“ನೀವು ನಿಮ್ಮ ಸಂಪತ್ತನ್ನು ಏಕೆ ದಾನ ಮಾಡುವುದಿಲ್ಲ..?” ಎಂದು ಟ್ರೋಲ್ ಮಾಡಿದವನಿಗೆ ಸಖತ್ ಉತ್ತರ ಕೊಟ್ಟು ಬಾಯಿ ಮುಚ್ಚಿಸಿದ ಅಮಿತಾಭ್!

ಬಾಲಿವುಡ್ ಮಹಾನಾಯಕ ಅಮಿತಾಭ್ ಅವರು ಮೊನ್ನೆಯಷ್ಟೇ ಕೊರೊನಾದಿಂದ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಈ ಕೊರೊನಾ ಕಾಲದಲ್ಲಿ ನಮಗೆ ನಿಮಗೆ ಎಲ್ಲರಿಗೂ ಗೊತ್ತಿದ್ದಂತೆ ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳು ಸರಕಾರಕ್ಕೆ, ಜನರಿಗೆ ವಿವಿಧ ರೀತಿಯಲ್ಲಿ ರಾತ್ರಿ ಹಗಲು ಸಹಾಯ ಮಾಡಿದ್ದನ್ನು ಕೇಳಿದ್ದೇವೆ, ಮತ್ತು ನೋಡಿದ್ದೇವೆ.

ಹೀಗಾಗಿ ಬಾಲಿವುಡ್ ಮಹಾನಾಯಕ ಅಮಿತಾಭ್ ಅವರಿಗೂ ಜನ ಅಥವಾ ನೆಟ್ಟಿಗರು ಒಂದೇ ಸಮನೆ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ, ನೀವು ಇಂಥ ಕೊರೊನ ಸಂಕಟದಲ್ಲಿ ಪರರಿಗೆ ಏಕೆ ಸಹಾಯ ಮಾಡುತ್ತಿಲ್ಲ? ಎಂದು. ಇಂಥದೇ ಒಂದು ಪ್ರಶ್ನೆ ಒಬ್ಬ ಟ್ರೋಲರ್ ಅಮಿತಾಭ್ ಬಚ್ಚನ್ ಅವರಿಗೆ ಕೇಳಿದ್ದಾನೆ. ನಿಮ್ಮ ವ್ಯಾಲೆಟ್ ಅಪಾರ ಪ್ರೇಮ ಮತ್ತು ಭಗವಂತನ ಕೃಪೆಯಿಂದ ಕೂಡಿದೆ. ನೀವು ಯಾಕೆ ಒಂದು ಉದಾಹರಣೆ ಪ್ರಸ್ತುತ ಪಡಿಸುವದಿಲ್ಲ? ಎಂದು ಕೇಳಿದ್ದಾನೆ. ಹೀಗೆ ಅಮಿತಾಭ್ ಅವರಿಗೆ ಮೊದಲ ಸಲವೇನು ಕೇಳಿಲ್ಲ. ಯಾವತ್ತಾದರೂ ಇಂಥ ಪ್ರಶ್ನೆಗಳು ಆಗಾಗ ಏಳುತ್ತಲೇ ಇರುತ್ತವೆ. ಮತ್ತು ಅಮಿತಾಭ್ ಹೆಚ್ಚಾಗಿ ಇಂಥ ಪ್ರಶ್ನೆಗಳಿಗೆ ಉತ್ತರ ಕೊಡಲು ಹೋಗುವದಿಲ್ಲ.

ಆದರೆ ಈ ಸಲ ಅಮಿತಾಭ್ ಅವರು ಸುಮ್ಮನೆ ಕೊಡದೆ ಈ ಲಾಕ್ ಡೌನ್ ಕಾಲದಲ್ಲಿ ತಾವು ಜನರಿಗಾಗಿ ಏನೇನು ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆ ಒಂದು ದೊಡ್ಡ ಲಿಸ್ಟನ್ನೇ ಬಿಡುಗಡೆ ಮಾಡಿದ್ದಾರೆ……..ನೀವು ನೋಡಿ.

ಅಮಿತಾಭ್ ಅವರು ತಮ್ಮ ಬ್ಲಾಗ್ ಮುಖಾಂತರ ತಾವು ಮಾಡಿದ ಸಹಾಯದ ಬಗ್ಗೆ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಒಂದು ಪೋರ್ಟ್ಫೋಲಿಯೋವನ್ನೇ ಸಾದರ ಪಡಿಸಿದ್ದಾರೆ. ಈ ಕೊರೊನ ಸಂಕಟದಲ್ಲಿ ಅಮಿತಾಭ್ ಅವರು ಎಲ್ಲರಿಗೂ ತಿಳಿದಂತೆ ಸುಖಾ ಸುಮ್ಮನೆ ಮನೆಯಲ್ಲಿ ಕುಳಿತು ಕಾಲಹರಣ ಮಾಡಿಲ್ಲ.

