ನಿಮ್ಮ ಕಣ್ಣುಗಳಿಗೆ ಇಲ್ಲಿದೆ ಚಾಲೆಂಜ್! ಈ ಚಿತ್ರದಲ್ಲಿ ಕಂಡುಬರುವ ಕುದುರೆಗಳೆಷ್ಟು? ಹೇಳಬಲ್ಲಿರಾ ನಿರ್ದಿಷ್ಟ ಉತ್ತರ?
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲ ಮನುಷ್ಯನಿಗೆ ಚಾಲೆಂಜ್ ಮಾಡುವ ವಿವಿಧ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಚಿತ್ರಗಳು ಹಾಕುವ ಇಂಥ ಸವಾಲನ್ನು ನೆಟ್ಟಿಗರು ಬಿಡಿಸಲು ಶತಪ್ರಯತ್ನ ಪಟ್ಟೆ ಪಡುತ್ತಾರೆ. ಇದರಿಂದ ನೆಟ್ಟಿಗರಿಗೆ ಟೈಂಪಾಸ್ ಆಗುವುದರ ಜೊತೆಗೆ ಮಾನಸಿಕವಾಗಿ ಆನಂದ, ಸಂತೋಷ, ಸಮಾಧಾನವು ಸಿಗುತ್ತದೆ.
ಅನೇಕಸಲ ಮೇಲ್ನೋಟಕ್ಕೆ ಚಿತ್ರಗಳು ತುಂಬಾ ಸಹಜ, ಸರಳವಾಗಿ ಕಂಡು ಬಂದರೂ ಉತ್ತರ ಶೋಧಿಸುವ ಸಲುವಾಗಿ ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಇಷ್ಟಾದರೂ ಕೆಲವರಿಂದ ಮಾತ್ರ ಉತ್ತರ ಹುಡುಕುವುದು ಸಾಧ್ಯವಾಗುತ್ತದೆ ಮತ್ತೆ ಇನ್ನು ಕೆಲವರಿಂದ ಸಾಧ್ಯವಾಗದೆ ಹಾಗೆಯೇ ಬಿಟ್ಟು ಬಿಡುತ್ತಾರೆ.
ಇಂದಿನ ಈ ಚಿತ್ರವು ನೋಡುಗರ ಹಾಗೂ ಉತ್ತರವನ್ನು ಶೋಧಿಸುವವರ ಬುದ್ಧಿಶಕ್ತಿಗೆ ಅಥವಾ ಸೂಕ್ಷ್ಮ ದೃಷ್ಟಿಉಳ್ಳ ಚಾಣಕ್ಷರಿಗೆ ಚಾಲೆಂಜ್ ಆಗಿದೆ ಎಂದು ಹೇಳಬಹುದು.
ಪ್ರಸ್ತುತ ಚಿತ್ರದಲ್ಲಿ ಕೆಲವೊಂದು ಕುದುರೆಗಳು ಕಾಣಿಸುತ್ತಿವೆ. ಆ ಕುದುರೆಗಳ ಮೈಬಣ್ಣ ಹಾಗೂ ಕುದುರೆಗಳು ನಿಂತ ಸ್ಥಳದ ಭೂಭಾಗ ಅಥವಾ ಹಿಂಬದಿಯ ಹಿಮಚ್ಚಾದಿತ ಪ್ರದೇಶ ಎರಡೂ ಒಂದೇ ರೀತಿಯದ್ದಾಗಿವೆ. ಹೀಗಾಗಿ ನೋಡುಗರಿಗೆ ಪ್ರಸ್ತುತ ಚಿತ್ರವೂ ತುಂಬಾ ಕನ್ಫ್ಯೂಸ್ ಮಾಡುತ್ತದೆ. ನಿಶ್ಚಿತವಾಗಿಯೂ ಅಲ್ಲಿ ಕುದುರೆಗಳು ಎಷ್ಟಿವೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ. ಹಾಗಾದರೆ ಈ ಚಿತ್ರದಲ್ಲಿ ಒಟ್ಟು ಕುದುರೆಗಳ ಸಂಖ್ಯೆ ಎಷ್ಟಿದೆ ಎಂಬುದು ಹೇಳುತ್ತೀರಾ?

ಗೆಳೆಯರೇ ನೀವು ಒಂದು ವೇಳೆ ಉತ್ತರ ಹುಡುಕುವಲ್ಲಿ ಯಶಸ್ವಿಯಾಗಿದ್ದರೆ ಮತ್ತು ನಿಮ್ಮ ಕಣ್ಣುಗಳು ಸೂಕ್ಷ್ಮತೆಯನ್ನು ಗ್ರಹಿಸುವಲ್ಲಿ ಸಫಲವಾಗಿದ್ದರೆ ನಿಮಗೆ ತುಂಬು ಹೃದಯದ ಅಭಿನಂದನೆಗಳು. ಒಂದು ವೇಳೆ ಈ ಪ್ರಶ್ನೆಯ ಉತ್ತರ ಹುಡುಕುವಲ್ಲಿ ಯಶಸ್ಸು ಲಭಿಸದಿದ್ದರೆ ನಿಮಗಾಗಿ ಉತ್ತರವನ್ನು ನಾವೇ ಹೇಳುತ್ತೇವೆ. ಪ್ರಸ್ತುತ ಚಿತ್ರದಲ್ಲಿ ಒಟ್ಟು ಕುದುರೆಗಳ ಸಂಖ್ಯೆ 5 ಇದೆ. ಕೆಳಗೆ ಕೊಟ್ಟ ಈ ಚಿತ್ರವನ್ನು ನೋಡಿ.
