಾಗಿ ಕೊಟ್ಟರು ನಗದು ಹಣ; ಯಾಕೆ ಏನಿದರ ಹಿಂದಿನ ಕಾರಣ….
ಈ ವಾರದ ಪ್ರಾರಂಭಕ್ಕೆ ತಮಿಳ್ ಸೂಪರ್ ಸ್ಟಾರ್ ಮತ್ತು ಜನಪ್ರಿಯ ನಟ ವಿಜಯ್ ಸೇತುಪತಿ ಅವರ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಏರ್ಪೋರ್ಟ್ನಲ್ಲಿ ವ್ಯಕ್ತಿಯೊಬ್ಬನು ನಟ ವಿಜಯ್ ಸೇತುಪತಿ ಅವರ ಮೇಲೆ ಹಲ್ಲೆ ಮಾಡಿದ್ದನು. ಇದರಿಂದ ಸ್ವಲ್ಪ ಸಮಯ ಏರ್ಪೋರ್ಟ್ನಲ್ಲಿ ವಾತಾವರಣ ಗದ್ದಲದಿಂದ ಕೂಡಿತ್ತು. ಸಂಪೂರ್ಣ ಘಟನೆಯ ವಿಡಿಯೋ 1 ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ವಿಜಯ್ ಸೇತುಪತಿ ಅವರಿಗೆ ಯಾವುದೇ ರೀತಿಯ ದೈಹಿಕ ಹಾನಿ ಉಂಟಾಗಿಲ್ಲ. ಈ ಘಟನೆಗೆ ಹೆಚ್ಚಿಗೆ ಮಹತ್ವವನ್ನು ನೀಡದೆ ಇದೊಂದು ಜುಜುಬಿ ಎಂದು ದುರ್ಲಕ್ಷಿಸಿದ್ದಾರೆ. ಆದರೆ ಹಿಂದೂ ಮಕ್ಕಲ್ ಕಾಚಿ ಹೆಸರಿನ ಒಂದು ಗುಂಪು ವಿಜಯ್ ಸೇತುಪತಿ ಅವರಿಗೆ ಒದೆ ನೀಡಿದ ವ್ಯಕ್ತಿಗೆ 1001 ಬಹುಮಾನವನ್ನು ಜಾಹೀರು ಮಾಡಿದ್ದಾರೆ.
ಹಿಂದೂ ಮಕ್ಕಲ್ ಕಾಚಿಯ ಅಧಿಕೃತವಾದ ಟ್ವಿಟರ್ ಹ್ಯಾಂಡಲ್ ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ವಿಜಯ್ ಸೇತುಪತಿ ಇವರು ಸ್ವಾತಂತ್ರ್ಯ ಸೈನಿಕರಾದ ದೇವಿಥಿರು ಪಾಸುಂಪೋನ್ ಮುಥುರಾಮಲಿಂಗ ತೇವರ್ ಅಯ್ಯಾ ಮತ್ತು ದೇಶದ ಅವಮಾನ ಮಾಡಿದ ಬಗ್ಗೆ ಸೂಚಿಸಿದ್ದಾರೆ. ಅರ್ಜುನ್ ಸಂಪತ್ ಅವರು ತೇವರ್ ಅಯ್ಯಾ ಅವರ ಅವಮಾನ ಮಾಡಿದ್ದಕ್ಕಾಗಿ ನಟ ವಿಜಯ್ ಸೇತುಪತಿ ಅವರಿಗೆ ಒದೆ ನೀಡಿದ್ದಕ್ಕಾಗಿ ನಗದು ಬಹುಮಾನ ಘೋಷಿಸಿದ್ದಾರೆ. ಎಲ್ಲಿಯವರೆಗೆ ವಿಜಯ ಸೇತುಪತಿ ಅವರು ಕ್ಷಮೆ ಕೇಳುವುದಿಲ್ಲ ಅಲ್ಲಿವರೆಗೆ ವಿಜಯ್ ಸೇತುಪತಿಗೆ ಯಾರೇ ಒದೆ ನೀಡಲಿ ಅವರಿಗೆ 1001 ರೂಪಾಯಿಗಳನ್ನು ನೀಡಲಾಗುವುದು. ಒಂದು ಒದೆಗೆ 1001 ಹಣ ನೀಡಲಾಗುವುದು ಎಂದು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಅರ್ಜುನ್ ಸಂಪತ್ ಅವರು ಘೋಷಿಸಿದ್ದಾರೆ.
Arjun Sampath announces cash award, for kicking actor Vijay Sethupathi for insulting Thevar Ayya.
— Indu Makkal Katchi (Offl) 🇮🇳 (@Indumakalktchi) November 7, 2021
1 kick = Rs.1001/- for any one who kicks him, until he apologises. pic.twitter.com/Fogf7D9V7S
ಇಂಡಿಯಾ ಟುಡೇ ಜೊತೆಗೆ ಮಾತನಾಡುವಾಗ ಅರ್ಜುನ್ ಸಂಪತ್ ಮೇಲಿನ ಸ್ಟೇಟ್ಮೆಂಟ್ ನೀಡಿದ್ದಾರೆ. ವಿಜಯ್ ಸೇತುಪತಿ ಅವರು ವ್ಯಂಗ್ಯ ಮಾಡಿದ್ದಕ್ಕಾಗಿ ಈ ವಾದ ನಡೆದಿದೆ ಎಂದು ಮಹಾ ಗಾಂಧಿ ಹೇಳುತ್ತಿದ್ದಾರೆ. ವಿಜಯ್ ಸೇತುಪತಿಗೆ ಒದೆ ನೀಡಲು ಪ್ರಯತ್ನಿಸಿದ ಮಹಾ ಗಾಂಧಿ ಜೊತೆಗೆ ನಾನು ಮಾತನಾಡಿದ್ದೇನೆ ಎಂದೂ ಹೇಳಿದ್ದಾರೆ.