ನೀವು 30 ದಿವಸಗಳವರೆಗೆ ಸ್ವಲ್ಪವೂ ಸಕ್ಕರೆ ತಿನ್ನದೆ ಇದ್ದರೆ ಏನಾಗುತ್ತದೆ? ತಿಳಿದುಕೊಳ್ಳಿ ಇದರ ಪರಿಣಾಮ ಒಳ್ಳೆಯದೊ-ಕೆಟ್ಟದ್ದೋ?
ನಿಮಗೆ ಒಂದು ವೇಳೆ ಡಯಾಬಿಟಿಸ್ ಇದ್ದರೆ ಅಥವಾ ಡಯಾಬಿಟಿಸ್ ಪೇಷಂಟ್ ಆಗುವ ಲಕ್ಷಣಗಳು ಕಂಡುಬರುತ್ತಿದ್ದರೆ ಸರ್ವಸಾಧಾರಣವಾಗಿ ಮಿಠಾಯಿಗಳನ್ನು ಸೇವಿಸಬೇಡಿ ಅಥವಾ ತಿನ್ನಬೇಡಿ ಎಂಬ ಸಲಹೆ ನೀಡಲಾಗುತ್ತದೆ. ಹೀಗಾದಾಗ ರುಚಿಕಟ್ಟಾದ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಲೇಬೇಕಾ? ಒಂದು ವೇಳೆ ವ್ಯಕ್ತಿಯೊಬ್ಬನು ಸತತ 30 ದಿವಸಗಳವರೆಗೆ ಸ್ವಲ್ಪವೂ ಮಿಠಾಯಿ ಅಥವಾ ಯಾವುದೇ ರೀತಿಯ ರುಚಿಕಟ್ಟಾದ ಪದಾರ್ಥಗಳನ್ನು ತಿನ್ನದೆ ಇದ್ದಾಗ ಅದು ಆ ವ್ಯಕ್ತಿಯ ಸಲುವಾಗಿ ಒಳ್ಳೆಯದೋ ಅಥವಾ ಕೆಟ್ಟದ್ದೋ? ಮತ್ತು ಆ ವ್ಯಕ್ತಿಯ ಮೇಲೆ ಯಾವ ಪರಿಣಾಮವಾಗುವುದು ಎಂಬಂತಹ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವನ್ನು ನಿಮಗಾಗಿ ತಂದಿದ್ದೇವೆ, ಓದಿ ಹಾಗಾದರೆ…
2019ರಲ್ಲಿ ಅಮೆರಿಕೆಯಲ್ಲಿ ಒಂದು ಸಮೀಕ್ಷೆ ಮಾಡಲಾಯಿತು. ಆ ಸಮೀಕ್ಷೆಯಲ್ಲಿ ವ್ಯಕ್ತಿಯೊಬ್ಬನು ಪ್ರತಿವರ್ಷ ಸರಾಸರಿ 28 ಕಿಲೋ ಸಕ್ಕರೆಯನ್ನು ತಿನ್ನುತ್ತಾನಂತೆ. ಇಷ್ಟೊಂದು ಸಕ್ಕರೆ ದೇಹಕ್ಕೆ ಅಪಾಯಕರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ವ್ಯಕ್ತಿ ದಿನವೊಂದಕ್ಕೆ ಆರರಿಂದ ಏಳು ಸ್ಪೂನ್ ಸಕ್ಕರೆ ತಿನ್ನಬೇಕು ಎಂದು ಹೇಳುತ್ತದೆ.
ಇದನ್ನೇ ಒಂದು ವೇಳೆ ನಾವು ಗ್ರಾಂನಲ್ಲಿ ಹೇಳುವುದಾದರೆ ದಿನವೊಂದಕ್ಕೆ 25 ರಿಂದ 30 ಗ್ರಾಂ ಸಕ್ಕರೆ ತಿನ್ನಬೇಕು. ಇದಕ್ಕಿಂತ ಜಾಸ್ತಿ ಸಕ್ಕರೆಯನ್ನು ಸೇವಿಸುತ್ತಿದ್ದರೆ ಅದು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಅವರು ಇದರ ಬಗ್ಗೆ ಹೀಗೆ ಹೇಳುತ್ತಾರೆ, ಮಹಿಳೆಯರು ಪುರುಷರಿಗಿಂತ ಕಡಿಮೆ ಸಕ್ಕರೆಯನ್ನು ಸೇವಿಸಬೇಕು. ಅವರ ಹೇಳಿಕೆಯ ಪ್ರಕಾರ ಪುರುಷರು ದಿನವೊಂದಕ್ಕೆ 150 ಕ್ಯಾಲೋರೀಸ್ ಸಕ್ಕರೆಯನ್ನು ಉಪಯೋಗಿಸುತ್ತಿದ್ದರೆ ಮಹಿಳೆಯರು ಮಾತ್ರ ಬರೀ 100 ಕ್ಯಾಲೋರೀಸ್ ಸಕ್ಕರೆಯನ್ನು ಉಪಯೋಗಿಸಬೇಕು.
ನಾವು 30 ದಿವಸ ಸಕ್ಕರೆಯನ್ನು ಸೇವಿಸದೇ ಇದ್ದಾಗ ಏನಾಗುವುದು?

