Articles

ಸಮಸ್ಯೆಗೆ ಕೆಲವೊಮ್ಮೆ ಜೋರಾದ ಓದೆ ನೀಡುವದರಿಂದಲೇ ದೂರಾಗುತ್ತದೆ; ಹೇಗೆ ಅಂತೀರಾ? ಈ ವೈಲ್ಡ್ ಲೈಫ್ ವಿಡಿಯೋ ನೋಡಿ.

ವೈಲ್ಡ್ ಲೈಫ್ ವಿಡಿಯೋಗಳು ನಿಜಕ್ಕೂ ತುಂಬಾ ರೋಚಕತೆಯಿಂದ ಕೂಡಿರುತ್ತವೆ. ಇಲ್ಲಿ ಸದಾ ನಡೆದ ಏನಾದರೊಂದು ಘಟನೆ ವಿಶೇಷತೆಯಿಂದ ಕೂಡಿರುತ್ತವೆ. ಅದಕ್ಕಾಗಿಯೇ ವೈಲ್ಡ್ ಫೋಟೋಗ್ರಾಫರ್ ಗಳು ಆ ಸುವರ್ಣ ಕ್ಷಣವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು 24 ಗಂಟೆ ತುಂಬಾ ತವಕದಿಂದ ಕುಳಿತಿರುತ್ತಾರೆ. ಈಗ ಜಿರಾಫೆ ಮತ್ತು ಸಿಂಹಗಳ ಅದ್ಭುತವಾದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಮನುಷ್ಯನಿಗೆ ಒಂದು ಒಳ್ಳೆಯ ಪಾಠವನ್ನು ಕಲಿಸಿ ಹೋಗುತ್ತದೆ ಎಂದರೆ ತಪ್ಪಲ್ಲ. ಅದೇನೆಂದರೆ, ಸಮಸ್ಯೆ ಯಾವತ್ತೂ ಕೊನೆಯವರೆಗೆ ಇರುವದಿಲ್ಲ. ಕೆಲವೊಮ್ಮೆ ಅದರ ಜೊತೆಗೆ ಹೊಂದಾಣಿಕೆ ಮಾಡುತ್ತಾ ಸಮಯ ಹಾಗೂ ಮನೋಧೈರ್ಯ ಹಾಳು ಮಾಡಿಕೊಳ್ಳುವ ಬದಲು ಅದಕ್ಕೆ ಬಲವಾಗಿ ಓದೆ ನೀಡುವುದರಿಂದಲೂ ದೂರಾಗಿ ಬಿಡುತ್ತದೆ ಎಂಬ ನೀತಿಪಾಠವನ್ನು ಈ ಜಿರಾಫೆ ತನ್ನ ಕೃತಿಯಿಂದ ಹೇಳಿದ ಹಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ನಾಲ್ಕೈದು ಹೆಣ್ಣು ಸಿಂಹಗಳು ಒಂಟಿಯಾದ ಜಿರಾಫೆಯನ್ನು ನೋಡಿ ತಮ್ಮ ಹಸಿವನ್ನು ಹಿಂಗಿಸಿಕೊಳ್ಳಲು ಬೇಟೆಯಾಡಲು ಬೆನ್ನಟ್ಟಿವೆ. ಈ ಸಂದರ್ಭದಲ್ಲಿ ಜಿರಾಫೆ ತನ್ನ ಜೀವ ಉಳಿಸಿಕೊಳ್ಳಲು ಭಯದಿಂದ ಓಡಲು ಶುರು ಮಾಡುತ್ತದೆ. ಹಸಿದ ಸಿಂಹಗಳು ಒಂಟಿ ಜಿರಾಫೆಯನ್ನು ಎಂದಾದರೂ ಬಿಟ್ಟಾವೆಯೇ? ಅವು ಸಹ ಜಿರಾಫೆಗೆ ಬೆನ್ನಟ್ಟಲು ಶುರು ಮಾಡುತ್ತವೆ. ಕಾಡಿನಲ್ಲಿ ಈ ದೃಶ್ಯ ಬಹುಶಃ ಸಾಯಂಕಾಲದ ಸಮಯದಲ್ಲಿ ನಡೆದಿರಬೇಕು ಎಂಬಂತೆ ಕಂಡು ಬರುತ್ತದೆ. ಮೊದಲು ಒಂದು ಎರಡು ಸಿಂಹಗಳಿದ್ದು ನಂತರ ಮೂರು, ನಾಲ್ಕು ಹಿಂಗೆ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಎಲ್ಲ ಸಿಂಹಗಳು ಬೇರೆ ಬೇರೆ ರೀತಿಯಲ್ಲಿ ಜಿರಾಫೆಯ ಮೇಲೆ ಅಟ್ಯಾಕ್ ಮಾಡುತ್ತದೆ. ಈ ಮಧ್ಯೆ ಜಿರಾಫೆ ಒಂದೇ ಸವನೆ ತನ್ನ ಬಳಗದ ಹತ್ತಿರ ಓಡಿ ಹೋಗಿ ಸೇರಿಕೊಳ್ಳುವ ಪ್ರಯತ್ನದಲ್ಲಿತ್ತದೆ.