ಅವರು ಮಾಡಿದ ಕಾರ್ಯಗಳು- ಲಾಕ್ ಡೌನ್ ಸಮಯದಲ್ಲಿ ಅಮಿತಾಭ್ ಅವರು ಪ್ರತಿನಿತ್ಯ 5000 ಜನರಿಗೆ ಎರಡು ಹೊತ್ತು ಊಟ ನೀಡಿದ್ದಾರೆ. ಮುಂಬಯಿಯಿಂದ ಹೊರಟ 12,000 ಸಾವಿರ ವಲಸಿಗರಿಗೆ ಶೂ ಮತ್ತು ಚಪ್ಪಲ್ ಗಳನ್ನು ವಿತರಣೆ ಮಾಡಿದ್ದಾರೆ, ಜೊತೆಗೆ UP ಮತ್ತು ಬಿಹಾರಕ್ಕೆ ಹೋಗುವ ಜನರಿಗೆ ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ. ಇದನ್ನು ಬಿಟ್ಟು 15,000 PPE ಕಿಟ್ ಹಾಗೂ 10,000 ಮಾಸ್ಕ್ ಗಳನ್ನು ವಿತರಿಸಿದ್ದಾರೆ. ಇಷ್ಟೇ ಅಲ್ಲದೆ ದೆಹಲಿಯ ಸಿಖ್ ಸಮುದಾಯದ ಚೆರ್ಮನ್ ಅವರಿಗೂ ತುಂಬಾ ದಾನ ಮಾಡಿದ್ದಾರೆ, ಕಾರಣ ಅವರು ಬಡವರಿಗೆ ಸತತವಾಗಿ ಊಟವನ್ನು ಕೊಡುತ್ತಿದ್ದರು.

ಇನ್ನು ಸ್ವಲ್ಪ ಹಿಂದೆ ಹೋದರೆ 2009 ರ ಸಮಯದಲ್ಲಿ ಕೆಲಸಗಾರರಿಗಾಗಿ ಸಂಪೂರ್ಣ ರೈಲನ್ನೇ ಬುಕ್ ಮಾಡಿದ್ದರು. ಆಗ ಹೊಲಸು ರಾಜಕೀಯದ ಕಾರಣದಿಂದ ಟ್ರೆನ್ ಕ್ಯಾನ್ಸಲ್ ಆದಾಗ 6 ವಿಮಾನಗಳನ್ನು ಬುಕ್ ಮಾಡಿ 180 ಪ್ಯಾಸೆಂಜರ್ಸ್ ಗಳಿಗೆ ಅವರ ಮನೆಗಳಿಗೆ ತಲುಪಿಸಿದ್ದರು.

ಹೀಗೆ ಅಮಿತಾಭ್ ಅವರು ಒಂದಲ್ಲ ಅನೇಕ ಸಮಾಜಹಿತ ಕಾರ್ಯಗಳನ್ನು ಮೊದಲಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರು ಮಾಡಿದ ಕೆಲಸಗಳು ಒಮ್ಮೊಮ್ಮೆ ಸುದ್ದಿಯಾಗುತ್ತವೆ, ಒಮ್ಮೊಮ್ಮೆ ಆಗುವದಿಲ್ಲ. ಅಮಿತಾಭ್ ಅವರು ತಾವು ಮಾಡಿದ ಕೆಲಸಕ್ಕೆ ಫೋಕಸ್ ನಲ್ಲಿ ತರಲು ಇಷ್ಟಪಟ್ಟಿಲ್ಲ ಎಂಬುದು ಇದರ ಮೇಲಿಂದ ಗೊತ್ತಾಗುತ್ತದೆ. ಟ್ರೋಲರ್ ಮಾಡಿದ ಪ್ರಶ್ನೆಗೆ ಉತ್ತರವನ್ನು ಕೊಡುವ ಸಲುವಾಗಿ ಈ ರೀತಿ ಹೇಳಿದ್ದಾರೆ ಎನಿಸುತ್ತದೆ. ಏನೇ ಇರಲಿ ಅಮಿತಾಭ್ ಅವರು ಸಹಿತ ದಾನ-ಧರ್ಮಗಳಲ್ಲಿ ವಿಶ್ವಾಸವಿಟ್ಟವರು ಎಂಬುದು ಸುಳ್ಳಲ್ಲ. ಗೊತ್ತಿಲ್ಲದೆ ಕೆಲವೊಮ್ಮೆ ಅಮಿತಾಭ್ ಅಷ್ಟೇ ಅಲ್ಲ ಇಂಥ ಒಳ್ಳೊಳ್ಳೆಯ ಜನರಿಗೆ ಟ್ರೋಲರ್ಸ್ ಗಳು ಹೀಗೆಯೇ ಕಾಡುತ್ತಿರುತ್ತಾರೆ. ಆದ್ದರಿಂದ ಅಮಿತಾಭ್ ತನಗೆ ಟ್ರೋಲ್ ಮಾಡುವವರಿಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ.