ನೀರಿನ ತೊಟ್ಟಿಯಲ್ಲಿ ಬಿದ್ದ ಮರಿಯನ್ನು ಎತ್ತಲು ತನ್ನ ಬಾಲವನ್ನೇ ಕೊಟ್ಟ ಕೋತಿ: ತಾಯಿಯ ಮಮತೆ ನೋಡಿ ಭಾವುಕರಾದ ನೆಟ್ಟಿಗರು!

ಜಗತ್ತಿನಲ್ಲೇ ಏಳು ಅದ್ಭುತ ಗಳು ಇರಬಹುದು, ಆದರೆ ಈ ಏಳು ಅದ್ಭುತಗಳನ್ನು ಮೀರಿದ್ದು, ಆ ಅದ್ಭುತಗಳಿಗಿಂತಲೂ ಅತ್ಯಮೂಲ್ಯ ಹಾಗೂ ಅತ್ಯದ್ಭುತವಾದುದು ಒಂದಿದೆ ಎಂದರೆ ನಂಬುವಿರಾ? ಇಲ್ಲ ಎನ್ನುವುದಾದರೆ ಈಗ ನಾವು ಅದಕ್ಕೆ ಉತ್ತರ ಹೇಳಿದರೆ ಹೌದು ಎಂದು ಒಂದು ಚಕಾರ ಕೂಡಾ ಎತ್ತದೇ ಒಪ್ಪಿಕೊಳ್ಳುವಿರಿ. ಹಾಗಾದರೆ ಅದೇನದು ಅಂತಹ ಅದ್ಭುತವಾದುದು ಎನ್ನುವಿರಾ? ಹಾಗಾದರೆ ಕೇಳಿ ಜಗತ್ತಿನ ಏಳು ಅದ್ಭುತಗಳನ್ನು ಮೀರಿದ ಮಹಾದ್ಭುತ ಏನೆಂದರೆ ಅದು ಜನ್ಮ ನೀಡಿದ ತಾಯಿ. ಈಗ ಹೇಳಿ ನಾವು ಹೇಳಿದ್ದು ನಿಜವೇ ಅಲ್ಲವೇ? ತಾಯಿಯಂತಹ ಮಹಾ ಅದ್ಭುತ ಹಾಗೂ ಅತ್ಯಮೂಲ್ಯವಾದ ಸಿರಿ ಈ ಜಗತ್ತಿನಲ್ಲಿ ಇನ್ನೊಂದು ಇರಲು ಸಾಧ್ಯವೇ ಇಲ್ಲ ಎಂದು ನಾವು ಒಪ್ಪಲೇಬೇಕು.

ತಾಯಿ ಪ್ರೇಮಕ್ಕೆ ನಾವು ಬೆಲೆ ಕಟ್ಟುವುದು ಅಸಾಧ್ಯದ ಮಾತು ಹಾಗೂ ಅಂತಹ ಮೌಲ್ಯವನ್ನು ನಿರ್ಧರಿಸುವುದು ಕೂಡಾ ಸಾಧ್ಯ‌. ತಾಯಿಯ ಋಣವನ್ನು ತೀರಿಸಲು ಇರುವ ಒಂದೇ ಮಾರ್ಗವೆಂದರೆ ಅದು ಜೀವನ ಪೂರ್ತಿ ಆಕೆಯನ್ನು ಪ್ರೀತಿಯಿಂದ, ವಿಶ್ವಾಸದಿಂದ ಹಾಗೂ ಗೌರವದಿಂದ ಕಾಣುವುದು. ತಾಯಿಯ ನಿಸ್ವಾರ್ಥ ಗುಣ, ಸಹನಶೀಲತೆ ಎಲ್ಲವೂ ಒಂದು ಕಡೆಯಾದರೆ ತನ್ನ ಸಂತಾನಕ್ಕೆ ಏನಾದರೂ ಸಮಸ್ಯೆ ಆಗುತ್ತಿದೆ ಎಂದು ತಿಳಿದರೆ ಆಕೆ ಅದನ್ನು ಪರಿಹರಿಸಲು ಎಷ್ಟೇ ದೊಡ್ಡ ತ್ಯಾಗವನ್ನು ಕೂಡಾ ಮಾಡಲು ಸಿದ್ಧಳಾಗುವಳು ಎಂದು ಹೇಳಬಹುದು.

ತಾಯಿಯ ಮಮತೆ ಹಾಗೂ ಆಪ್ಯಾಯತೆಯ ಬಗ್ಗೆ ಹೇಳುವುದಾದರೆ ಇದು ಮನುಷ್ಯರಲ್ಲಿ ಹೇಗೆ ಇರುತ್ತದೋ ಪ್ರಾಣಿಗಳಲ್ಲಿ ಕೂಡಾ ಹಾಗೇ ಇರುತ್ತದೆ. ತಾಯಿಯ ಆಪ್ಯಾಯತೆಗೆ ಇರುವುದು ಒಂದೇ ರೂಪ. ಪ್ರಾಣಿಗಳು ಹಾಗೂ ಪಕ್ಷಿಗಳನ್ನು ನೋಡಿದಾಗ ತಾಯಿಯು ತನ್ನ ಮರಿಗಳ ರಕ್ಷಣೆಗೆ ನಿಲ್ಲುವ ಪರಿ ನಮ್ಮನ್ನು ಬೆರಗುಗೊಳಿಸುತ್ತದೆ. ಕಾಡಿನಲ್ಲಿ ಹೋ ರಾ ಟದ ಬದುಕು ನಡೆಸುವ ಈ ಜೀವಿಗಳು ತಮ್ಮ ಸಂತಾನದ ರಕ್ಷಣೆಗೆ ಅದೆಷ್ಟೋ ಬಾರಿ ಸಮಸ್ಯೆಗಳನ್ನು ಎದುರಿಸಿ ಅವುಗಳನ್ನು ಕಾಪಾಡುತ್ತವೆ. ಹೀಗೆ ಅ ಪಾ ಯದಲ್ಲಿ ಸಿಲುಕಿದ ತನ್ನ ಮರಿಯನ್ನು ಕಾಪಾಡಲು ಮಂಗವೊಂದು ಮಾಡಿದ ಪ್ರಯತ್ನದ ವೀಡಿಯೋ ವೈರಲ್ ಆಗಿದ್ದು, ಮಂಗ ತನ್ನ ಮರಿಯನ್ನು ಕಾಪಾಡುವ ಯತ್ನ ನಿಜಕ್ಕೂ ನೋಡುಗರನ್ನು ಭಾವುಕರನ್ನಾಗಿಸುತ್ತದೆ‌.

ವೈರಲ್ ಆಗಿರುವ ವೀಡಿಯೋದಲ್ಲಿ ನೋಡಿದಾಗ ಒಂದು ಕೋತಿ ಮರಿಯು ಸ್ವಲ್ಪ ಆಳವಾಗಿರುವ ನೀರಿನ ತೊಟ್ಟಿಯೊಳಗೆ ಬಿದ್ದಿದೆ. ಅದಕ್ಕೆ ಮೇಲೇರಿ ಬರಲು ಸಾಧ್ಯವಾಗಿಲ್ಲ. ತನ್ನ ಮರಿಯು ನೀರಿನ ತೊಟ್ಟಿಯಲ್ಲಿ ಬಿದ್ದಿರುವುದನ್ನು ನೋಡಿ ಆ ತಾಯಿ ಮಂಗದ ಮನಸ್ಸು ಒದ್ದಾಡಿದೆ, ತನ್ನ ಮರಿಯನ್ನು ಹೇಗಾದರೂ ಮಾಡಿ ತೊಟ್ಟಿಯಿಂದ ಮೇಲೆತ್ತಬೇಕು ಎಂದು ಚಡಪಡಿಸಿದೆ‌‌.‌ ಅದು ಉಪಾಯವನ್ನು ಮಾಡಿ ಮರಿಯನ್ನು ಮೇಲೆ ಎತ್ತಲು ತನ್ನ ಬಾಲವನ್ನೇ ಬಳಸಿ, ತೊಟ್ಟಿಯೊಳಗೆ ಬಿದ್ದ ಮರಿಗೆ ತನ್ನ ಬಾಲವನ್ನು ನೀಡಿ ಮೇಲೆ ಬರುವಂತೆ ಸೂಚನೆ ನೀಡಿದೆ. ಮರಿಗೆ ತಾಯಿ ನೀಡಿದ ಸೂಚನೆ ಸಿಕ್ಕು ಬಾಲ ಹಿಡಿದು ಮೇಲೇರಿ ಬಂದು, ತಾಯಿಯ ಬೆನ್ನೇರಿದೆ‌.

ವಿಡಿಯೋ ನೋಡಿ

ಈ ವೀಡಿಯೋ ನೋಡಿದಾಗ ಆ ತಾಯಿಯ ಮಮತೆಯ ಸಾಕಾರ ರೂಪ ನಮ್ಮ ಕಣ್ಮುಂದೆ ಬರುತ್ತದೆ‌. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಈ ವೀಡಿಯೋವನ್ನು ಈಗಾಗಲೇ 42 ಸಾವಿರಲ್ಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ರೆ, ಐದು ಸಾವಿರ ದಾಟಿದ ಇಷ್ಟುಗಳು ಬಂದಿದೆ. ಅನೇಕರು ಆ ಕೋತಿಯ ಮಮತೆಯನ್ನು ಮೆಚ್ಚಿದರೆ, ಕೆಲವರು ಕೋತಿ ಅಷ್ಟು ಕಷ್ಟ ಪಡುವಾಗ ವೀಡಿಯೋ ಮಾಡಿದವನಿಗೆ ಮಾನವೀಯತೆ ಇಲ್ಲ ಎಂದಿದ್ದಾರೆ. ಇನ್ನೂ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ಪ್ರಾಣಿಗಳ ವೀಡಿಯೋಗಳೇ ತುಂಬಿ ಹೋಗಿವೆ ಎಂತ ಜನ ಅವುಗಳಿಗೆ ಸಹಾಯ ಮಾಡುವ ಬದಲು ವೀಡಿಯೋ ಮಾಡಿದ್ದಾರೆಂದು ತೆಗಳಿದ್ದಾರೆ.