ಇಷ್ಟಾದರೂ ಒಂದು ದೂರ್ತ ಸಿಂಹ ಎದುರಿನಿಂದ ಸಂಪೂರ್ಣ ತಯಾರಿಯಲ್ಲಿ ನೆಗೆದು ಜಿರಾಫೆಯ ಕುತ್ತಿಗೆಗೆ ಅಟ್ಯಾಕ್ ಮಾಡುತ್ತದೆ. ಜಿರಾಫೆ ಮಾತ್ರ ತನ್ನ ಆತ್ಮವಿಶ್ವಾಸ ಸ್ವಲ್ಪವೂ ಕಡಿಮೆ ಮಾಡಿಕೊಳ್ಳದೆ ಒಂದೇ ಸವನೆ ಓಡುತ್ತಿರುವಾಗ ಮಧ್ಯೆದಲ್ಲಿ ಬಂದ ಸಿಂಹವನ್ನು ಚೆನ್ನಾಗಿ ತನ್ನ ಕಾಲಲ್ಲಿ ಕಚಕಚನೆ ತುಳಿದು ಓದೆ ನೀಡಿ ಮುಂದೆ ಸಾಗುವಲ್ಲಿ ಯಶಸ್ವಿಯಾಗುತ್ತದೆ. ಈ ಓದೆತದಿಂದ ಸಿಂಹ ಚೆನ್ನಾಗಿಯೇ ಹಣ್ಣುಗಾಯಿ ನೀರುಗಾಯಿಯಾಗಿ ತನ್ನ ಬೇಟೆ ಕೈಚೆಲ್ಲಿ ಬಿಡುತ್ತದೆ. ಆಗ ಉಳಿದ ಸಿಂಹಗಳು ಸಹಿತ ತಮ್ಮ ಪ್ರಯತ್ನವನ್ನು ನಡುವೆಯೇ ಬಿಟ್ಟು ಬಿಡುತ್ತವೆ. ಇತ್ತ ಜಿರಾಫೆ ಆನಂದದಿಂದ ತನ್ನ ಬಳಗ ಸೇರಿಕೊಂಡ ಸುಂದರವಾದ ದೃಶ್ಯವನ್ನು ಕ್ಯಾಮೆರಾಮನ್ ತೋರಿಸಲು ಮರೆತಿಲ್ಲ.

ಈ ಸುಂದರವಾದ ವಿಡಿಯೋವನ್ನು ಟ್ವಿಟರ್ ನಲ್ಲಿ IFS ಆಫೀಸರ್ ಆದ ಸುಸಾಂತ್ ನಂದಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ.

Leave a Comment

Your email address will not be published. Required fields are marked *