ದಿನನಿತ್ಯ ಅನೇಕ ಪದಾರ್ಥಗಳ ಮುಖಾಂತರ ಸಕ್ಕರೆ ನಮ್ಮ ಹೊಟ್ಟೆಯನ್ನು ಸೇರುತ್ತದೆ. ಹೆಚ್ಚು ಕಡಿಮೆ ಪ್ರತಿಯೊಂದು ರುಚಿಕಟ್ಟಾದ ಪದಾರ್ಥದಲ್ಲಿ ಸಕ್ಕರೆಯನ್ನು ಉಪಯೋಗಿಸುತ್ತಾರೆ. ಸಕ್ಕರೆ ತುಂಬಾ ರುಚಿಯಾಗಿರುವದರಿಂದ ಇದು ವಿಷಕ್ಕಿಂತ ಕಡಿಮೆ ಏನಲ್ಲ. ರುಚಿ ಸ್ವಲ್ಪ ಸಮಯದವರೆಗೆ ಒಳ್ಳೆಯದು ಆದರೆ ನಂತರ ಮಾತ್ರ ತನ್ನ ಜೊತೆಗೆ ಅನೇಕ ರೋಗಗಳನ್ನು ತಂದು ಕೊಡುತ್ತದೆ. ಇಂಥ ಪರಿಸ್ಥಿತಿಯಲ್ಲಿ 30 ದಿವಸಗಳ ವರೆಗೆ ಸಕ್ಕರೆ ತಿನ್ನುವದನ್ನೆ ಬಿಟ್ಟರೆ ಆತನ ದೇಹಕ್ಕೆ ಅದು ಲಾಭವಾಗುವುದು. ಇದರಿಂದ ಏನರ್ಜಿಟಿಕ್ ಫೀಲ್ ಆಗುತ್ತದೆ. ಇದರಿಂದ ವ್ಯಕ್ತಿಯ ಕಿರಿಕಿರಿ ಮತ್ತು ದಣಿವು ಸಹ ಕಡಿಮೆಯಾಗುತ್ತದೆ.
ಸಕ್ಕರೆ ಸೇವನೆ ನಿಲ್ಲಿಸುವ ಯೋಗ್ಯ ಮಾರ್ಗ ಯಾವುದು…?
ಒಂದು ವೇಳೆ ನೀವು ಒಮ್ಮೆಲೆ ಸಕ್ಕರೆಯ ಸೇವನೆ ನಿಲ್ಲಿಸಿದರೆ ದೇಹದಲ್ಲಿ ಅಶಕ್ತತೆಯ ಅನುಭವ ಆಗುವದು. ಇದನ್ನು ತಪ್ಪಿಸಲು ಸಕ್ಕರೆಯ ಸೇವನೆಯನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತ ಹೋಗಬೇಕು. ಉದಾಹರಣೆಗಾಗಿ ಹೇಳುವದಾದರೆ, ನೀವು ಚಹಾದಲ್ಲಿ ಎರಡು ಚಮಚ ಸಕ್ಕರೆ ತೆಗೆದುಕೊಳ್ಳುತ್ತಿದ್ದರೆ ಮೊದಲು ಒಂದು ಚಮಚ ಆನಂತರ ಅರ್ಧ ಚಮಚ ಪ್ರಮಾಣದಲ್ಲಿ ಕಡಿಮೆ ಮಾಡುತ್ತಾ ಹೋಗಿ. ಆಮೇಲೆ ಸ್ವಲ್ಪ ಸ್ವಲ್ಪ ಮಾಡುತ್ತಾ ಸಂಪೂರ್ಣವಾಗಿ ನಿಲ್ಲಿಸಿಬಿಡಿ.

ಇದರ ಹೊರತಾಗಿ ನಾವು ಅನೇಕ ಹಣ್ಣುಗಳನ್ನು ಮತ್ತು ಧಾನ್ಯಗಳನ್ನು ಸೇವಿಸುವುದನ್ನು ಬಿಡಬಾರದು. ಏಕೆಂದರೆ ರುಚಿಯಾದ ಪದಾರ್ಥಗಳನ್ನು ತಿನ್ನುವುದನ್ನು ಒಮ್ಮೆಲೆ ತ್ಯಜಿಸಿದರೆ ದೇಹಕ್ಕೆ ಅದು ಮಾರಕವಾಗಬಹುದು. ರುಚಿಯಾದ ಪದಾರ್ಥಗಳನ್ನು ಸಂಪೂರ್ಣವಾಗಿ ತಿನ್ನುವುದನ್ನು ನಿಲ್ಲಿಸಿದ ನಂತರ ದೇಹವು ಕೊಬ್ಬಿನಿಂದ ಗ್ಲೂಕೋಸ್ ತಯಾರಿಸುವದಕ್ಕಾಗಿ ಕೇಟೊನ್ಸ್ ತಯಾರು ಮಾಡಲು ಪ್ರಾರಂಭಿಸುತ್ತದೆ. ಮತ್ತು ಈ ಕೆಟೋನ್ಸ್ ದೇಹದಲ್ಲಿಯ ಕೊಬ್ಬನ್ನು ಗ್ಲುಕೋಸನಲ್ಲಿ ರೂಪಾಂತರ ಮಾಡುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಕರಗಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಗೆ ಕೇಟೋಸಿಸ್ ಎನ್ನುತ್ತಾರೆ.